Home ಉದ್ಯೋಗ ವಾರ್ತೆ KEA KREIS Recruitment 2026: ಕರ್ನಾಟಕ ವಸತಿ ಶಾಲೆಗಳಲ್ಲಿ 1087 ಶಿಕ್ಷಕರ ಹುದ್ದೆಗಳ ಭರ್ಜಿಗೆ ಅಧಿಸೂಚನೆ; ಅರ್ಜಿ ಸಲ್ಲಿಕೆ ಜುಲೈ 15 ರಿಂದ ಆರಂಭ!
ಉದ್ಯೋಗ ವಾರ್ತೆದಾವಣಗೆರೆಬೆಂಗಳೂರು

KEA KREIS Recruitment 2026: ಕರ್ನಾಟಕ ವಸತಿ ಶಾಲೆಗಳಲ್ಲಿ 1087 ಶಿಕ್ಷಕರ ಹುದ್ದೆಗಳ ಭರ್ಜಿಗೆ ಅಧಿಸೂಚನೆ; ಅರ್ಜಿ ಸಲ್ಲಿಕೆ ಜುಲೈ 15 ರಿಂದ ಆರಂಭ!

Share
ಶಾಲೆ
Share

ಬೆಂಗಳೂರು: ಕರ್ನಾಟಕದ ವಸತಿ ಶಾಲೆಗಳಲ್ಲಿ ವೃತ್ತಿಜೀವನವನ್ನು ರೂಪಿಸಿಕೊಳ್ಳಲು ಬಯಸುವ ಶಿಕ್ಷಕ ಆಕಾಂಕ್ಷಿಗಳಿಗೆ ಸುವರ್ಣಾವಕಾಶ ಎದುರಾಗಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ (KREIS) ಅಡಿಯಲ್ಲಿ ಬರುವ ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚೆನ್ನಮ್ಮ, ಅಟಲ್ ಬಿಹಾರಿ ವಾಜಪೇಯಿ, ಶ್ರೀಮತಿ ಇಂದಿರಾ ಗಾಂಧಿ ಮತ್ತು ಡಾ. ಬಿ.ಆರ್. ಅಂಬೇಡ್ಕರ್ ವಸತಿ ಶಾಲೆಗಳಲ್ಲಿ ಖಾಲಿ ಇರುವ ಒಟ್ಟು 1,087 ವಿವಿಧ ಶಿಕ್ಷಕರ ಹುದ್ದೆಗಳ ಭರ್ಜಿಗೆ ಭರ್ಜರಿ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿದೆ.

ಹುದ್ದೆಗಳ ವಿವರ ಮತ್ತು ಕೆಡರ್ ಮಾಹಿತಿ: ಈ ನೇಮಕಾತಿಯಲ್ಲಿ ಒಟ್ಟು ಎರಡು ಪ್ರತ್ಯೇಕ ಅಧಿಸೂಚನೆಗಳನ್ನು ಹೊರಡಿಸಲಾಗಿದ್ದು, ಹುದ್ದೆಗಳನ್ನು ಈ ಕೆಳಗಿನಂತೆ ವಿಂಗಡಿಸಲಾಗಿದೆ:

  1. ಉಳಿಕೆ ಮೂಲ ವೃಂದ (RPC Cadre): 767 ಹುದ್ದೆಗಳು

  2. ಕಲ್ಯಾಣ ಕರ್ನಾಟಕ ವೃಂದ (KK Cadre): 320 ಹುದ್ದೆಗಳು

ಬೋಧನಾ ವಿಷಯಗಳು: ಕನ್ನಡ, ಇಂಗ್ಲಿಷ್, ಹಿಂದಿ, ಗಣಿತ, ವಿಜ್ಞಾನ, ಸಮಾಜ ವಿಜ್ಞಾನ, ಕಂಪ್ಯೂಟರ್ ಸೈನ್ಸ್ (RPC ಮಾತ್ರ) ಮತ್ತು ದೈಹಿಕ ಶಿಕ್ಷಣ ಶಿಕ್ಷಕರು ಹಾಗೂ ಡ್ರಾಯಿಂಗ್ ಶಿಕ್ಷಕರ (KK ಮಾತ್ರ) ಹುದ್ದೆಗಳು ಇದರಲ್ಲಿ ಸೇರಿವೆ.

ವಯೋಮಿತಿ ಮತ್ತು ಸಂಬಳ:

  • ವಯೋಮಿತಿ: ಕನಿಷ್ಠ 18 ವರ್ಷ ತುಂಬಿರಬೇಕು. ಸಿವಿಲ್ ಸೇವೆಗಳ ನಿಯಮದ ವಿಶೇಷ ಸಡಿಲಿಕೆಯೊಂದಿಗೆ ಗರಿಷ್ಠ ವಯೋಮಿತಿ ಸಾಮಾನ್ಯ ವರ್ಗಕ್ಕೆ 45 ವರ್ಷ, ಪ್ರವರ್ಗ 2A/2B/3A/3B ಅಭ್ಯರ್ಥಿಗಳಿಗೆ 48 ವರ್ಷ ಹಾಗೂ SC/ST/Cat-1 ಅಭ್ಯರ್ಥಿಗಳಿಗೆ 50 ವರ್ಷಗಳವರೆಗೆ ನಿಗದಿಪಡಿಸಲಾಗಿದೆ.

  • ವೇತನ ಶ್ರೇಣಿ: ಬಹುತೇಕ ಶಿಕ್ಷಕರ ಹುದ್ದೆಗಳಿಗೆ ರೂ. 54,175 ರಿಂದ ರೂ. 99,400 ವರೆಗೆ (2024ರ ಪರಿಷ್ಕೃತ ವೇತನ ಶ್ರೇಣಿ) ಇರಲಿದೆ. ಡ್ರಾಯಿಂಗ್ ಶಿಕ್ಷಕರಿಗೆ ರೂ. 49,050 ರಿಂದ ರೂ. 92,500 ವೇತನ ಇರಲಿದೆ.

ಪ್ರಮುಖ ಅರ್ಹತೆಗಳು: ಅಭ್ಯರ್ಥಿಗಳು ಸಂಬಂಧಿಸಿದ ವಿಷಯಗಳಲ್ಲಿ ಪದವಿ ಮತ್ತು ಬಿ.ಎಡ್ (B.Ed) ಮುಗಿಸಿರಬೇಕು. ಇದರೊಂದಿಗೆ ಭಾಷಾ ಮತ್ತು ಕೋರ್ ವಿಷಯಗಳ ಶಿಕ್ಷಕರ ಹುದ್ದೆಗಳಿಗೆ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ (TET Paper 2) ಅಥವಾ ಸಿಟಿಇಟಿ (CTET) ಪಾಸ್ ಆಗಿರುವುದು ಕಡ್ಡಾಯವಾಗಿದೆ.

ಪ್ರಮುಖ ದಿನಾಂಕಗಳು:

  • ಆನ್‌ಲೈನ್ ಅರ್ಜಿ ಆರಂಭ: ಜುಲೈ 15, 2026

  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಆಗಸ್ಟ್ 13, 2026

  • ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನ: ಆಗಸ್ಟ್ 14, 2026

ಅರ್ಹ ಆಕಾಂಕ್ಷಿಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ವೆಬ್‌ಸೈಟ್ cetonline.karnataka.gov.in/kea ಮೂಲಕ ಆನ್‌ಲೈನ್‌ನಲ್ಲಿ ಮಾತ್ರ ಅರ್ಜಿ ಸಲ್ಲಿಸಬಹುದಾಗಿದೆ. ಯಾವುದೇ ಸಂದರ್ಶನ ಇರುವುದಿಲ್ಲ, ಸ್ಪರ್ಧಾತ್ಮಕ ಪರೀಕ್ಷೆಯ ಮೆರಿಟ್ ಆಧಾರದ ಮೇಲೆ ಆಯ್ಕೆ ನಡೆಯಲಿದೆ.

Share

Leave a comment

Leave a Reply

Your email address will not be published. Required fields are marked *