Home ಕ್ರೈಂ ನ್ಯೂಸ್ ನನ್ನ ಹೋರಾಟ ಮಹಿಳಾ ಸಬಲೀಕರಣ ಪರ, ಎ.ಪಿ. ಅಬೂಬಕ್ಕರ್ ಮುಸ್ಲಿಯಾರ್ ರಂಥ ಹಿರಿಯ ವಿಧ್ವಾಂಸರ ಟಾರ್ಗೆಟ್, ವೈಯಕ್ತಿಕ ಅಟ್ಯಾಕ್ ಒಪ್ಪಲ್ಲ: ಶಾಸಕಿ ಫಾತಿಮಾ ತಹ್ಲಿಯಾ ಅಚ್ಚರಿ ಅಭಿಮತ!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ನನ್ನ ಹೋರಾಟ ಮಹಿಳಾ ಸಬಲೀಕರಣ ಪರ, ಎ.ಪಿ. ಅಬೂಬಕ್ಕರ್ ಮುಸ್ಲಿಯಾರ್ ರಂಥ ಹಿರಿಯ ವಿಧ್ವಾಂಸರ ಟಾರ್ಗೆಟ್, ವೈಯಕ್ತಿಕ ಅಟ್ಯಾಕ್ ಒಪ್ಪಲ್ಲ: ಶಾಸಕಿ ಫಾತಿಮಾ ತಹ್ಲಿಯಾ ಅಚ್ಚರಿ ಅಭಿಮತ!

Share
ಫಾತಿಮಾ ತಹ್ಲಿಯಾ
Share

ತಿರುವನಂತಪುರ: ಕೇರಳದಲ್ಲಿ ಇಸ್ಲಾಮಿಕ್ ವಿದ್ವಾಂಸ, ಸಮಸ್ತ ಕೇರಳ ಜಿಮಿಯತ್ತುಲ್ ಉಲಮಾದ ಪ್ರಧಾನ ಕಾರ್ಯದರ್ಶಿ ಎ.ಪಿ. ಅಬೂಬಕ್ಕರ್ ಮುಸ್ಲಿಯಾರ್ ಅವರು ಮಹಿಳೆಯರ ಸಾರ್ವಜನಿಕ ಪ್ರವೇಶ ಮತ್ತು ಸ್ವಾತಂತ್ರ್ಯದ ಕುರಿತು ನೀಡಿದ ವಿವಾದಾತ್ಮಕ ಹೇಳಿಕೆಯು ರಾಜಕೀಯ ಮತ್ತು ಧರ್ಮ ರಂಗದಲ್ಲಿ ತೀವ್ರ ಚರ್ಚೆಗೆ ದಾರಿ ಮಾಡಿಕೊಟ್ಟಿದೆ. ಈ ಬೆಳವಣಿಗೆಯ ನಡುವೆ, ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್‌ನ ಏಕೈಕ ಮಹಿಳಾ ಶಾಸಕಿ ಫಾತಿಮಾ ತಹ್ಲಿಯಾ ಅವರು ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

ವಿವಾದದ ಹಿನ್ನೆಲೆ ಏನು?

ಇತ್ತೀಚೆಗೆ ಸುನ್ನಿ-ಶಾಫಿ ವಿದ್ವಾಂಸರ ಮಂಡಳಿಯು ಹೊರಡಿಸಿದ ನಿರ್ದೇಶನವನ್ನು ಸಮರ್ಥಿಸಿಕೊಂಡು ಮಾತನಾಡಿದ್ದ 95 ವರ್ಷದ ಅವರು ಮಹಿಳೆಯರು ಪುರುಷರೊಂದಿಗೆ ಸಾರ್ವಜನಿಕ ವೇದಿಕೆಗಳನ್ನು ಹಂಚಿಕೊಳ್ಳಬಾರದು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಕಾಣಿಸಿಕೊಳ್ಳಬಾರದು ಎಂದಿದ್ದರು. ಮುಸ್ಲಿಂ ಮಹಿಳೆಯರು ಮನೆಯೊಳಗೇ ಇರಬೇಕು ಮತ್ತು ಸಾರ್ವಜನಿಕ ವೇದಿಕೆಗಳಿಗೆ ಬರುವುದು “ದೊಡ್ಡ ವಿನಾಶ”ಕ್ಕೆ ಕಾರಣವಾಗುತ್ತದೆ ಎಂದು ಅವರು ಪ್ರತಿಪಾದಿಸಿದ್ದರು. ಇಸ್ಲಾಂ ಧರ್ಮವು ಮಹಿಳೆಯರಿಗೆ ‘ಪರ್ದಾ’  ಪದ್ಧತಿಯನ್ನು ಕಡ್ಡಾಯಗೊಳಿಸಿರುವುದು ಇದೇ ಕಾರಣಕ್ಕಾಗಿಯೇ ಎಂದು ಅವರು ಸಮರ್ಥನೆ ನೀಡಿದ್ದರು.

ಮುಖ್ಯಮಂತ್ರಿ ವಿ.ಡಿ. ಸತೀಶನ್ ಆಕ್ಷೇಪ

ಕಾന്തപുರಂ ಅವರ ಈ ಹೇಳಿಕೆಗೆ ಕೇರಳ ಮುಖ್ಯಮಂತ್ರಿ ವಿ.ಡಿ. ಸತೀಶನ್ ತೀವ್ರ ವಿರೋಧ ವ್ಯಕ್ತಪಡಿಸಿದರು. 21ನೇ ಶತಮಾನದಲ್ಲಿ ಇಂತಹ 19ನೇ ಶತಮಾನದ ಹಿಮ್ಮುಖವಾದ ಅಭಿಪ್ರಾಯಗಳಿಗೆ ಅವಕಾಶವಿಲ್ಲ ಎಂದು ಅವರು ಟೀಕಿಸಿದರು. ಇಸ್ಲಾಮಿಕ್ ಇತಿಹಾಸದಲ್ಲಿ ಪ್ರವಾದಿ ಮುಹಮ್ಮದ್ ಅವರ ಮೊದಲ ಪತ್ನಿ ಖದೀಜಾ (ವ್ಯಾಪಾರಿಯಾಗಿದ್ದರು) ಹಾಗೂ ಆಯೇಷಾ (ಯುದ್ಧದಲ್ಲಿ ಭಾಗವಹಿಸಿದ್ದರು) ಮುಂತಾದ ಮಹಿಳೆಯರು ಸಾರ್ವಜನಿಕ ಮತ್ತು ಮುಂಚೂಣಿ ಜೀವನ ನಡೆಸಿದ್ದನ್ನು ಉದಾಹರಿಸಿದ ಸಿಎಂ, ಮಹಿಳೆಯರು ಮನೆಯೊಳಗೆ ಮಾತ್ರ ಬಂಧಿಯಾಗುವವರಲ್ಲ, ಅವರು ಸಮಾಜದ ಮುಖ್ಯವಾಹಿನಿಯಲ್ಲಿ ಇರಬೇಕು ಎಂದು ವಾದಿಸಿದರು.

ಮುಸ್ಲಿಂ ಧರ್ಮಗುರುಗಳ ಪ್ರತಿಕ್ರಿಯೆ

ಮುಖ್ಯಮಂತ್ರಿಯವರ ಈ ಹೇಳಿಕೆಗೆ ಸಮಸ್ತ ಮುಖಂಡರು ಮತ್ತು ಧಾರ್ಮಿಕ ನಾಯಕರಿಂದ ತೀವ್ರ ವಿರೋಧ ವ್ಯಕ್ತವಾಯಿತು. ಮುಖ್ಯಮಂತ್ರಿಯವರು ಇಸ್ಲಾಮಿಕ್ ಇತಿಹಾಸವನ್ನು ತಪ್ಪಾಗಿ ಅರ್ಥೈಸಿದ್ದಾರೆ ಎಂದು ಕೆಲವರು ಆರೋಪಿಸಿದರೆ, ಸಮಸ್ತ ಅಧ್ಯಕ್ಷ ಜಿಫ್ರಿ ಮುತ್ತುಕೋಯ ತಂಗಳ್ ಅವರು, “ಧರ್ಮಗ್ರಂಥಗಳು ಮತ್ತು ಶರಿಯತ್ ಅನ್ನು ಕಾಲಕ್ಕೆ ತಕ್ಕಂತೆ ಸ್ವೀಕರಿಸಬಹುದು ಅಥವಾ ಬಿಡಬಹುದು, ಆದರೆ ಜವಾಬ್ದಾರಿಯುತ ಸ್ಥಾನದಲ್ಲಿರುವವರು ಧರ್ಮದ ವಿಷಯಗಳ ಬಗ್ಗೆ ಮಾತನಾಡುವಾಗ ಧರ್ಮಗುರುಗಳನ್ನು ಹಗುರವಾಗಿ ಕಾಣಬಾರದು” ಎಂದು ತಿರುಗೇಟು ನೀಡಿದರು.

ಐಯುಎಂಎಲ್ (IUML) ಏಕೈಕ ಮಹಿಳಾ ಶಾಸಕಿ ಫಾತಿಮಾ ತಹ್ಲಿಯಾ ನಿಲುವು

ಈ ಸಂಪೂರ್ಣ ವಿವಾದದ ನಡುವೆ, ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್‌ನ ಏಕೈಕ ಮಹಿಳಾ ಶಾಸಕಿ ಫಾತಿಮಾ ತಹ್ಲಿಯಾ ಅವರು ಮಹತ್ವದ ಪ್ರತಿಕ್ರಿಯೆ ನೀಡಿದ್ದಾರೆ:

ತಾನು ಯಾವಾಗಲೂ ಮಹಿಳಾ ಸಬಲೀಕರಣದ ಪರವಾಗಿ ಧ್ವನಿ ಎತ್ತುತ್ತ ಬಂದಿರುವುದಾಗಿ ಮತ್ತು ಆ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಆದರೆ, ಅದೇ ಸಮಯದಲ್ಲಿ ಇಂತಹ ವಿಷಯಗಳಿಗಾಗಿ ಒಬ್ಬ ಹಿರಿಯ ವಿದ್ವಾಂಸರಾದ ಅಬೂಬಕರ್ ಅವರನ್ನು ಮಾತ್ರ ಗುರಿಯಾಗಿಸಿ ವೈಯಕ್ತಿಕವಾಗಿ ಟೀಕಿಸುವುದು ಅಥವಾ ಏಕಾಏಕಿ ದಾಳಿ ಮಾಡುವುದನ್ನು ತಾನು ಒಪ್ಪುವುದಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಈ ವಿವಾದವು ಪ್ರಸ್ತುತ ಕೇರಳದ ರಾಜಕೀಯ ಮತ್ತು ಸಾಮಾಜಿಕ ವಲಯದಲ್ಲಿ ಪರ-ವಿರೋಧ ಚರ್ಚೆಗಳಿಗೆ ಮುನ್ನುಡಿ ಬರೆದಿದೆ.

ಮಹಿಳೆಯರು ಸಾರ್ವಜನಿಕ ವೇದಿಕೆಗಳಲ್ಲಿ ಕಾಣಿಸಿಕೊಳ್ಳುವುದು ಮತ್ತು ಪುರುಷರೊಂದಿಗೆ ವೇದಿಕೆ ಹಂಚಿಕೊಳ್ಳುವುದು ‘ದೊಡ್ಡ ವಿನಾಶ’ಕ್ಕೆ ಕಾರಣವಾಗಬಹುದು ಹಾಗೂ ಅವರು ಮನೆಯೊಳಗೇ ಇರಬೇಕು ಎಂಬ ಅವರ ಹೇಳಿಕೆ ದೊಡ್ಡ ವಿವಾದ ಸೃಷ್ಟಿಸಿತ್ತು. ಇದಕ್ಕೆ ಕೇರಳ ಮುಖ್ಯಮಂತ್ರಿ ವಿ.ಡಿ. ಸತೀಶನ್ ತೀವ್ರ ವಿರೋಧ ವ್ಯಕ್ತಪಡಿಸಿ, ಇದು 21ನೇ ಶತಮಾನದ ಪ್ರಗತಿಪರ ಸಮಾಜಕ್ಕೆ ತಕ್ಕುದಲ್ಲ ಎಂದು ಟೀಕಿಸಿದ್ದರು.

ಈ ವಿವಾದದ ಕುರಿತು ಮಾತನಾಡಿರುವ ಐಯುಎಂಎಲ್ ಶಾಸಕಿ ಫಾತಿಮಾ ತಹ್ಲಿಯಾ, “ನಾನು ಯಾವಾಗಲೂ ಮಹಿಳಾ ಸಬಲೀಕರಣದ ಪರವಾಗಿ ಧ್ವನಿ ಎತ್ತಿದ್ದೇನೆ, ಆ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ. ಆದರೆ, ಒಬ್ಬ ಹಿರಿಯ ವಿದ್ವಾಂಸರನ್ನು ಮಾತ್ರ ಗುರಿಯಾಗಿಸಿ ಏಕಾಏಕಿ ಟೀಕಿಸುವುದನ್ನು ಮತ್ತು ವೈಯಕ್ತಿಕವಾಗಿ ಅಟ್ಯಾಕ್ ಮಾಡುವುದನ್ನು ನಾನು ಒಪ್ಪುವುದಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *