SUDDIKSHANA KANNADA NEWS/ KALBURGI/ DATE:03-09-2023
ಕಲಬುರ್ಗಿ (Kalaburagi): ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇರೆಗೆ ಶಾಲೆಯೊಂದರ ಪ್ರಭಾರಿ ಮುಖ್ಯೋಪಾಧ್ಯಾಯನನ್ನು ವಾಡಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಮುಂದುವರಿಸಿದ್ದಾರೆ.
ಶಾಲೆಯ ಅತಿಥಿ ಶಿಕ್ಷಕಿಯರು ಹಾಗೂ ವಿದ್ಯಾರ್ಥಿನಿಯರ ಜೊತೆ ಅಸಭ್ಯವಾಗಿ ವರ್ತಿಸುತ್ತಿದ್ದನಲ್ಲದೇ, ಅವರೊಟ್ಟಿಗೆ ಕಾಮದಾಟ ಆಡಲು ಸೆಳೆಯುವಂತೆ ನಾಟಕವಾಡುತ್ತಿದ್ದ. ಈ ಕುರಿತು ಬಿಇಒಗೆ ವಿದ್ಯಾರ್ಥಿನಿಯರು ದೂರು ಕೊಟ್ಟ ಕಾರಣಕ್ಕೆ ಆತನ ವಿರುದ್ಧ ವಾಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಬಂಧಿಸುವ ಸಾಧ್ಯತೆ ಹೆಚ್ಚಿದೆ.
ಈ ಸುದ್ದಿಯನ್ನೂ ಓದಿ:
ಪ್ರತಿಪಕ್ಷಗಳ ಒಗ್ಗಟ್ಟಿನ ಮಂತ್ರಕ್ಕೆ ಬಿಜೆಪಿಯಲ್ಲಿ ನಡುಕ: ಸಿಎಂ ಸಿದ್ದರಾಮಯ್ಯ
ಪ್ರಭಾರಿ ಮುಖ್ಯೋಪಾಧ್ಯಾಯ ಪ್ರಭುಕಾಂತ್ ಧನ್ಯಾರ ಮೇಲೆ ಆರೋಪ ಕೇಳಿ ಬಂದಿದೆ. ಚಿತ್ತಾಪುರ ತಾಲೂಕಿನ ವಾಡಿ ಪೊಲೀಸ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶಾಲೆಯ ಮುಖ್ಯೋಪಾಧ್ಯಾಯನಾಗಿ ಕೆಲಸ ಮಾಡುತ್ತಿದ್ದ. ವಿದ್ಯಾರ್ಥಿನಿಯರು ಹಾಗೂ ಅತಿಥಿ ಶಿಕ್ಷಕಿಯರ ಮೈ ಕೈ ಮುಟ್ಟುವುದು, ನಾನು ನಿಮ್ಮ ಸೋದರ ಮಾವ, ಕಣ್ಣಲ್ಲಿ ಕಣ್ಣಿಟ್ಟು ನೋಡು, ಪ್ರೀತಿ ಮಾಡು, ನಾನು ಕರೆದ ಜಾಗಕ್ಕೆ ಬಾ ಅಂತೆಲ್ಲಾ ಲೈಂಗಿಕ ಕಿರುಕುಳ ಕೊಡುತ್ತಿದ್ದ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ನಾನು ನಿಮ್ಮ ಸೋದರ ಮಾವ ಇದ್ದಂಗೆ ಎಂದು ವಿದ್ಯಾರ್ಥಿನಿಯರ ಪುಸಲಾಯಿಸುತ್ತಿದ್ದ. ವಿರೋಧ ವ್ಯಕ್ತಪಡಿಸಿದರೆ ಬೆದರಿಕೆಯನ್ನೂ ಹಾಕುತ್ತಿದ್ದ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಹಿನ್ನೆಲೆಯಲ್ಲಿ ವಾಡಿ ಪೊಲೀಸರು ಪ್ರಭುಕಾಂತ್ ಧನ್ಯಾನನ್ನು ವಶಕ್ಕೆ ಪಡೆದು ಡ್ರಿಲ್ ಮಾಡುತ್ತಿದ್ದಾರೆ.
ಈತನ ಕಾಟ ತಾಳಲಾರದೇ ವಿದ್ಯಾರ್ಥಿನಿಯರು ಹಾಗೂ ಅತಿಥಿ ಶಿಕ್ಷಕಿಯರು ಚಿತ್ತಾಪುರ ಬಿಇಒ ಅವರ ಗಮನಕ್ಕೆ ತಂದಿದ್ದರು. ಕೂಡಲೇ ವಾಡಿ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಲಾಗಿತ್ತು. ಬಿಇಒ ಅವರು ನೀಡಿದ ದೂರಿನ ಮೇರೆಗೆ ವಾಡಿ ಠಾಣೆಯಲ್ಲಿ ಪ್ರಬಾರಿ ಮುಖ್ಯೋಪಾಧ್ಯಾಯನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಆತನನ್ನು ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಇಶಾ ಪಂತ್ ಮಾಹಿತಿ ನೀಡಿದ್ದಾರೆ.