Home ಉದ್ಯೋಗ ವಾರ್ತೆ ಕೊಂಕಣ ರೈಲ್ವೆಯಲ್ಲಿ ಟ್ರೈನಿ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ: ಡಿಗ್ರಿ, ಡಿಪ್ಲೊಮಾ ಪಾಸ್ ಆದವರಿಗೆ ಸುವರ್ಣಾವಕಾಶ!
ಉದ್ಯೋಗ ವಾರ್ತೆದಾವಣಗೆರೆನವದೆಹಲಿಬೆಂಗಳೂರು

ಕೊಂಕಣ ರೈಲ್ವೆಯಲ್ಲಿ ಟ್ರೈನಿ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ: ಡಿಗ್ರಿ, ಡಿಪ್ಲೊಮಾ ಪಾಸ್ ಆದವರಿಗೆ ಸುವರ್ಣಾವಕಾಶ!

Share
ರೈಲ್ವೆ
Share

ಬೆಂಗಳೂರು: ಉದ್ಯೋಗಾಕಾಂಕ್ಷಿಗಳಿಗೆ ಇಲ್ಲಿದೆ ಒಂದು ಪ್ರಮುಖ ಸುದ್ದಿ. ಕೊಂಕಣ ರೈಲ್ವೆ ಕಾರ್ಪೊರೇಷನ್ ಲಿಮಿಟೆಡ್ (KRCL) 2026 ನೇ ಸಾಲಿನ ವಿವಿಧ ಟ್ರೈನಿ ಅಪ್ರೆಂಟಿಸ್ ಮತ್ತು ಇತರ ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆ ಹೊರಡಿಸಿದೆ.

ಒಟ್ಟು 203 ಹುದ್ದೆಗಳಿದ್ದು, ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರದ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶವಾಗಿದೆ.

ಹುದ್ದೆಗಳ ವಿವರ:

ಗ್ರಾಜುಯೇಟ್ ಅಪ್ರೆಂಟಿಸ್ (BE/B.Tech):

80 ಹುದ್ದೆಗಳು

ಟೆಕ್ನಿಷಿಯನ್ (ಡಿಪ್ಲೊಮಾ) ಅಪ್ರೆಂಟಿಸ್:

80 ಹುದ್ದೆಗಳು

ಜನರಲ್ ಸ್ಟ್ರೀಮ್ ಗ್ರಾಜುಯೇಟ್ಸ್:

30 ಹುದ್ದೆಗಳು

ಇತರ ಹುದ್ದೆಗಳು (ಅಕೌಂಟ್ಸ್ ಮತ್ತು ಇಂಜಿನಿಯರಿಂಗ್):

13 ಹುದ್ದೆಗಳು

ಪ್ರಮುಖ ದಿನಾಂಕಗಳು:

ಅರ್ಜಿ ಸಲ್ಲಿಸಲು ಆರಂಭದ ದಿನಾಂಕ: 20 ಫೆಬ್ರವರಿ 2026

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 21 ಮಾರ್ಚ್ 2026

ವಾಕ್-ಇನ್ ಇಂಟರ್ವ್ಯೂ (ಅಕೌಂಟ್ಸ್ ವಿಭಾಗ): 10 ರಿಂದ 13 ಮಾರ್ಚ್ 2026

ಅರ್ಜಿ ಶುಲ್ಕ:

ಸಾಮಾನ್ಯ ಮತ್ತು OBC ಅಭ್ಯರ್ಥಿಗಳಿಗೆ 100 ರೂ. ಶುಲ್ಕವಿದ್ದು, SC/ST/ಮಹಿಳೆ ಮತ್ತು ಈಡಬ್ಲ್ಯೂಎಸ್ (EWS) ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ. ಆಸಕ್ತರು ಕೊಂಕಣ ರೈಲ್ವೆಯ ಅಧಿಕೃತ ವೆಬ್‌ಸೈಟ್ konkanrailway.com ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.

Share

Leave a comment

Leave a Reply

Your email address will not be published. Required fields are marked *

Related Articles