ಬೆಂಗಳೂರು: ರಾಜ್ಯದ ಲಕ್ಷಾಂತರ ಮಧ್ಯಮ ವರ್ಗದ ಮನೆಗಳಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಸರ್ಕಾರ ಭರ್ಜರಿ ಗುಡ್ ನ್ಯೂಸ್ ನೀಡಿದೆ. ಹಲವು ವರ್ಷಗಳಿಂದ ಒಸಿ (Occupancy Certificate) ಮತ್ತು ಸಿಸಿ (Completion Certificate) ಸಮಸ್ಯೆಯಿಂದಾಗಿ ಕಾಯಂ ಕರೆಂಟ್ ಸಿಗದೇ, ದುಬಾರಿ ತಾತ್ಕಾಲಿಕ/ವಾಣಿಜ್ಯ ದರದಲ್ಲಿ ಬಿಲ್ ಪಾವತಿಸುತ್ತಿದ್ದ ಮನೆಗಳಿಗೆ ಇಂದಿನಿಂದ ಶಾಶ್ವತ ವಿದ್ಯುತ್ ಸಂಪರ್ಕ ಕಲ್ಪಿಸಲು ಸರ್ಕಾರ ಐತಿಹಾಸಿಕ ತೀರ್ಮಾನ ಕೈಗೊಂಡಿದೆ.
ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ಡಿ.ಕೆ. ಶಿವಕುಮಾರ್ ಅವರು ಜನಸಾಮಾನ್ಯರ ಈ ಬಹುಕಾಲದ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಲು ಮುಂದಾಗಿದ್ದು, ಇದರಿಂದ ರಾಜ್ಯದ ಸುಮಾರು 1.54 ಲಕ್ಷ ಮನೆಗಳಿಗೆ ನೇರ ಲಾಭ ಸಿಗಲಿದೆ.
ಯಾರಿಗೆ ಅನ್ವಯಿಸುತ್ತೆ? ಸರ್ಕಾರದ ಪ್ರಮುಖ ಷರತ್ತುಗಳು ಇಲ್ಲಿವೆ: ಕೇವಲ ನಿಯಮ ಉಲ್ಲಂಘನೆಯಾಗಿದೆ ಎಂಬ ಕಾರಣಕ್ಕೆ ಎಲ್ಲಾ ಕಟ್ಟಡಗಳಿಗೂ ಈ ನಿಯಮ ಅನ್ವಯಿಸುವುದಿಲ್ಲ. ನಗರಾಭಿವೃದ್ಧಿ ಇಲಾಖೆ ಹೊರಡಿಸಿರುವ ಮಾರ್ಗಸೂಚಿಯ ಅನ್ವಯ ಈ ಕೆಳಗಿನ ಷರತ್ತುಗಳನ್ನು ವಿಧಿಸಲಾಗಿದೆ:
ನಿವೇಶನದ ಮಿತಿ: ಗರಿಷ್ಠ 2,400 ಚದರ ಅಡಿ ವರೆಗಿನ ನಿವೇಶನದಲ್ಲಿ ಕಟ್ಟಿರುವ ವಸತಿ ಕಟ್ಟಡಗಳಿಗೆ ಮಾತ್ರ ಇದು ಅನ್ವಯ.
ಮಹಡಿಗಳ ಮಿತಿ: ಗ್ರೌಂಡ್ + 3 ಮಹಡಿಗಳು ಅಥವಾ ಸ್ಟಿಲ್ಟ್ + 4 ಮಹಡಿಗಳ ಮಿತಿಯಿರುವ ಮನೆಗಳಿಗೆ ಮಾತ್ರ ಸೌಲಭ್ಯ.
ಪ್ಲಾನ್ ಉಲ್ಲಂಘನೆ: ಮಂಜೂರಾದ ನಕ್ಷೆಗಿಂತ (Sanctioned Plan) ಗರಿಷ್ಠ ಶೇ. 20 ರಷ್ಟು ಮಾತ್ರ ಉಲ್ಲಂಘನೆ ಇರಬೇಕು.
ಅರ್ಜಿ ದಿನಾಂಕ: ಮೇ 31, 2026 ಕ್ಕಿಂತ ಮೊದಲು ಅರ್ಜಿ ಸಲ್ಲಿಸಿರಬೇಕು ಎಂಬ ಷರತ್ತು ವಿಧಿಸಲಾಗಿದೆ.
ಕಾರ್ಯಪ್ರವೃತ್ತರಾದ ಎಸ್ಕಾಂ ಅಧಿಕಾರಿಗಳು:
ಸರ್ಕಾರದ ಆದೇಶ ಹೊರಬೀಳುತ್ತಿದ್ದಂತೆ ಬೆಸ್ಕಾಂ (BESCOM) ಸೇರಿದಂತೆ ರಾಜ್ಯದ ಎಲ್ಲಾ ಎಸ್ಕಾಂ ಅಧಿಕಾರಿಗಳು ಹಾಗೂ ಸಿಬ್ಬಂದಿ ಅಲರ್ಟ್ ಆಗಿದ್ದಾರೆ. ಬಾಕಿ ಉಳಿದಿರುವ ತಾತ್ಕಾಲಿಕ ವಿದ್ಯುತ್ ಸಂಪರ್ಕಗಳನ್ನು ಶಾಶ್ವತ ಸಂಪರ್ಕಗಳಾಗಿ ಪರಿವರ್ತಿಸುವ ಕಾರ್ಯಕ್ಕೆ ಅಧಿಕೃತವಾಗಿ ಚಾಲನೆ ನೀಡಲಾಗಿದೆ. ಇಲಾಖೆಯ ಮಾರ್ಗಸೂಚಿಯಂತೆ ಅಧಿಕಾರಿಗಳು ಸ್ಥಳ ಪರಿಶೀಲನೆ (Physical Verification) ನಡೆಸಿ ಕಾಯಂ ವಿದ್ಯುತ್ ಸಂಪರ್ಕ ಕಲ್ಪಿಸಲಿದ್ದಾರೆ. ಇದರಿಂದಾಗಿ ಪ್ರತಿ ತಿಂಗಳು ದುಬಾರಿ ಕರೆಂಟ್ ಬಿಲ್ ಕಟ್ಟಿ ಸುಸ್ತಾಗಿದ್ದ ಮಧ್ಯಮ ವರ್ಗದ ಜನ ನಿಟ್ಟುಸಿರು ಬಿಡುವಂತಾಗಿದೆ.
- 1.5 lakh houses electricity
- Bangalore power supply news
- BESCOM temporary to permanent power
- CM DK Shivakumar
- electricity bill reduction
- Escoms physical verification
- Karnataka government relief
- OC CC issue solved
- Permanent electricity connection
- residential building guidelines
- urban development department karnataka
- ಉಚಿತ ವಿದ್ಯುತ್
- ಒಸಿ ಸಿಸಿ ಸಮಸ್ಯೆ
- ಕರೆಂಟ್ ಬಿಲ್ ವಿನಾಯಿತಿ
- ಕರ್ನಾಟಕ ಬ್ರೇಕಿಂಗ್ ನ್ಯೂಸ್
- ಕರ್ನಾಟಕ ಸರ್ಕಾರ
- ತಾತ್ಕಾಲಿಕ ವಿದ್ಯುತ್ ಸಂಪರ್ಕ
- ನಗರಾಭಿವೃದ್ಧಿ ಇಲಾಖೆ ಮಾರ್ಗಸೂಚಿ
- ಬೆಸ್ಕಾಂ ಗುಡ್ ನ್ಯೂಸ್
- ವಸತಿ ಕಟ್ಟಡ ನಿಯಮಾವಳಿ
- ಶಾಶ್ವತ ವಿದ್ಯುತ್ ಸಂಪರ್ಕ
- ಸಿಎಂ ಡಿ ಕೆ ಶಿವಕುಮಾರ್





Leave a comment