SUDDIKSHANA KANNADA NEWS/ DAVANAGERE/ DATE:06-10-2023
ಕಲಬುರಗಿ (Kalaburagi): ನಗರದ ಮಕ್ತಂಪುರ ಬಡಾವಣೆಯಲ್ಲಿ ಟೈಲರ್ ಅಂತಾನೇ ಪ್ರಸಿದ್ಧಿಯಾಗಿದ್ದ ಟೈಲರ್ ಉದ್ಯಮಿಯ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಲಾಗಿದ್ದು, ಘಟನೆ ನಡೆದ ಕೆಲ ಗಂಟೆಗಳಲ್ಲೇ ಪೊಲೀಸರು ಹಂತಕನನ್ನು ಸೆರೆ ಹಿಡಿದಿದ್ದಾರೆ.
ಸುರೇಶ್ ಹಂಚಿ (44) ಹತ್ಯೆಗೀಡಾದ ಖ್ಯಾತ ಟೈಲರ್ ಉದ್ಯಮಿ. 20 ವರ್ಷದ ಅವಿನಾಶ ಹಿರೇಮಠ ಎಂಬಾತನೇ ಈ ಕೃತ್ಯ ಎಸಗಿದ ಆರೋಪಿ. ಕಲಬುರಗಿಯಲ್ಲಿ ನೆತ್ತರು ಹರಿದಿದ್ದು, ನಗರದ ಜನರನ್ನು ಬೆಚ್ಚಿ ಬೀಳಿಸಿದೆ.
Read Also This Story:
STOCK MARKET:ಚೇತರಿಕೆ ಕಂಡ ಷೇರುಪೇಟೆ : ನಿಫ್ಟಿ 109 ಅಂಕ, ಸೆನ್ಸೆಕ್ಸ್ 405 ಅಂಕ ಏರಿಕೆ
ಘಟನೆ ಹಿನ್ನೆಲೆ:
ಸುರೇಶ್ ಹಂಚಿ ಅವರು ಟೈಲರಿಂಗ್ ಉದ್ಯಮದಲ್ಲಿ ಒಳ್ಳೆಯ ಹೆಸರು ಸಂಪಾದಿಸಿದ್ದರು. ಎಲ್ಲರೂ ಅವರನ್ನು ಟೈಲರ್ ಸುರೇಶಣ್ಣ ಅಂತಾನೇ ಕರೆಯುತ್ತಿದ್ದರು. ಸೂಪರ್ ಮಾರ್ಕೇಟ್ ಪ್ರದೇಶದ ಪುಠಾಣಿ ಗಲ್ಲಿಯಲ್ಲಿ ಬಿಎಸ್ ಟೈಲರ್ ಹೆಸರಿನ ಅಂಗಡಿ ಇಟ್ಟುಕೊಂಡಿದ್ದರು. ಹತ್ತಾರು ಜನರಿಗೆ ಕೆಲಸ ಕೊಟ್ಟು ಅವರಿಗೆ ಬದುಕು ರೂಪಿಸಿಕೊಳ್ಳಲು ನೆರವಾದವರು.
ಆದ್ರೆ, ನಗರದ ಮಕ್ತಾಂಪುರ ಬಡಾವಣೆಯಲ್ಲಿ ವಾಸವಿದ್ದ ಸುರೇಶ ಈಗ ಅದೆ ಮಕ್ತಾಂಪುರ ಬಡಾವಣೆಯ ಭವಾನಿ ಗುಡಿಯ ಹತ್ತಿರ ಬರ್ಬರ ಹತ್ಯೆಗೀಡಾಗಿದ್ದಾರೆ. ಸುರೇಶ್ ಬಳಿ ಈ ಹಿಂದೆ ಕೆಲಸ ಮಾಡುತ್ತಿದ್ದ ಅವಿನಾಶ ಹಿರೇಮಠ ಎಂಬಾತನೇ ಕೊಂದು ಹಾಕಿದ್ದಾನೆ.
ಬೆಳಿಗ್ಗೆಯಷ್ಟೇ ಬೆಂಗಳೂರಿನಿಂದ ವಾಪಸ್ ಆಗಿದ್ದ ಸುರೇಶ್ ಅವರು ತನ್ನ ಪುತ್ರನ ಕಾಲೇಜು ಅಡ್ಮಿಷನ್ ಮಾಡಿಸಿ ಬಂದಿದ್ದರು. ಎಂದಿನಂತೆ ಗುರುವಾರ ಸಂಜೆ ಸುಮಾರಿಗೆ ವಾಪಸ್ ಬರುವಾಗ ಅಡ್ಡಗಟ್ಟಿದ ಅವಿನಾಶ್ ಮೊದಲು ರಾಡ್ ನಿಂದ ತಲೆಗೆ ಬಲವಾಗಿ ಹೊಡೆದಿದ್ದಾನೆ. ಹೊಡೆತ ಬಿದ್ದ ಕಾರಣಕ್ಕೆ ಸುರೇಶ್ ಅವರು ನೆಲಕ್ಕೆ ಬಿದ್ದಿದ್ದಾರೆ. ಆ ಬಳಿಕ ತಲೆ ಮೇಲೆ ಕಲ್ಲು ಎತ್ತು ಹಾಕಿ ಕೊಂದು ಹಾಕಿದ್ದಾನೆ. ಬಳಿಕ ಸುರೇಶ್ ರ ಬೈಕ್ ಅನ್ನೇ ಏರಿ ಆರೋಪಿ ಎಸ್ಕೇಪ್ ಆಗಿದ್ದ.
ಕೊಲೆ ನಡೆದ ಕೆಲವೇ ಗಂಟೆಗಳಲ್ಲಿಯೇ ವಿಶೇಷ ತಂಡ ರಚನೆ ಮಾಡಿದ ಪೊಲೀಸರು ಆರೋಪಿಯನ್ನು ನಗರದ ಹುಮನಾಬಾದ್ ರಿಂಗ್ ರಸ್ತೆ ಬಳಿ ಬಂಧಿಸಿದ್ದಾರೆ. ಸಣ್ಣ ಕಾರಣಕ್ಕೆ ಈ ಹತ್ಯೆ ನಡೆದಿರಬಹುದು ಎಂದು ಪೊಲೀಸರು ಶಂಕೆ
ವ್ಯಕ್ತಪಡಿಸಿದ್ದಾರೆ.
ಸುಮಾರು 12 ವರ್ಷಗಳಿಂದ ಸುರೇಶರ ಬಿಎಸ್ ಟೇಲರ್ ಅಂಗಡಿಯಲ್ಲಿ ಆರೋಪಿ ಅವಿನಾಶಕೆಲಸ ಮಾಡುತ್ತಿದ್ದನಂತೆ. ಆದ್ರೆ ಕಳೆದ ವರ್ಷ ಸಂಬಳ ಜಾಸ್ತಿ ಮಾಡುವಂತೆ ಕೇಳಿದ್ದ. ಇದಕ್ಕೆ ಒಪ್ಪದಿದ್ದ ಸುರೇಶ್ ಕೆಲಸದಿಂದ ಬಿಡಿಸಿದ್ದರು. ಸುರೇಶ ವಾಸವಿದ್ದ ಮಕ್ತಾಂಪುರ ಮನೆಯಲ್ಲಿಯೇ ಅವಿನಾಶ ಕೂಡಾ ಬಾಡಿಗೆ ಇದ್ದ. ಅಂಗಡಿಯಲ್ಲಿ ಕೆಲಸ ಬಿಟ್ಟ ಮೇಲೆ ಮನೆ ಕೂಡಾ ಬಿಟ್ಟು ಎದುರು ಮನೆಗೆ ಬಾಡಿಗೆಗೆ ಹೋಗಿದ್ದ. ಆದ್ರೆ ಆಗಿನಿಂದ ಸುರೇಶ ಮೇಲೆ ಹಲ್ಲು ಮಸಿಯುತ್ತಿದ್ದ ಅವಿನಾಶ ಸಮಯ ಸಿಕ್ಕಾಗಲೆಲ್ಲ ಮಾಜಿ ಮಾಲೀಕನನ್ನು ಗುರಾಯಿಸುವುದು, ಜಗಳ ತೆಗೆಯುವುದು ಮಾಡ್ತಿದ್ದನಂತೆ. ನಾಲ್ಕು ದಿನದ ಹಿಂದೆ ಮಗನ ಕಾಲೇಜು ಅಡ್ಮಿಷನ್ ಗೋಷ್ಕರ ಬೆಂಗಳೂರಿಗೆ ತೆರಳಿದ್ದ ಸುರೇಶ ನಿನ್ನೆ ಬೆಳಗ್ಗೆಯಷ್ಟೆ ವಾಸಪ್ ಆಗಿದ್ದಾರೆ. ಬೆಳಗ್ಗೆ ಕೂಡಾ ಮಾಜಿ ಮಾಲಕನೊಂದಿಗೆ ಅವಿನಾಶ ಗಲಾಟೆ ಮಾಡಿಕೊಂಡಿದ್ದನಂತೆ ಬಳಿಕ ನಿನ್ನನ್ನ ಸುಮ್ಮನೆ ಬಿಡುವದಿಲ್ಲ ಎಂದು ಬೆದರಿಕೆ ಕೂಡಾ ಹಾಕಿ ತೆರಳಿದ್ದನಂತೆ.
ಆದ್ರೆ ಇದೇನು ಹೊಸದಲ್ಲ ಬಿಡು ಅಂತ ಸುರೇಶ ದೈನಂದಿನಂತೆ ಅಂಗಡಿ ತೆರೆಯುವ ಸಮಯಕ್ಕೆ ಅಂಗಡಿಗೆ ಹೋಗಿದ್ದಾರೆ. ಮರಳಿ ಸಾಯಂಕಾಲ ಬೈಕ್ ಮೇಲೆ ಮನೆಗೆ ಬರುವಾಗ ಇವರನ್ನು ತಡೆದು ಆರೋಪಿ ದುಷ್ಕತ್ಯ ಎಸಗಿದ್ದಾನೆ. ಸುರೇಶ ಕುಟುಂಬಸ್ಥರು ನೀಡಿದ ದೂರಿನನ್ವಯ ಬ್ರಹ್ಮಪುರ ಠಾಣೆಯಲ್ಲಿ ಐಪಿಸಿ 302 ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಜರುಗಿಸಲಾಗಿದೆ ಎಂದು ಪೊಲೀಸ್ ಕಮಿಷನರ್ ಚೇತನ್ ಆರ್. ತಿಳಿಸಿದ್ದಾರೆ.