ಬೆಂಗಳೂರು: ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ಹೇಳಿಕೆಗಳಿಗೆ ಕೌಂಟರ್ ನೀಡಿರುವ ಸಚಿವ ಪ್ರಿಯಾಂಕ್ ಖರ್ಗೆ, ಪುರಂದರದಾಸರ ಕೀರ್ತನೆ ಹಾಗೂ ಸರ್ವಜ್ಞನ ವಚನಗಳನ್ನು ಉಲ್ಲೇಖಿಸಿ ತೀವ್ರವಾಗಿ ವಾಗ್ದಾಳಿ ನಡೆಸಿದ್ದಾರೆ.
“ಬೆಲ್ಲದ ಕಟ್ಟೆಯ ಕಟ್ಟಿ, ಬೇವಿನ ಬೀಜವ ಬಿತ್ತಿ ಜೇನು ಮಳೆಗರೆದರೆ ವಿಷ ಹೋಗುವುದೇನಯ್ಯ” ಎಂಬ ಪುರಂದರದಾಸರ ಸಾಲುಗಳ ಮೂಲಕ ತಿರುಗೇಟು ನೀಡಿರುವ ಅವರು, ತಂದೆ ಕಲ್ಪಿಸಿಕೊಟ್ಟಿರುವ ರಾಜಕೀಯ ಸ್ಥಾನಮಾನದ ನಡುವೆಯೂ ಅಧಿಕಾರ ಬಿಡದ ರಾಜಕಾರಣ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿರುವ ಈ ರಾಜಕೀಯ ಸಮರದಲ್ಲಿ, ಒಡಹುಟ್ಟಿದ ಅಣ್ಣ ಹಾಗೂ ಕೈಹಿಡಿದವರ ನಂಬಿಕೆಗೆ ದ್ರೋಹ ಬಗೆಯುವವರು ಮಾತನಾಡಿದಷ್ಟೂ ಪುರಂದರದಾಸರ ಕೀರ್ತನೆಗಳ ಪ್ರಸ್ತುತತೆ ಸಾಬೀತಾಗುತ್ತದೆ ಎಂದು ಪ್ರಿಯಾಂಕ್ ಖರ್ಗೆ ಕಿಡಿಕಾರಿದ್ದಾರೆ. ಅಲ್ಲದೆ, “ಆರು ಬೆಟ್ಟವನೊಬ್ಬ ಹಾರಬಹುದೆಂದಿಹರೆ ಹಾರಬಹುದೆಂದು ಎನಬೇಕು ಮೂರ್ಖನಾ ಹೋರಾಟ ಸಲ್ಲ” ಎಂಬ ಸರ್ವಜ್ಞನ ವಚನವನ್ನು ಅಸ್ತ್ರವಾಗಿ ಬಳಸಿಕೊಂಡು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಸಚಿವ ಪ್ರಿಯಾಂಕ್ ಖರ್ಗೆ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಪ್ರಿಯಾಂಕ್ ಖರ್ಗೆ ಮಾಡಿರುವ ಟ್ವೀಟ್ ನಲ್ಲೇನಿದೆ?
ದಾಸರ ಕೀರ್ತನೆಗಳ ಉಲ್ಲೇಖ: ಪ್ರಸಿದ್ಧ ಪುರಂದರದಾಸರ ಕೀರ್ತನೆ ಹಾಗೂ ಸರ್ವಜ್ಞನ ವಚನಗಳ ಮೂಲಕ ಕೇಂದ್ರ ಸಚಿವರಿಗೆ ರಾಜಕೀಯ ತಿರುಗೇಟು ನೀಡಲಾಗಿದೆ.
ವೈಯಕ್ತಿಕ ಹಾಗೂ ರಾಜಕೀಯ ವಾಗ್ದಾಳಿ: ನಂಬಿಕೆದ್ರೋಹ, ಅಧಿಕಾರದ ವ್ಯಾಮೋಹ ಮತ್ತು ಬದಲಾಗುವ ರಾಜಕೀಯ ನಿಲುವುಗಳ ಕುರಿತು ತೀವ್ರ ಟೀಕೆಗಳನ್ನು ವ್ಯಕ್ತಪಡಿಸಲಾಗಿದೆ.
ಸೋಷಿಯಲ್ ಮೀಡಿಯಾ ಸಮರ: ರಾಜಕೀಯ ನಾಯಕರ ನಡುವಿನ ವಾಗ್ದಾ ಯುದ್ಧವು ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿದೆ.





Leave a comment