Home ಹಿಂದೂ ಸಂಪ್ರದಾಯದಂತೆ ಮದುವೆಯಾದ ಇಟಲಿಯ ದಂಪತಿ: ವೈದಿಕ ಮಂತ್ರಗಳೊಂದಿಗೆ ವಿವಾಹ!
Homeದಾವಣಗೆರೆನವದೆಹಲಿಬೆಂಗಳೂರು

ಹಿಂದೂ ಸಂಪ್ರದಾಯದಂತೆ ಮದುವೆಯಾದ ಇಟಲಿಯ ದಂಪತಿ: ವೈದಿಕ ಮಂತ್ರಗಳೊಂದಿಗೆ ವಿವಾಹ!

Share
ಹಿಂದೂ
Share

ಆಗ್ರಾ: ಪ್ರೇಮದ ಪ್ರತೀಕವಾದ ತಾಜ್‌ಮಹಲ್ ನಗರಿಯಲ್ಲಿ ಇಟಲಿಯ ಪ್ರವಾಸಿ ದಂಪತಿಯು ಹಿಂದೂ ಸನಾತನ ಸಂಪ್ರದಾಯ ಹಾಗೂ ವೈದಿಕ ವಿಧಿ-ವಿಧಾನಗಳ ಪ್ರಕಾರ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇಟಲಿಯ ಲಿಗುರಿಯಾ ಮೂಲದ ಮ್ಯಾಟಿಯೊ (Matteo) ಮತ್ತು ಕಟೆರಿನಾ (Katerina) ದಂಪತಿ ಭಾರತ ಪ್ರವಾಸದ ವೇಳೆ ಆಧ್ಯಾತ್ಮಿಕ ಸಂಸ್ಕೃತಿಗೆ ಮರುಳಾಗಿ ಆಗ್ರಹದಲ್ಲಿ ಸಾಂಪ್ರದಾಯಿಕ ಹಿಂದೂ ವಿವಾಹವಾಗಿದ್ದಾರೆ.

ಭಾರತಕ್ಕೆ ಪ್ರವಾಸಿಗರಾಗಿ ಬಂದಿದ್ದ ಈ ಜೋಡಿ, ತಮ್ಮ ಪಯಣದಲ್ಲಿ ಹರಿದ್ವಾರದಲ್ಲಿ ಗಂಗಾಸ್ನಾನ ಹಾಗೂ ವಾರಣಾಸಿಯ ಕಾಶಿ ವಿಶ್ವನಾಥ ದೇವಾಲಯಕ್ಕೆ ಭೇಟಿ ನೀಡಿತ್ತು. ಭಾರತದ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆಯಿಂದ ಆಳವಾಗಿ ಪ್ರಭಾವಿತರಾದ ಇವರು, ಆಗ್ರಹ ನಗರದಲ್ಲೇ ಮದುವೆಯಾಗಲು ನಿರ್ಧರಿಸಿದರು. ಮಂಗಳವಾರ ಸಂಜೆ 7 ಗಂಟೆಗೆ ಪುರೋಹಿತ ಪ್ರವೀಣ್ ದತ್ ಶರ್ಮಾ ಅವರ ನೇತೃತ್ವದಲ್ಲಿ ವೈದಿಕ ಮಂತ್ರಗಳೊಂದಿಗೆ ವಿವಾಹ ಮಹೋತ್ಸವ ಜರುಗಿತು.

ಸಾಂಪ್ರದಾಯಿಕ ಉಡುಗೆ ಹಾಗೂ ಆಚರಣೆ: ಮದುವೆಯಲ್ಲಿ ವರ ಮ್ಯಾಟಿಯೊ ಧೋತಿ-ಕುರ್ತ ಧರಿಸಿದ್ದರೆ, ವಧು ಕಟೆರಿನಾ ಸಾಂಪ್ರದಾಯಿಕ ಕೆಂಪು ಬಣ್ಣದ ಮದುವೆ ಉಡುಗೆಯಲ್ಲಿ ಕಂಗೊಳಿಸಿದರು. ಅಗ್ನಿ ಸಾಕ್ಷಿಯಾಗಿ ಸಪ್ತಪದಿ ತುಳಿದು, ಸಿಂಧೂರ ಹಾಗೂ ಮಾಂಗಲ್ಯ ಧಾರಣಾ ಶಾಸ್ತ್ರವನ್ನು ನೆರವೇರಿಸಿದರು.

ಮಂತ್ರಗಳ ಅರ್ಥ ವಿವರಣೆ: ವಿದೇಶಿ ದಂಪತಿಗೆ ಆಚರಣೆಗಳು ಕೇವಲ ಸಾಂಕೇತಿಕವಾಗಬಾರದು ಎಂಬ ಕಾರಣಕ್ಕೆ, ಪುರೋಹಿತರು ಪ್ರತಿ ಮಂತ್ರದ ಅರ್ಥವನ್ನು ಹಿಂದಿ ಹಾಗೂ ಇಂಗ್ಲಿಷ್‌ನಲ್ಲಿ ವಿವರಿಸಿಕೊಟ್ಟಿದ್ದು, ದಂಪತಿ ಅತ್ಯಂತ ಭಕ್ತಿ ಮತ್ತು ಉತ್ಸಾಹದಿಂದ ಭಾಗವಹಿಸಿದರು.

ಸ್ಮರಣೀಯ ಅನುಭವ: ತಾಜ್‌ಮಹಲ್‌ನ ನೆರಳಿನಲ್ಲಿ, ಐತಿಹಾಸಿಕ ನಗರಿ ಆಗ್ರಹದಲ್ಲಿ ಹಿಂದೂ ಸಂಪ್ರದಾಯದಂತೆ ಮದುವೆಯಾಗಿರುವುದು ತಮ್ಮ ಜೀವನದ ಅತ್ಯಂತ ವಿಶೇಷ ಹಾಗೂ ಮರೆಯಲಾರದ ಅನುಭವ ಎಂದು ನವದಂಪತಿ ಹರ್ಷ ವ್ಯಕ್ತಪಡಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Recent Comments

No comments to show.
Related Articles