Home ದಾವಣಗೆರೆ ಕರ್ನಾಟಕದಲ್ಲಿ ನಂದಿನಿ ಹಾಲಿನ ದರ ಲೀಟರ್‌ಗೆ 8 ರೂ. ಏರಿಕೆಗೆ ಜನರ ಆಕ್ರೋಶ: ರೈತರ ಹಿತರಕ್ಷಣೆಗಾಗಿ ಈ ನಿರ್ಧಾರವೆಂದ್ರು ಸಿಎಂ ಡಿಕೆ ಶಿವಕುಮಾರ್
ದಾವಣಗೆರೆನವದೆಹಲಿಬೆಂಗಳೂರುವಾಣಿಜ್ಯ

ಕರ್ನಾಟಕದಲ್ಲಿ ನಂದಿನಿ ಹಾಲಿನ ದರ ಲೀಟರ್‌ಗೆ 8 ರೂ. ಏರಿಕೆಗೆ ಜನರ ಆಕ್ರೋಶ: ರೈತರ ಹಿತರಕ್ಷಣೆಗಾಗಿ ಈ ನಿರ್ಧಾರವೆಂದ್ರು ಸಿಎಂ ಡಿಕೆ ಶಿವಕುಮಾರ್

Share
ದರ
Share

ಬೆಂಗಳೂರು: ರಾಜ್ಯದಲ್ಲಿ ಎದುರಾಗಿರುವ ತೀವ್ರ ಬರಗಾಲ ಹಾಗೂ ಹೆಚ್ಚುತ್ತಿರುವ ಉತ್ಪಾದನಾ ವೆಚ್ಚದ ಹಿನ್ನೆಲೆಯಲ್ಲಿ, ಕರ್ನಾಟಕ ಸರ್ಕಾರವು ಎಲ್ಲಾ ವರ್ಗದ ಹಾಲಿನ ದರವನ್ನು ಪ್ರತಿ ಲೀಟರ್‌ಗೆ ರೂ. 8 ರಷ್ಟು ಹೆಚ್ಚಿಸಿ ಮಹತ್ವದ ಆದೇಶ ಹೊರಡಿಸಿದೆ. ನವೆಂಬರ್ 1 ರಿಂದ ಪರಿಷ್ಕೃತ ದರಗಳು ಜಾರಿಗೆ ಬಂದಿದ್ದು, ರೈತರ ಜೀವನಮಟ್ಟವನ್ನು ಕಾಪಾಡಲು ಹಾಗೂ ಹೈನುಗಾರಿಕೆಯನ್ನು ಉಳಿಸಲು ಈ ದರ ಏರಿಕೆ ಅನಿವಾರ್ಯವಾಗಿತ್ತು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.

ಹಾಲಿನ ಉತ್ಪಾದನೆ ಕುಸಿದಿರುವುದು ಮತ್ತು ನೆರೆಯ ರಾಜ್ಯಗಳಿಗೆ ಹಾಲು ಕಳ್ಳಸಾಗಣೆಯಾಗುವುದನ್ನು ತಡೆಯುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ದರ ಏರಿಕೆಯಿಂದ ಬರುವ ಹೆಚ್ಚುವರಿ ಹಣದಲ್ಲಿ ರೂ. 7 ನೇರವಾಗಿ ರೈತರ ಕೈ ಸೇರಲಿದ್ದು, ಸರ್ಕಾರದ ಪ್ರೋತ್ಸಾಹಧನ ಸೇರಿದಂತೆ ರೈತರಿಗೆ ಪ್ರತಿ ಲೀಟರ್‌ಗೆ ರೂ. 47 ಸಿಗಲಿದೆ ಎಂದು ತಿಳಿಸಿದ್ದಾರೆ.

ರೈತರಿಗೆ ನೇರ ಲಾಭ: ಪ್ರತಿ ಲೀಟರ್ ಏರಿಕೆಯಲ್ಲಿ ರೂ. 7 ನೇರವಾಗಿ ರೈತರಿಗೆ ಸಿಗಲಿದ್ದು, ಖರೀದಿ ದರ ರೂ. 35 ರಿಂದ ರೂ. 42 ಕ್ಕೆ ಏರಿಕೆಯಾಗಿದೆ. ಸರ್ಕಾರದ ರೂ. 5 ಪ್ರೋತ್ಸಾಹಧನ ಸೇರಿ ಒಟ್ಟು ರೂ. 47 ಲಭ್ಯವಾಗಲಿದೆ.

ಆರ್ಥಿಕ ನೆರವು: ರಾಜ್ಯದ 28.84 ಲಕ್ಷಕ್ಕೂ ಅಧಿಕ ಡೈರಿ ರೈತರಿಗೆ ವಾರ್ಷಿಕ ರೂ. 1,850 ಕೋಟಿಯಿಂದ ರೂ. 2,100 ಕೋಟಿವರೆಗೆ ಹೆಚ್ಚುವರಿ ಆದಾಯ ದೊರೆಯಲಿದೆ.

ನಂದಿನಿ ಕೈಗೆಟುಕುವ ಬೆಲೆ: ದರ ಏರಿಕೆಯ ನಂತರವೂ ನಂದಿನಿ ಹಾಲು ಇAತಹ ಇತರೆ ಪ್ರಮುಖ ರಾಷ್ಟ್ರೀಯ ಬ್ರಾಂಡ್‌ಗಳಿಗಿಂತ ಗ್ರಾಹಕರಿಗೆ ಕಡಿಮೆ ದರದಲ್ಲಿ ಸಿಗಲಿದೆ.

ಬರಗಾಲದ ಸಂಕಷ್ಟದಲ್ಲೂ ಗೋಮಾತೆಯ ರಕ್ಷಣೆ ಮತ್ತು ರೈತರ ಆರ್ಥಿಕ ಸಬಲೀಕರಣಕ್ಕಾಗಿ ಈ ದರ ಪರಿಷ್ಕರಣೆ ಮಾಡಲಾಗಿದೆ ಎಂದು ಸರ್ಕಾರ ಸಮರ್ಥಿಸಿಕೊಂಡಿದೆ.

Share

Leave a comment

Leave a Reply

Your email address will not be published. Required fields are marked *

Recent Posts

Recent Comments

No comments to show.
Related Articles