Home ಕ್ರೈಂ ನ್ಯೂಸ್ ಪ್ರೇಮ ಪ್ರಕರಣದ ಸೇಡಿಗೆ ತಂದೆ ಮಗನಿಗೆ ಗನ್ ತೋರಿಸಿ ಬೆತ್ತಲೆಗೊಳಿಸಿ ಹಲ್ಲೆ: ಅದೇ ರಸ್ತೆಯಲ್ಲಿ ಆರೋಪಿಗಳ ಅರೆಬೆತ್ತಲೆ ಮೆರವಣಿಗೆ ಮಾಡಿದ ಪೊಲೀಸರು!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ಪ್ರೇಮ ಪ್ರಕರಣದ ಸೇಡಿಗೆ ತಂದೆ ಮಗನಿಗೆ ಗನ್ ತೋರಿಸಿ ಬೆತ್ತಲೆಗೊಳಿಸಿ ಹಲ್ಲೆ: ಅದೇ ರಸ್ತೆಯಲ್ಲಿ ಆರೋಪಿಗಳ ಅರೆಬೆತ್ತಲೆ ಮೆರವಣಿಗೆ ಮಾಡಿದ ಪೊಲೀಸರು!

Share
ತಂದೆ
Share

ಕೋಲ್ಕತ್ತಾ: ಕೋಲ್ಕತ್ತಾದ ಬೆಹಾಲಾ ಪ್ರದೇಶದಲ್ಲಿ ಅಪ್ರಾಪ್ತ ಬಾಲಕ ಹಾಗೂ ಆತನ ತಂದೆಯನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡಿಸಿದ್ದ ಪ್ರಕರಣದ ಪ್ರಮುಖ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದು, ಅದೇ ಸ್ಥಳದಲ್ಲಿ ಕರೆದೊಯ್ದು ತನಿಖೆ ಹಾಗೂ ಸ್ಥಳ ಮಹಜರು ನಡೆಸಿದ್ದಾರೆ.

ಅಪ್ರಾಪ್ತ ಬಾಲಕಿಯೊಂದಿಗೆ ಪ್ರೇಮದಲ್ಲಿದ್ದನೆಂಬ ಕಾರಣಕ್ಕೆ ಬಾಲಕನ ಕುಟುಂಬದ ಮೇಲೆ ಅಮಾನವೀಯ ಹಲ್ಲೆ ನಡೆಸಿ, ಗನ್ ತೋರಿಸಿ ಬೆದರಿಸಿ ಬೆತ್ತಲೆಗೊಳಿಸಿ ರಸ್ತೆಯಲ್ಲಿ ಮೆರವಣಿಗೆ ಮಾಡಿಸಲಾಗಿತ್ತು. ಈ ಕೃತ್ಯದ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಪೊಲೀಸರು ತ್ವರಿತ ಕಾರ್ಯಾಚರಣೆ ನಡೆಸಿ ಬಾಲಕಿಯ ತಂದೆ, ಮಾವ ಹಾಗೂ ಹಿರಿಯ ಸಹೋದರನನ್ನು ಬಂಧಿಸಿದ್ದಾರೆ.

ಘಟನೆಯ ವಿವರ: ಅಪ್ರಾಪ್ತ ಬಾಲಕಿ ಹಾಗೂ ಬಾಲಕ ಭೇಟಿಯಾದಾಗ ಸಿಕ್ಕಿಬಿದ್ದ ಹಿನ್ನೆಲೆಯಲ್ಲಿ, ಬಾಲಕಿಯ ಕುಟುಂಬಸ್ಥರು ಬಾಲಕನ ತಂದೆಯನ್ನೂ ಸ್ಥಳಕ್ಕೆ ಕರೆಸಿ ಗನ್ ತೋರಿಸಿ ಬೆದರಿಸಿ, ಮೂವರನ್ನು ಬೆತ್ತಲೆಯಾಗಿ 50 ಮೀಟರ್‌ಗಳಷ್ಟು ದೂರ ನಗ್ನವಾಗಿ ನಡೆಯುವಂತೆ ದೌರ್ಜನ್ಯ ಎಸಗಿದ್ದರು.

ಪೊಲೀಸರಿಂದ ಕಠಿಣ ತನಿಖೆ: ಕಾನೂನು ಕೈಗೆತ್ತಿಕೊಂಡ ಆರೋಪಿಗಳನ್ನು ಅದೇ ಖುದಿರಾಮ್ ಪಲ್ಲಿ ಪ್ರದೇಶಕ್ಕೆ ಕರೆತಂದ ಪೊಲೀಸರು, ಶರ್ಟ್ ಇಲ್ಲದೆ, ಬರಿಗಾಲಿನಲ್ಲಿ, ಸೊಂಟಕ್ಕೆ ಹಗ್ಗ ಕಟ್ಟಿ ಅದೇ ರಸ್ತೆಯಲ್ಲಿ ನಡಿಗೆ ಮಾಡಿಸುವ ಮೂಲಕ ಸ್ಥಳ ಮಹಜರು ಕೈಗೊಂಡಿದ್ದಾರೆ.

ಮಹಿಳೆಯರ ಮೇಲೂ ಹಲ್ಲೆ: ಈ ಗಲಾಟೆಯಲ್ಲಿ ಬಾಲಕನ ತಾಯಿಯ ಮೇೆಯೂ ಹಲ್ಲೆ ನಡೆದಿದ್ದು, ಸಂತ್ರಸ್ತರಿಗೆ ವೈದ್ಯಕೀಯ ಪರೀಕ್ಷೆಗಳನ್ನು ನಡೆಸಲಾಗಿದೆ.

ಈ ಹೇಯ ಕೃತ್ಯ ಎಸಗಿರುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕ ವಲಯದಲ್ಲಿ ತೀವ್ರ ಆಗ್ರಹ ಕೇಳಿಬಂದಿದೆ.

Share

Leave a comment

Leave a Reply

Your email address will not be published. Required fields are marked *

Related Articles