SUDDIKSHANA KANNADA NEWS/ DAVANAGERE/ DATE:02-11-2023
ನಮ್ಮ ಕನ್ನಡ ನಾಡು ನುಡಿ ಚಂದ
ಕನ್ನಡ ಮಾತಿನ ಮಾಧುರ್ಯ ಅಂದ
ಒಲವು ಕನ್ನಡ ಗೆಲುವು ಕನ್ನಡ
ಭಾವದ ಬೆಸುಗೆಯಲ್ಲಿ ಬೆರೆತ ಕನ್ನಡ
ಋಷಿ-ಕವಿಗಳ ಕಲೆ ಬಿಡು ಸಿರಿಗನ್ನಡ
ಭವ್ಯ ಕಾರುನಾಡಿನ ಹೆಮ್ಮೆ ಕನ್ನಡ
ಕನ್ನಡದ ಕಂಪನ್ನು ಹೆಚ್ಚಿಸಿದ ಗರಿಮೆಗೆ ಪಾತ್ರವಾದ ಹಾಡು 1993 ರಲ್ಲಿ ತೆರೆಕಂಡ ಆಕಸ್ಮಿಕ ಚಿತ್ರ ಡಾ. ರಾಜಕುಮಾರ್ ಅವರು ನಟಿಸಿದ ಹಂಸಲೇಖ ಅವರು ರಚಿಸಿರುವ ಮತ್ತು ಬರೆದ ಕನ್ನಡದ ಹಾಡು “ಹುಟ್ಟಿದರೆ ಕನ್ನಡ ನಾಡಲ್ ಹುಟ್ಟಬೇಕು ಮೆಟ್ಟಿದರೆ ಕನ್ನಡ ಮಣ್ಣ ಮೆಟ್ಟಬೇಕು ” ಕನ್ನಡ ನಾಡು ನುಡಿ ರಾರಾಜಿಸುವ ಸಾಹಿತ್ಯಕ್ಕೆ ಸೋಲದೆ ಇರಲು ಹೇಗೆ ಸಾಧ್ಯ ಕನ್ನಡಾಭಿಮಾನಿಗಳು.
ಕನ್ನಡ ನಾಡಿನ ಮಣ್ಣಿನಲ್ಲಿ ಹುಟ್ಟುವುದೇ ಪುಣ್ಯ ಕನ್ನಡ ನಾಡಿನಲ್ಲಿ ಮಡಿಯುವುದೇ ಭಾಗ್ಯ! ಕನ್ನಡ ಮಾತು ಅದೆಷ್ಟು ಇಂಪನ ಅದೆಷ್ಟು ಕಂಪನ. ಕನ್ನಡ ಸ್ವರದಲ್ಲೇ ನವಿರಾದ ಭಾವ ಅಡಗಿದೆ. ಕನ್ನಡ ಭಾವದಲ್ಲಿ ಬೆರೆತು ಹೋದ ಉಸಿರೇ ಕನ್ನಡ. ಕನ್ನಡ ಭಾಷೆಯ ಮೆರವಣಿಗೆ ನವಂಬರ್ 1 ಕನ್ನಡ ರಾಜ್ಯೋತ್ಸವಕ್ಕೆ ಮಾತ್ರ ಸೀಮಿತವಾಗಿರದೇ, ಕನ್ನಡ ಪ್ರತಿನಿತ್ಯದ ಕನ್ನಡಿಗರ ಉಸಿರಗಿರಲಿ ಹಸಿರಾಗಿರಲಿ ಎನ್ನುವುದು ಕನ್ನಡ ಅಭಿಮಾನದ ಹೃದಯಗಳ ಕೂಗು.
ಆದರೆ ಇಂಗ್ಲೀಷ್ ಭಾಷೆಯ ವ್ಯಾಮೋಹಕ್ಕೆ ಸೋತು ನಾವೆಲ್ಲ ಕನ್ನಡಕ್ಕಿಂತ ಇಂಗ್ಲೀಷ್ ಭಾಷೆಗೆ ಒಲವು ತೋರುತ್ತಿರುವುದು ಮಕ್ಕಳು ಓದುತ್ತಿರುವ ಆಂಗ್ಲಮಾಧ್ಯಮಗಳೇ ಸಾಕ್ಷಿ. ಕನ್ನಡ ಉಳಿಸಿ ಬೆಳಸಿ ಎಂದು ವೇದ ಘೋಷಣೆಗಳು ಮೊಳಗುತ್ತಿದೆ ಅಷ್ಟೇ? ದೊಡ್ಡ ದೊಡ್ಡ ಕಂಪನಿಗಳು ಶಾಲಾ ಕಾಲೇಜುಗಳಲ್ಲಿ ಹೋಗಿ ನೋಡಿದರೆ ಕನ್ನಡದ ಕಂಪು ಹೆಸರಿಗೆ ಮಾತ್ರ ಕನ್ನಡ ಮಾತನಾಡುವವರಿಗೆ ಕಿಂಚಿತ್ತೂ ಬೆಲೆ ಇಲ್ಲದಾಗಿದೆ ಮತ್ತು ಪ್ರತಿಭೆ ಇದ್ದು ಇಂಗ್ಲೀಷ್ ಮಾತನಾಡಲು ಬರುವುದಿಲ್ಲ ಎನ್ನುವ ಒಂದೇ ಕಾರಣಕ್ಕೆ ಅವಕಾಶಗಳಿಂದ ವಂಚಿತರಾಗುತ್ತಿರುವುದು ವಿಪರ್ಯಾಸವೇ? ಬೇರೆ ಭಾಷೆಗೆ ಮೋಹಿತರಾಗಿ ನಮ್ಮ ಕನ್ನಡವನ್ನು ತುಳಿಯುತ್ತಿರುವುದು ಅದೆಷ್ಟು ಸರಿ?
ಕನ್ನಡಕ್ಕೆ ಮೊದಲು ಆದ್ಯತೆ ಸಿಗಲಿ ನಾವು ವಾಸಿಸುತ್ತಿರುವುದು ಕರ್ನಾಟಕದಲ್ಲಿ ಕನ್ನಡಿಗರಿಗೆ ಮೊದಲ ಮನ್ನಣೆ ಸಿಗಬೇಕು ಮತ್ತು ಕನ್ನಡಕ್ಕೆ ಬೆಲೆ ಸಿಗಬೇಕು ಕರುನಾಡಿನಲ್ಲೆ ಕನ್ನಡಕ್ಕೆ ಬೆಲೆ ಸಿಗದಿದ್ದ ಮೇಲೆ ಬೇರೆ ನೆಲೆಯಲ್ಲಿ ಬೆಲೆ ಸಿಗುವುದು ದೂರದ ಮಾತಾಗಿ ಉಳಿದುಬಿಡುತ್ತದೆ ಅಷ್ಟೇ.
ಕನ್ನಡ ಉಳಿಯಬೇಕು ಬೆಳೆಯಬೇಕು ಅಂದರೆ “ಕನ್ನಡ ಮಾತಾಡುವುದನ್ನೇ ಕಡ್ಡಾಯ ಪಡಿಸಲಿ” ಕನ್ನಡ ಬಿಟ್ಟು ಬೇರೆ ಭಾಷೆಗಳ ದರ್ಬಾರ್ ನಡೆಸೋದಕ್ಕೆ ಕಾರಣ ಬೇರೆ ಭಾಷೆಗಳ ಮೇಲೆ ಒಲವು ಮತ್ತು ಆಕರ್ಷಣೆ ಇಂಗ್ಲೀಷ್ ನಲ್ಲಿ ಮಾತನಾಡಿದರೆ ನಾವು ತುಂಬ ವಿದ್ಯಾವಂತರು ಸಿರಿವಂತರು ಎನ್ನುವ ಗತ್ತನ್ನು ಎತ್ತಿ ತೋರಿಸುತ್ತದೆ ಅಷ್ಟೇ ವರೆತು ಮತ್ತೇನು ಇಲ್ಲ. ಕನ್ನಡಕ್ಕೆ ಏಕೆ ಇಷ್ಟೊಂದು ತಾತ್ಸಾರ? ಕನ್ನಡವನ್ನು ಉಳಿಸುವುದು, ಬೆಳೆಸುವುದು ಮತ್ತು ಮಾತನಾಡುವುದು ನಮ್ಮ ಕೈಲಿ ಇರುವುದು. ಕರ್ನಾಟಕದ ಮಾತೃಭಾಷೆಯನ್ನು ಉಳಿಸುವುದು ಬೆಳೆಸುವುದು ಪ್ರತಿಯೊಬ್ಬ ಕನ್ನಡಿಗನ ಕರ್ತವ್ಯ ಮತ್ತು ಕನ್ನಡಾಂಬೆಯ ಋಣ ತೀರಿಸಲು ದಾರಿ.