ಪುಣೆ: ಲೋಹಗಢ್ ಕೋಟೆಯಿಂದ ತಳ್ಳಿ ಉದ್ಯಮಿ ಕೇತನ್ ಅಗರ್ವಾಲ್ ಅವರನ್ನು ಹತ್ಯೆ ಮಾಡಲಾದ ಬೆನ್ನಲ್ಲೇ, ಅವರ ಕುಟುಂಬದಲ್ಲಿ ಮತ್ತೊಂದು ದಾರುಣ ಘಟನೆ ಸಂಭವಿಸಿದೆ. ಮೊಮ್ಮಗನ ಸಾವಿನ ಆಘಾತದಿಂದ ತೀವ್ರವಾಗಿ ನೊಂದಿದ್ದ ಕೇತನ್ ತಾತ ದೇವಿಚಂದ್ ಅಗರ್ವಾಲ್ (71) ಅವರು ಶನಿವಾರ ರಾತ್ರಿ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಜೂನ್ 18 ರಂದು ಲೋಹಗಢ್ ಕೋಟೆಯಲ್ಲಿ ನಡೆದಿದ್ದ ಕೇತನ್ ಅಗರ್ವಾಲ್ ಕೊಲೆ ಪ್ರಕರಣ ದೇಶಾದ್ಯಂತ ಭಾರಿ ಸಂಚಲನ ಮೂಡಿಸಿತ್ತು. ಮದುವೆ ಇಷ್ಟವಿಲ್ಲದಿದ್ದರೂ ಕೌಟುಂಬಿಕ ಒತ್ತಡಕ್ಕೆ ಮಣಿದಿದ್ದ ಕೇತನ್ ನಿಶ್ಚಿತಾರ್ಥದ ವಧು ಸಿಯಾ ಗೋಯಲ್ ಮತ್ತು ಆಕೆಯ ಸಹಚರ ಚೇತನ್ ಚೌಧರಿ ಸೇರಿ ಈ ಕೃತ್ಯ ಎಸಗಿದ್ದಾರೆ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮೊಮ್ಮಗ ನಿಗೂಢವಾಗಿ ಸಾವನ್ನಪ್ಪಿದ ದಿನದಿಂದ ತಾತ ದೇವಿಚಂದ್ ತೀವ್ರವಾಗಿ ಅಸ್ವಸ್ಥರಾಗಿದ್ದರು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ತನಿಖೆ ತೀವ್ರಗೊಳಿಸಿದ ಪುಣೆ ಪೊಲೀಸ್:
ಪ್ರಕರಣದ ತನಿಖೆ ನಡೆಸುತ್ತಿರುವ ಪುಣೆ ಗ್ರಾಮಾಂತರ ಪೊಲೀಸರು, ಆರೋಪಿಗಳಾದ ಸಿಯಾ ಮತ್ತು ಚೇತನ್ ಚೌಧರಿ ಪುಣೆಯ ಲುಲ್ಲಾನಗರ್ ಮೈದಾನದಲ್ಲಿ ಕೇತನ್‌ನನ್ನು ತಳ್ಳುವ ಬಗ್ಗೆ ಮುಂಚಿತವಾಗಿಯೇ ತಾಲೀಮು (ರಿಹರ್ಸಲ್) ನಡೆಸಿದ್ದರು ಎಂಬುದನ್ನು ಪತ್ತೆಹಚ್ಚಿದ್ದಾರೆ. ಇತ್ತೀಚೆಗಷ್ಟೇ ಡಮ್ಮಿ ಬಳಸಿ ಅಪರಾಧ ಸ್ಥಳದ ಮರುಸೃಷ್ಟಿ (Crime Scene Recreation) ಮಾಡಲಾಗಿದ್ದು, ತನಿಖೆ ಚುರುಕಿನಿಂದ ಸಾಗಿದೆ.
- cardiac arrest due to grief
- Chetan Chaudhary crime scene recreation
- Devichand Agarwal death
- Ketan Agarwal murder case
- Lohagad Fort murder investigation
- Lonavala rural police investigation
- Pune crime news
- Siya Goyal arrested
- ಆಘಾತದಿಂದ ತಾತನ ಸಾವು
- ಕೇತನ್ ಅಗರ್ವಾಲ್ ಕೊಲೆ ಪ್ರಕರಣ
- ಚೇತನ್ ಚೌಧರಿ
- ದೇವಿಚಂದ್ ಅಗರ್ವಾಲ್ ನಿಧನ
- ಪುಣೆ ಕ್ರೈಂ ನ್ಯೂಸ್
- ಲೋನಾವಾಲಾ ಪೊಲೀಸ್ ತನಿಖೆ
- ಲೋಹಗಢ್ ಕೋಟೆ ಹತ್ಯೆ ತನಿಖೆ
- ಸಿಯಾ ಗೋಯಲ್ ಬಂಧನ





Leave a comment