ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ರಾಕಿಂಗ್ ಸ್ಟಾರ್ ಯಶ್ ಗೆ ಕೊಬ್ಬು ಜಾಸ್ತಿನಾ?

On: March 24, 2025 9:00 AM
Follow Us:
---Advertisement---

SUDDIKSHANA KANNADA NEWS/ DAVANAGERE/ DATE:24-03-2025

ಸ್ಯಾಂಡಲ್ ವುಡ್ ಖ್ಯಾತ ನಟ ರಾಕಿಂಗ್ ಸ್ಟಾರ್ ಯಶ್ ಯಾರಿಗೆ ಗೊತ್ತಿಲ್ಲ ಹೇಳಿ. ಮೊಗ್ಗಿನ ಮನಸು ಸಿನಿಮಾದ ಮೂಲಕ ನಾಯಕನಾಗಿ ಪರಿಚಯವಾದ ಯಶ್ ಹಂತಹಂತಗವಾಗಿ ಮೇಲೆ ಬಂದವರು. ಒಂದರ ನಂತರ ಮತ್ತೊಂದು ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಿದವು. ಕೆಜಿಎಫ್ ಬಂದ ಮೇಲಂತೂ ಯಶ್ ಜನಪ್ರಿಯತೆ ಹೆಚ್ಚಾಯಿತು. ಕೆಜಿಎಫ್-2 ರಿಲೀಸ್ ಆದ ಮೇಲೆ ಭಾರತ ದೇಶವೇ ಕನ್ನಡ ಚಿತ್ರರಂಗದತ್ತ ತಿರುಗಿ ನೋಡುವಂತೆ ಮಾಡಿದವರು.

ಬಾಲಿವುಡ್, ಹಾಲಿವುಡ್, ಮಾಲಿವುಡ್, ಕಾಲಿವುಡ್, ಟಾಲಿವುಡ್ ನಲ್ಲಿಯೂ ಯಶ್ ಗೆ ಕೋಟ್ಯಂತರ ಫ್ಯಾನ್ಸ್ ಇದ್ದಾರೆ. ಟಾಕ್ಸಿಕ್ ಸಿನಿಮಾವೂ ಸಾಕಷ್ಟು ಕುತೂಹಲ ಕೆರಳಿಸಿದೆ. ಕೆಜಿಎಫ್ 2 ಬಂದ ಬಳಿಕ ಯಶ್ ಸಿನಿಮಾ ರಿಲೀಸ್ ಆಗಿಲ್ಲ. ಆದ್ರೆ, ಯಶ್ ಅವರೇ ಹೇಳಿದಂತೆ ಕೊಬ್ಬು ಜಾಸ್ತಿನಾ ಎಂಬ ಕುರಿತಂತೆ ಮಾಹಿತಿ ನೀಡಿದ್ದಾರೆ.

ಹೌದು. ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ, ವಿಕಟ ಕವಿ ಯೋಗರಾಜ್ ಭಟ್ ಅವರ ನಿರ್ದೇಶನದ ಮನದ ಕಡಲು ಟ್ರೈಲರ್ ರಿಲೀಸ್ ಗೆ ರಾಕಿಂಗ್ ಸ್ಟಾರ್ ಯಶ್ ಅವರು ಬಂದಿದ್ದರು. ಸಿನಿಮಾದ ಟ್ರೈಲರ್ ಲಾಂಚ್ ಮಾಡಿದ್ದಾರೆ. ಈ ಒಂದು ಇವೆಂಟ್​​ಗೆ ಸ್ಟೈಲಿಷ್ ಆಗಿಯೇ ಆಗಮಿಸಿದ ಯಶ್ ಅವರು ಇಡೀ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ. ಹಾಗೆಯೇ ಅವರು ಬೆಳೆದು ಬಂದ ದಿನಗಳ ಬಗ್ಗೆಯೂ ಮಾತನಾಡಿ, ತಮ್ಮ ಬೆಳವಣಿಗೆಯ ಕಾರಣಕರ್ತರನ್ನು ನೆನಪಿಸಿಕೊಂಡು ಧನ್ಯವಾದ ಹೇಳಿದ್ದಾರೆ.

ಸೀರಿಯಲ್​​ನಲ್ಲಿ ಆ್ಯಕ್ಟ್ ಮಾಡ್ತಿರಬೇಕಾದರೆ ಸುಮಾರು ಸಿನಿಮಾ ಆಫರ್ ಬರ್ತಿತ್ತು. ಸ್ಟೋರಿ ಕೇಳಿದರೆ ಮಾತ್ರ ಕೊಬ್ಬು ಅಂತಿದ್ದರು. ನನಗೆ ನಂಬಿಕೆ ಇಲ್ಲದೆ ಹೇಗೆ ಕೆಲಸ ಮಾಡಲು ಸಾಧ್ಯ? ಯಾವುದೋ ಸಿನಿಮಾದಲ್ಲಿ ಅವಕಾಶ ಬಂತು. ಒಬ್ಬರು ಮ್ಯಾನೇಜರ್ ನನಗೆ ಹೇಳಿ ಕಳಿಸಿದ್ರು. ನಾನು ಹೋಗಿದ್ದೆ, ಕೆಳಗೆ ಕಾಯುತ್ತಿದ್ದ ಅವರು ನಿಮಗಾಗಿ ಕಾಯುತ್ತಿದ್ದೆವು ಎಂದರು. ಆದರೆ ಮೇಲೆ ಹತ್ತಿ ರೂಮ್​ ಒಳಗೆ ಹೋದ ತಕ್ಷಣ ಯಾರು ಏನು ಬೇಕಾಗಿತ್ತು ಎಂದರು. ಫೋಟೋ ಇದ್ಯಾ ಎಂದರು. ಇಲ್ಲ ಅಂದೆ. ಹೀರೋ ಆಗ್ಬೇಕಂತಿಯಾ, ಫೋಟೋ ಇಲ್ವಾ
ಎಂದು ಕೇಳಿದರು. ಕಥೆ ಕೇಳಿದ್ದಕ್ಕೆ ಕಥೆ ಹೇಳಿಲ್ಲ, ಬಿಟ್ಟು ಬಂದಿದ್ದೆ ಎಂದು ತಿಳಿಸಿದ್ದಾರೆ.

ಮೊಗ್ಗಿನ ಮನಸು ಸಿನಿಮಾ ಅನೌನ್ಸ್ ಆಯ್ತು. ರಾಧಿಕಾ ನಟಿಸ್ತಿರೋದು ಗೊತ್ತಿತ್ತು. ನಾನು ಅವರಿಗೆ ಕಾಲ್ ಮಾಡಿ ಕಂಗ್ರಾಟ್ಸ್ ಮತ್ತು ಸಿನಿಮಾ ಯಶಸ್ವಿಯಾಗಲಿ ಎಂದು ಹಾರೈಸಿದ್ದರು. ಲಾಸ್ಟ್ ಶೆಡ್ಯೂಲ್ ಇತ್ತು. ನನಗೆ ಕಾಲ್ ಬಂತು. ಮೊದಲಿಗೆ ನೆಗ್ಲೆಕ್ಟ್ ಮಾಡಿದೆ ಎಂದಿದ್ದಾರೆ. ಅಷ್ಟು ಇಂಟ್ರೆಸ್ಟ್ ತೋರಿಸಲಿಲ್ಲ. ಆಮೇಲೆ ಮತ್ತೆ
ಕಾಲ್ ಬಂತು. ನನಗೆ ಇದೇನೋ ಆಟ ಆಡಿಸ್ತಿದ್ದಾರೆ ಅನಿಸಿತು, ಸಿನಿಮಾ ಮುಗಿತಾ ಬಂತು. ಹೀಗಿದ್ದಾಗ ನನಗೆ ಯಾಕೆ ಕಾಲ್ ಎಂದುಕೊಂಡೆ. ರಾಧಿಕಾಗೆ ಕಾಲ್ ಮಾಡಿ ಕೇಳಿದೆ. ಅಲ್ಲಿ ನಟಿಸಬೇಕಾದವರಿಗೆ ಕಾಲಿಗೆ ಏಟಾಗಿತ್ತು. ಅವರ ಪಾತ್ರದಲ್ಲಿ ನಾನು ನಟಿಸಬೇಕಾಗಿತ್ತು ನನಗೆ ಕಥೆ ಹೇಳಿದ್ರು. ಮುಂಗಾರು ಮಳೆ ತೆಗೆದ ನಿರ್ಮಾಪಕರು ಅಲ್ಲಿದ್ದರು. ನಾನು ಹೋಗುತ್ತಿದ್ದಂತೆ ಅವರು ನನ್ನ ಗುರುತಿಸಿ ಸೀರಿಯಲ್ ಚೆನ್ನಾಗಿದೆ ಅಂದ್ರು. ನನ್ನ ಜೊತೆ ನಡೆದುಕೊಂಡ ರೀತಿಗೆ ಇವತ್ತೂ ಖುಷಿ ಇದೆ. ಯಾವತ್ತೂ ನಾನು ನಿಮಗೆ ಖಣಿ ಎಂದಿದ್ದಾರೆ.

ನನಗೋಸ್ಕರ ತುಂಬಾ ಜನ ಕೆಲಸ ಮಾಡಿದ್ದಾರೆ. ನಿದ್ದೆಗೆಟ್ಟು ನನ್ನನ್ನು ಬೆಳೆಸಿದ್ದಾರೆ. ಅವರು ನನ್ನನ್ನು ತಳ್ಳಿ ಮುಂದೆ ನಿಲ್ಲಿಸಿದ್ದಾರೆ ಎಂದಿದ್ದಾರೆ ಯಶ್. ಕನ್ನಡ ಸಿನಿಮಾ ನೋಡಲ್ಲ, ಜನ ಬೇರೆ ಭಾಷೆಯ ಸಿನಿಮಾ ನೋಡ್ತಾರೆ ಅಂತ ಗೋಳಾಡೋದ್ಕಿಂತ ನಾವು ಒಳ್ಳೆ ಕೆಲಸ ಮಾಡಿದ್ರೆ ಜನ ಕೈ ಬಿಡಲ್ಲ. ಅಭಿಮಾನಿಗಳು ಒಳ್ಳೆ ಕೆಲಸ ಮಾಡಿದ್ರೆ ಕೈ ಹಿಡಿತಾರೆ. ನಿಜವಾದ ಗೆಲುವು ಸಿಕ್ಕೇ ಸಿಗುತ್ತೆ ಎಂದಿದ್ದಾರೆ ಯಶ್.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment