Home ಕ್ರೈಂ ನ್ಯೂಸ್ ತಂದೆ ಆಸ್ತಿ ಬೇರೆ ಮಹಿಳೆಯ ಪಾಲಾಗಬಹುದು ಎಂಬ ಭಯ: ಉದ್ಯಮಿ ತಂದೆಯನ್ನೇ ಹತ್ಯೆಗೈದ ಪುತ್ರ ಮತ್ತು ಸೊಸೆ ಸ್ಫೋಟಕ ಮಾಹಿತಿ!
ಕ್ರೈಂ ನ್ಯೂಸ್ನವದೆಹಲಿಬೆಂಗಳೂರು

ತಂದೆ ಆಸ್ತಿ ಬೇರೆ ಮಹಿಳೆಯ ಪಾಲಾಗಬಹುದು ಎಂಬ ಭಯ: ಉದ್ಯಮಿ ತಂದೆಯನ್ನೇ ಹತ್ಯೆಗೈದ ಪುತ್ರ ಮತ್ತು ಸೊಸೆ ಸ್ಫೋಟಕ ಮಾಹಿತಿ!

Share
ತಂದೆ
Share

ಕಾನ್ಪುರ: ಉತ್ತರ ಪ್ರದೇಶದ ಕಾನ್ಪುರದ ಇಂದಿರಾ ನಗರದಲ್ಲಿ ನಡೆದಿದ್ದ ಪ್ರಖ್ಯಾತ ಔಷಧ ವ್ಯಾಪಾರಿ ವಿನೀತ್ ಮನೋಚಾ (60) ಕೊಲೆ ಪ್ರಕರಣವನ್ನು ಭೇದಿಸಿರುವ ಪೊಲೀಸರು, ಕೊಲೆಗೆ ಸಂಚು ರೂಪಿಸಿದ್ದ ಅವರ ಮಗ ಸುಬ್ರತ್ ಹಾಗೂ ಸೊಸೆ ಶಾಲೂ ಅವರನ್ನು ಬಂಧಿಸಿದ್ದಾರೆ.

ಘಟನೆಯ ವಿವರ:

ಸೆಪ್ಟೆಂಬರ್ 5 ರಂದು ವಿನೀತ್ ಮನೋಚಾ ಅವರು ತಮ್ಮ ಅಪಾರ್ಟ್‌ಮೆಂಟ್‌ನಲ್ಲಿ ಏಕಾಂಗಿಯಾಗಿದ್ದಾಗ ಕುತ್ತಿಗೆ ಕೊಯ್ದು ಭೀಕರವಾಗಿ ಹತ್ಯೆ ಮಾಡಲಾಗಿತ್ತು. ಆ ಸಮಯದಲ್ಲಿ ಮಗ ಸುಬ್ರತ್ ಹಾಗೂ ಸೊಸೆ ಶಾಲೂ ಪಾರ್ಟಿಗೆ ತೆರಳಿದ್ದರು. ಆರಂಭದಲ್ಲಿ ಈ ಕೊಲೆಯ ಮಾಸ್ಟರ್‌ಮೈಂಡ್ ಸೊಸೆ ಶಾಲೂ ಎಂದು ಶಂಕಿಸಿದ್ದ ಪೊಲೀಸರು ಆಕೆಯನ್ನು ಹಾಗೂ ಅವರ ಮಾಜಿ ಉದ್ಯೋಗಿ ವಿಶಾಲ್ ಗೌತಮ್ ಮತ್ತು ಆತನ ಸಹಚರ ರಾಜಕಿಶೋರ್‌ನನ್ನು ಬಂಧಿಸಿದ್ದರು.

ಪೊಲೀಸ್ ತನಿಖೆಯಲ್ಲಿ ಬಯಲಾಯ್ತು ಘೋರ ಸತ್ಯ:

ಪೊಲೀಸರು ಕಾಲ್ ಡಿಟೇಲ್ಸ್ (CDR), ಸಿಸಿಟಿವಿ ದೃಶ್ಯಾವಳಿ ಹಾಗೂ ಡಿಜಿಟಲ್ ಸಾಕ್ಷ್ಯಗಳನ್ನು ತನಿಖೆ ನಡೆಸಿದಾಗ ಕೃತ್ಯದ ಹಿಂದಿನ ರೂವಾರಿ ಮಗ ಸುಬ್ರತ್ ಎಂಬುದು ಬೆಳಕಿಗೆ ಬಂದಿದೆ. ಕೊಲೆಗಾರ ವಿಶಾಲ್ ಹೊಸ ಸಿಮ್ ಕಾರ್ಡ್ ಬಳಸಿ ಸುಬ್ರತ್‌ಗೆ 6 ಬಾರಿ ಕರೆ ಮಾಡಿದ್ದು ಪತ್ತೆಯಾಗಿದೆ. ಇದರ ಆಧಾರದ ಮೇಲೆ ಸೆಪ್ಟೆಂಬರ್ 23 ರಂದು ಸುಬ್ರತ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಘೋರ ಸತ್ಯ ಹೊರಬಿದ್ದಿದೆ.

ಕೊಲೆಗೆ ಕಾರಣವೇನು? ವಿಚಾರಣೆ ವೇಳೆ ಸುಬ್ರತ್ ತನ್ನ ತಂದೆಗೆ ಹಲವು ಮಹಿಳೆಯರೊಂದಿಗೆ ಸಂಬಂಧವಿತ್ತು ಎಂದು ಆರೋಪಿಸಿದ್ದಾನೆ. ತಂದೆ ಬೇರೊಬ್ಬ ಮಹಿಳೆಯೊಂದಿಗೆ ವಾಸಿಸಲು, ಎಲ್ಲಾ ಆಸ್ತಿಯನ್ನು ಆಕೆಯ ಹೆಸರಿಗೆ ಬರೆದು ಕೊಡಬಹುದು ಎಂಬ ಭೀತಿಯಲ್ಲಿದ್ದನು. ಅಲ್ಲದೆ, ತಂದೆಯಿಂದ ತಿಂಗಳಿಗೆ ₹40,000 ಖರ್ಚಿಗೆ ಪಡೆಯುತ್ತಿದ್ದ ಸುಬ್ರತ್, ₹55,000 ಸಾಲದ ಕಂತು  ಪಾವತಿಸಬೇಕಿದ್ದರಿಂದ ತೀವ್ರ ಹಣಕಾಸಿನ ಮುಗ್ಗಟ್ಟಿನಲ್ಲಿದ್ದನು.

₹6 ಲಕ್ಷ ಸುಪಾರಿ ನೀಡಿದ್ದ ಮಗ: ತಂದೆಯನ್ನು ಮುಗಿಸಲು ಸುಬ್ರತ್ ತನ್ನ ಕುಟುಂಬದ ಮಾಜಿ ಉದ್ಯೋಗಿ ವಿಶಾಲ್ ಗೌತಮ್‌ಗೆ ₹6 ಲಕ್ಷ ಸುಪಾರಿ ನೀಡಿದ್ದನು. ಆರಂಭದಲ್ಲಿ ಇದನ್ನೊಂದು ನೈಸರ್ಗಿಕ ಸಾವು ಅಥವಾ ಅಪಘಾತದಂತೆ ಬಿಂಬಿಸಲು ಯೋಜನೆ ರೂಪಿಸಲಾಗಿತ್ತು. ಆದರೆ ನಂತರ ಯೋಜನೆಯನ್ನು ಬದಲಾಯಿಸಿ ಹತ್ಯೆ ಮಾಡಲಾಗಿತ್ತು. ಒಂದು ವೇಳೆ ಸಿಕ್ಕಿಬಿದ್ದರೆ ತನ್ನ ಹೆಂಡತಿ ಶಾಲೂ ಹೆಸರನ್ನು ಹೇಳುವಂತೆ ಸುಬ್ರತ್ ವಿಶಾಲ್‌ನಿಗೆ ಸೂಚಿಸಿದ್ದನು.

ಪ್ರಸ್ತುತ ಪೊಲೀಸರು ಸುಬ್ರತ್ ಹಾಗೂ ಆತನಿಗೆ ಸಹಕರಿಸಿದವರನ್ನು ಬಂಧಿಸಿದ್ದು, ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Recent Comments

No comments to show.
Related Articles