ದಾವಣಗೆರೆ: ನಾವು ಏನು ಕೇಳಿದರೆ ನೀವು ಏನು ಕೊಟ್ಟಿದ್ದೀರಿ ನೀವು ಮತ್ತು ಜಿಲ್ಲಾ ಉಸ್ತುವಾರಿ ಸಚಿವರು. ಮೊನ್ನೆ ಹೇಳಿದ್ದಾದರೂ ಗೊತ್ತಿದೆಯಾ ನಿಮಗೆ ಎಂದು ಅಧಿಕಾರಿಗಳಿಗೆ ಜಗಳೂರು ಕಾಂಗ್ರೆಸ್ ಶಾಸಕ ದೇವೇಂದ್ರಪ್ಪ ತರಾಟೆಗೆ ತೆಗೆದುಕೊಂಡಿದ್ದಾರೆ.
ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರು ಸಿಎಂ ಆದ ಬಳಿಕ ಸಚಿವ ಸಂಪುಟ ವಿಸ್ತರಣೆ ಆದ ಬಳಿಕ ಹೇಳಿದ್ದಾದರೂ ನೆನಪಿದೆಯಾ? ಪ್ರಮಾಣ ವಚನ ಸ್ವೀಕಾರ ಮಾಡಿದ ಮೇಲೆ ಡಿ. ಕೆ. ಶಿವಕುಮಾರ್ ಅವರು ಜಿಲ್ಲಾ ಉಸ್ತುವಾರಿ ಕೊಟ್ಟು ಏನು ಮಾಡಬೇಕೆಂದು ಉಸ್ತುವಾರಿ ವಹಿಸಿದವರಿಗೆ ಹೇಳಿ ಕಳುಹಿಸಿದ್ರು ಗೊತ್ತೇನ್ರೀ ಎಂದು ಸಿಡಿದ ಘಟನೆ ನಡೆದಿದೆ.
ಹರಿಹರ ಶಾಸಕರು ಸರಿಯಾಗಿಯೇ ಹೇಳಿದ್ದಾರೆ. ನಾನು ಇನ್ನು ಮುಂದೆ ಯಾವ ಕೆಡಿಪಿ ಸಭೆಗೂ ಬರಲ್ಲ. ನಮ್ಮ ತಾಲೂಕಿನ ದಾರಿ ನೋಡಿಕೊಳ್ಳುತ್ತೇವೆ. ಯಾರೂ ಸ್ಪಂದಿಸುತ್ತಾರೋ, ಮುದ್ದೆ ಎಲ್ಲಿ ಸಿಗುತ್ತೋ, ಎಲ್ಲಿ ನಿದ್ರೆ ಬರುತ್ತೋ ಅಲ್ಲಿಗೆ ಹೋಗುತ್ತೇವೆ. ನೇರವಾಗಿ ನಿಮ್ಮ ಮೇಲೆ, ಉಸ್ತುವಾರಿ ಸಚಿವರು, ಸಂಸದರ ವಿರುದ್ಧ ಸಿಎಂ ಗಮನಕ್ಕೆ ತರುತ್ತೇನೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ವಿಡಿಯೋ ಈಗ ವೈರಲ್ ಆಗುತ್ತಿದ್ದು, ಜಗಳೂರು ತಾಲೂಕು ಬರಪೀಡಿತ ತಾಲೂಕು ಪಟ್ಟಿಯಿಂದ ಹೊರಗೆ ಇರುವುದಕ್ಕೆ ಭಾರೀ ಅಸಮಾಧಾನಗೊಂಡಿರುವ ದೇವೇಂದ್ರಪ್ಪ ಅಧಿಕಾರಿಗಳ ವಿರುದ್ಧ ರೋಷಗೊಂಡಿದ್ದಾರೆ. ನೀವು ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್, ದಾವಣಗೆರೆ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ಜಗಳೂರು ತಾಲೂಕಿಗೆ ಬಂದು ಭೇಟಿ ನೀಡಿದ್ದರೆ ಬರ ಹೇಗಿದೆ ಎಂಬುದು ಗೊತ್ತಾಗುತಿತ್ತು. ಇದನ್ನು ನೀವು ಮಾಡಿದ್ದೀರಾ. ಜಗಳೂರು ತಾಲೂಕನ್ನು ಬರಪೀಡಿತ ತಾಲೂಕು ಎಂದು ಘೋಷಿಸಿಲ್ಲ. ನೀವು ದಾವಣಗೆರೆಯಲ್ಲೇ ಕುಳಿತು ವರದಿ ನೀಡಿದರೆ ಹೇಗೆ? ಸ್ಥಳಕ್ಕೆ ಬಂದು ಸಮಸ್ಯೆ ಆಲಿಸಿ ಆನಂತರ ವರದಿ ಕೊಡಬೇಕಿತ್ತು ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ಸಿಎಂ ಡಿ. ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಜಿಲ್ಲೆಗಳ ಉಸ್ತುವಾರಿ ವಹಿಸಿದ್ದ ಉಸ್ತುವಾರಿ ಸಚಿವರಿಗೆ ಏನು ಹೇಳಿದ್ದರೆಂದು ನಿಮಗೆ ನೆನಪಿದೆಯೋ, ನಿಮಗೂ ಹೇಳಿಕಳುಹಿಸಿರಲಿಲ್ವ. ನೆನಪಿದೆಯೋ ಇಲ್ಲವೋ ನಿಮಗೆ ಗೊತ್ತಿಲ್ಲ. ನಾನೇ ಹೇಳುತ್ತೇನೆ. ಎಲ್ಲಾ ತಾಲೂಕುಗಳಿಗೆ ಹೋಗಿ ಅಲ್ಲಿರುವ ವಾಸ್ತವಾಂಶ ತಿಳಿದುಕೊಂಡು ಬರಬೇಕೆಂದು ಸಚಿವರು ಮತ್ತು ಅಧಿಕಾರಿಗಳಿಗೆ ಹೇಳಿಕಳುಹಿಸಿದ್ದರು. ನೀವು ಬಂದಿದ್ದೀರಿ ಹಿಂಗ್ಯಾಕೆ ಆಗುತಿತ್ತು ಎಂದು ಆಕ್ರೋಶ ವ್ಯಕ್ತಪಡಿಸಿದರು.





Leave a comment