ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಆಂಜನೇಯ ಸ್ವಾಮಿ ದೇಗುಲದ ಹುಂಡಿ ಕಳ್ಳತನಕ್ಕೆ ಬಂದಿದ್ದ ಮೂವರು ಸಿಕ್ಕಿದ್ದೇ ರೋಚಕ: 112 ಹೊಯ್ಸಳ ಕ್ಷಿಪ್ರ ಕಾರ್ಯಚರಣೆ!

On: January 30, 2025 8:22 PM
Follow Us:
---Advertisement---

SUDDIKSHANA KANNADA NEWS/ DAVANAGERE/ DATE:30-01-2025

ದಾವಣಗೆರೆ: ಜಗಳೂರು ತಾಲೂಕಿನ ಅಣಬೂರು ಗೊಲ್ಲರಹಟ್ಟಿಯಲ್ಲಿ ದೇವಸ್ಥಾನದ ಹುಂಡಿ ಕಳ್ಳತನ ಮಾಡಲು ಬಂದಿದ್ದ ಮೂವರು ಆರೋಪಿಗಳನ್ನು 112 ಹೊಯ್ಸಳ, ಸಿಬ್ಬಂದಿ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಶಾಂತನಹಳ್ಳಿ ಗ್ರಾಮದ ನಾಗರಾಜ್ (47), ಶಿವಪ್ಪ ಎಂ. (38), ನರಸಿಂಹಪ್ಪ (42) ಬಂಧಿತ ಆರೋಪಿಗಳು.

ಕಳೆದ 27ರಂದು ಹೊಯ್ಸಳ 112ರ ಉಸ್ತುವಾರಿ ಅಧಿಕಾರಿ ಮಂಜುನಾಥ ಪ್ರಸಾದ್ ಎ. ಮತ್ತು ಚಾಲಕ ಹಾಲೇಶ್ ಅವರು ರಾತ್ರಿ 11 ಗಂಟೆ ಸುಮಾರಿಗೆ ಅಣಬೂರು ಗೊಲ್ಲರಹಟ್ಟಿಯಲ್ಲಿದೂರು ಕರೆ ಬಂದ ಮೇರೆಗೆ ಅಲ್ಲಿಗೆ ಬೇಟಿ ನೀಡಿ ಬರುತ್ತಿದ್ದ ಸಮಯದಲ್ಲಿ ಅಣಬೂರು ಗ್ರಾಮದ ಆಂಜನೇಯ ಸ್ವಾಮಿ ದೇವಾಸ್ಥಾನದ ಹುಂಡಿ ಕಳ್ಳತನ ಮಾಡಲು ಕಳ್ಳರು ಬಂದಿರುವ ಬಗ್ಗೆ ಮಾಹಿತಿ ಸಿಕ್ಕಿತು. 112ಹೊಯ್ಸಳಕ್ಕೆ ಕರೆ ಬಂದಿದ್ದು ವಾಹನದಲ್ಲಿ ಕರ್ತವ್ಯದಲ್ಲಿದ್ದ ಅಧಿಕಾರಿಗಳು ತಕ್ಷಣ ಕಾರ್ಯಪ್ರವೃತ್ತರಾದರು.

ಕರೆ ಬಂದು ಕೇವಲ 2ರಿಂದ 3 ನಿಮಿಷದಲ್ಲಿ ಘಟನಾ ಸ್ಥಳವಾದ ಅಣಬೂರು ಊರ ಹೊರಗಿನ ಆಂಜನೇಯ ದೇವಸ್ಥಾನದ ಬಳಿ ಹೋಗಿ ದೇವಸ್ಥಾನದ ಹುಂಡಿಯನ್ನು ಹೊಡೆಯುತ್ತಿದ್ದದ್ದು ಕಂಡು ಬಂತು. ಮೂವರು ಆರೋಪಿತರಲ್ಲಿ ತಪ್ಪಿಸಿಕೊಳ್ಳೋದಕ್ಕೆ ಪ್ರಯತ್ನಿಸಿದ ಓರ್ವ ಆರೋಪಿತರನ್ನು ಹಿಡಿದಿದ್ದಾರೆ.

ಬಳಿಕ ಮೂವರು ಆರೋಪಿತರು ಹಾಗೂ ಕೃತ್ಯ ಎಸಗಲು ಬಳಸಿದ್ದ ಕೆಎ16 ಇಎ 4081 ನೇ ಮೋಟಾರ್ ಬೈಕ್ ಹಾಗೂ ಹುಂಡಿಯನ್ನು ಹೊಡೆಯಲು ತಂದಿದ್ದ ಒಂದು ಕಬ್ಬಿಣದ ರಾಡ್ ಮತ್ತು ಒಂದು ಸ್ಕ್ರೂ ಡ್ರೈವರ್ ವಶಪಡಿಸಿಕೊಳ್ಳಲಾಗಿದೆ.

ಬಂಧಿತ ಆರೋಪಿಗಳುವಿಜಯನಗರ ಜಿಲ್ಲೆ ಎಂದು ತಿಳಿಸಿದ್ದು, ದೇವಸ್ಥಾನದ ಹುಂಡಿ ಹೊಡೆಯಲು ಬಂದಿರುವ ಬಗ್ಗೆ ಖಚಿತಪಡಿಸಿಕೊಂಡು ಆರೋಪಿತರನ್ನು ಮತ್ತು ಫಿರ್ಯಾದಿ ಯು. ಬಿ ಶರಣಪ್ಪ ಅಣಬೂರ್ ಗ್ರಾಮ ಇವರನ್ನು ಠಾಣೆಗೆ ಕರೆತಂದು ಠಾಣೆಯ ಜಗಳೂರು ಪೊಲೀಸ್ ಠಾಣೆಯ ಪೋಲೀಸ್ ನಿರೀಕ್ಷಕ ರಾಷ್ಟ್ರಪತಿ ಹೆಚ್. ಎಸ್. ಅವರ ಮುಂದೆ ಹಾಜರುಪಡಿಸಿ ನಂತರ ಗುನ್ನೆ ನಂಬರ್ 24/2025 ಕಲಂ 303 (2) 62 BNS 2023 ರೀತ್ಯಾ ಮೂವರು ಆರೋಪಿತರ ಮೇಲೆ ಪ್ರಕರಣ ದಾಖಲಿಸಲಾಗಿದೆ.

ಆರೋಪಿತರುಗಳನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ಆರೋಪಿತರು ಈ ಹಿಂದೆ ಹಲವು ದೇವಾಸ್ಥಾನಗಳ ಹುಂಡಿಗಳನ್ನು ಕಳ್ಳತನ ಮಾಡಿರುವ ಬಗ್ಗೆ ತಿಳಿದು ಬಂದಿದೆ. ಆರೋಪಿತರ ವಿರುದ್ದ ಹೆಚ್ಚಿನ ವಿಚಾರಣೆ ಮುಂದುವರೆದಿದೆ.

ಸಾರ್ವಜನಿಕರ ಗಮನಕ್ಕೆ: ಪೊಲೀಸ್ ಇಲಾಖೆಗೆ ಸಂಬಂಧಿಸಿದಂತೆ ಯಾವುದೇ ತುರ್ತು ಸೇವೆಗೆ ತುರ್ತು ಸಹಾಯವಾಣಿ 112 ಗೆ ಕರೆ ಮಾಡುವಂತೆ ಪೊಲೀಸ್ ಇಲಾಖೆಯು ಮನವಿ ಮಾಡಿದೆ.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment