SUDDIKSHANA KANNADA NEWS/ KALABURAGI/ DATE:09-09-2023
ಕಲಬುರಗಿ (Kalaburagi): ಕನ್ಯೆ ನೋಡಲು ಬಂದಾಗ ಯುವತಿ ಪರಿಚಯವಾಗಿ ಸ್ನೇಹಕ್ಕೆ ತಿರುಗಿದೆ. ಆ ಬಳಿಕ ಸಲುಗೆ ಆಗಿ ಲೈಂಗಿಕ ತೃಷೆ ತೀರಿಸಿಕೊಂಡ ನಂತರ ಯುವಕನು ಯುವತಿಗೆ ಮೋಸ ಮಾಡಿದ ಆರೋಪ ಕೇಳಿ ಬಂದಿದೆ.
ಬ್ಯಾಂಕ್ ಒಂದರಲ್ಲಿ ಉದ್ಯೋಗಿಯಾಗಿರುವ ಯುವತಿಗೆ ಚಿತ್ತಾಪುರ ತಾಲ್ಲೂಕಿನ ರಾಮತೀರ್ಥದ ರಾಘವೇಂದ್ರ ಜಗನ್ನಾಥ ರೆಡ್ಡಿ ಎಂಬಾತನೆ ಮೋಸ ಮಾಡಿದ ಆರೋಪ ಎದುರಿಸುತ್ತಿರುವವರು. ಈ ಸಂಬಂಧ ಯುವತಿ ಅಶೋಕನಗರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾಳೆ.
ಈ ಸುದ್ದಿಯನ್ನೂ ಓದಿ:
KMF (Karnataka Milk Federation) KOMUL ನ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ: ಸಹಾಯಕ ವ್ಯವಸ್ಥಾಪಕ ಸೇರಿ 179 ಹುದ್ದೆಗಳು
ರಾಘವೇಂದ್ರ ಮದುವೆಯಾಗುವುದಾಗಿ ನಂಬಿಸಿ ಸಹ ಜೀವನ ಕಳೆದು ನಂತರ ಮದುವೆ ಮುಂದುಡುತ್ತಾ ಬಂದಿದ್ದು, ಯುವತಿಗೆ ವಿಜಯಪುರದ ಬೇರೊಬ್ಬ ಯುವಕನೊಂದಿಗೆ ಮದುವೆ ನಿಶ್ಚಿತಾರ್ಥ ಆಗಿತ್ತು. ಆದ್ರೆ, ಈ ವಿಚಾರ ರಾಘವೇಂದ್ರನಿಗೆ ತಿಳಿದು ಯುವತಿ ಜೊತೆಗೆ ಇದ್ದಾಗ ತೆಗೆದ ಅಶ್ಲೀಲ ಚಿತ್ರ ಮತ್ತು ವಿಡಿಯೋಗಳನ್ನು ಆಕೆಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡ ಯುವಕನಿಗೆ ಕಳುಹಿಸಿ ಸಂಬಂಧ ಮುರಿದಿದ್ದಾನೆ. ತಾನೂ ಮದುವೆಯಾಗಲು ಒಪ್ಪದೆ, ಬೇರೊಬ್ಬ ಯುವಕನ ಜೊತೆಗೂ ಮದುವೆಯಾಗಲು ಬಿಡದೆ ರಾಘವೇಂದ್ರ ತನ್ನ ಬಾಳನ್ನೇ ಹಾಳು ಮಾಡುತ್ತಿರುವುದರಿಂದ ನೊಂದ ಯುವತಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಆತನ ವಿರುದ್ಧ ದೂರು ಸಲ್ಲಿಸಿದ್ದೆಳು. ಈ ದೂರಿನನ್ವಯ ಪೊಲೀಸರು ಆತನನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.
ದಾದ ನಂತರ ಆತ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದರಿಂದ ಯುವತಿ ತಕರಾರು ಅರ್ಜಿ ಸಲ್ಲಿಸಿ ಜಾಮೀನು ಸಿಗದಂತೆ ಮಾಡಿದ್ದಳು. ಆಗ ಯುವಕ ಮತ್ತು ಆತನ ಕುಟುಂಬದವರು ಮದುವೆ ಮಾಡುವುದಾಗಿ ನಂಬಿಸಿ ಜಾಮೀನು ಪಡೆದು ಮತ್ತೊಂದು ಯುವತಿಯ ಜೊತೆಗೆ ಆತನ ಮದುವೆ ಮಾಡಿದ್ದಾರೆ.
ಈ ವಿಚಾರ ಗೊತ್ತಾದ ಬಳಿಕ ಮತ್ತೆ ಯುವತಿ ರಾಘವೇಂದ್ರ ಹಾಗೂ ಆತನ ಕುಟುಂಬದವರಿಗೆ ಪ್ರಶ್ನಿಸಿದ್ದಾಳೆ. ಮಾತ್ರವಲ್ಲ, ರಾಘವೇಂದ್ರನ ಜೊತೆ ವಿವಾಹವಾಗಿದ್ದ ಯುವತಿ ಜೊತೆ ಮಾತನಾಡಲು ಮೋಸ ಹೋದ ಯುವತಿ ತೆರಳಿದ್ದಾಳೆ. ಈ ವೇಳೆ ಆಕೆಗೆ ಬೆದರಿಕೆ ಹಾಕಲಾಗಿದೆ ಎಂಬ ಆರೋಪವೂ ಕೇಳಿ ಬಂದಿದೆ. ಯುವತಿಯು ಬ್ಯಾಂಕ್ ನಲ್ಲಿ ಕೆಲಸ ಮಾಡುವಾಗ ರಾಘವೇಂದ್ರನಿಗೆ ಹಣ ಕೊಟ್ಟಿದ್ದಾಳೆ. ಮಾತ್ರವಲ್ಲ, ಆತನೊಂದಿಗೆ ಮೂರು ವರ್ಷ ಲಿವಿಂಗ್ ರಿಲೇಷನ್ ಶಿಪ್ ಇಟ್ಟುಕೊಂಡಿದ್ದಳು. ಮದುವೆಯಾಗುವುದಾಗಿ ನಂಬಿಸಿ ಆಕೆಯ ಜೊತೆಗೆ ದೈಹಿಕ ಸಂಪರ್ಕ ಬೆಳೆಸಿದ ಬಳಿಕ ಗರ್ಭಕೋಶ ಇಲ್ಲ ಎಂಬ ನೆಪವೊಡ್ಡಿ ಮದುವೆಯಾಗಲು ನಿರಾಕರಿಸಲಾಗಿದೆ. ಆ ಬಳಿಕ ಜಮೀನು ವ್ಯಾಜ್ಯವೊಂದು ಬಂದಾಗ ಈಕೆ ನೆರವು ನೀಡಿದ್ದಾಳೆ.
ಆದ್ರೂ ರಾಘವೇಂದ್ರ ಮತ್ತು ಮತ್ತಾತನ ಕುಟುಂಬವೂ ಯುವತಿಗೆ ಮೋಸ ಮಾಡಿದ್ದು, ಈ ಸಂಬಂಧ ರಾಘವೇಂದ್ರ ಮತ್ತು ಆತನ ಕುಟುಂಬದವರ ವಿರುದ್ಧ ದೂರು ದಾಖಲಿಸಿದ್ದು, ತನಿಖೆ ಮುಂದುವರಿದಿದೆ.