SUDDIKSHANA KANNADA NEWS/ DAVANAGERE/ DATE:10-03-2025
ದಾವಣಗೆರೆ: ಅಂತರ್ ಜಿಲ್ಲಾ ಇಬ್ಬರು ಮನೆ ಕಳ್ಳರನ್ನು ಬಂಧಿಸಿರುವ ಹದಡಿ ಪೊಲೀಸ್ ಠಾಣೆಯ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದು, 10,32,000 ರೂಪಾಯಿ ಮೌಲ್ಯದ ಸ್ವತ್ತು ವಶಪಡಿಸಿಕೊಂಡಿದ್ದಾರೆ.
ಹಾವೇರಿ ಜಿಲ್ಲೆಯ ರಾಣೇಬೆನ್ನೂರಿನ ಬ್ಯಾಡಗಿ ಗ್ರಾಮದ ಸೆಂಟ್ರಿಂಗ್ ಕೆಲಸ ಮಾಡುತ್ತಿದ್ದ ಮುಬಾರಕ್ (22), ಟೈಲ್ಸ್ ಕೆಲಸ ಮಾಡುತ್ತಿದ್ದ ಸಾದತ್ ಅಲಿಯಾಸ್ ಸುಳ್ಳ ಸಾದತ್ ಮೊಹಮ್ಮದ್ (32) ಬಂಧಿತ
ಆರೋಪಿಗಳು.
ದಾವಣಗೆರೆ ಜಿಲ್ಲೆಯ ಹದಡಿ ಪೊಲೀಸ್ ಠಾಣಾ ವ್ಯಾಪ್ತಿಯ ಕುಕ್ಕುವಾಡ ಗ್ರಾಮದ ಶಿಕ್ಷಕ ಬಿ. ಟಿ. ಮಧು ಅವರು ಮನೆ ಕಳ್ಳತನದ ಬಗ್ಗೆ ಹದಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ದಾವಣಗೆರೆಗ್ರಾಮಾಂತರ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಮತ್ತು ಮಾಯಕೊಂಡ ವೃತ್ತ ಕಛೇರಿಯ ಸಿಪಿಐ ಡಿ. ನಾಗರಾಜ್ ಮಾರ್ಗದರ್ಶನದಲ್ಲಿ ಹದಡಿ ಪೊಲೀಸ್ ಠಾಣೆಯ ಪಿಎಸ್ಐ ಶ್ರೀಶೈಲ ಪಟ್ಟಣಶೆಟ್ಟಿರವರ
ನೇತೃತ್ವದಲ್ಲಿ, ಅಪರಾಧ ವಿಭಾಗದ ಪಿಎಸ್ಐ ಶಕುಂತಲ ಹಾಗೂ ಸಿಬ್ಬಂದಿಗಳನ್ನೊಳಗೊಂಡ ತಂಡವು ಆರೋಪಿತರನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದೆ.
ಆರೋಪಿತರಿಂದ ಒಟ್ಟು 5 ಪ್ರಕರಣಗಳಲ್ಲಿನ ಸ್ವತ್ತು ಜಫ್ತಿ ಮಾಡಿದ್ದು ಆರೋಪಿತರಿಗೆ ನ್ಯಾಯಾಂಗ ಬಂದನಕ್ಕೆ ಒಪ್ಪಿಸಲಾಗಿದೆ.
ಹದಡಿ ಪೊಲೀಸ್ ಠಾಣೆಯ 2 ಪ್ರಕರಣಗಳು, ಬಸವಪಟ್ಟಣ ಪೊಲೀಸ್ ಠಾಣೆಯ 2 ಪ್ರಕರಣಗಳಲ್ಲಿ ಒಟ್ಟು 7,20,000- ರೂ. ಬೆಲೆಯ 91 ಗ್ರಾಂ ತೂಕದ ಬಂಗಾರದ ಆಭರಣಗಳು, 4000 ರೂ ಬೆಲೆಯ 50 ಗ್ರಾಂ ತೂಕದ ಬೆಳ್ಳಿಯ ಆಭರಣಗಳು ಮತ್ತು 58,000 ರೂಪಾಯಿ ನಗದು ವಶಪಡಿಸಿಕೊಳ್ಳಲಾಗಿದೆ.
ಚಿತ್ರದುರ್ಗ ಜಿಲ್ಲೆಯ ಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನವಾದ ಬುಲೆಟ್ ಬೈಕ್‌ನ್ನು (ಅಂದಾಜು ಮೊತ್ತ 1,50,000/- ರೂ.) ಹಾಗೂ ಆರೋಪಿತರ ಕಳ್ಳತನ ಮಾಡಲು ಬಳಸುತ್ತಿದ್ದ 1,00,000 ರೂ. ಬೆಲೆಯ ಸುಜಿಕಿ ಆಕ್ಸಸ್ 125ಸಿಸಿ ಸ್ಕೂಟಿಯನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿತರ ಹಿನ್ನೆಲೆ:
ಆರೋಪಿತರ ವಿರುದ್ದ ಹರಿಹರ ನಗರ ಠಾಣಾ ವಿವಿಧ ಪ್ರಕರಣಗಳಲ್ಲಿ ಆರೋಪಿತರು.
ದಾವಣಗೆರೆಯ ಕೆ.ಟಿ.ಜೆ ನಗರದಲ್ಲಿ, ಚಿತ್ರದುರ್ಗದ ಹೊಳಲ್ಕೆರೆ, ಭರಮಸಾಗರ, ಹಾವೇರಿಯ ಗುತ್ತಲ, ಬ್ಯಾಡಗಿ, ಹಾವೇರಿ ಶಹರ ಪೊಲೀಸ್ ಠಾಣೆ ಮತ್ತು ಶಿವಮೊಗ್ಗ ಜಿಲ್ಲೆಯ ಅನೇಕ ಪೊಲೀಸ್ ಠಾಣೆಗಳಲ್ಲಿ ಸುಮಾರು 15 ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಆರೋಪಿತರು ಭಾಗಿಯಾಗಿದ್ದು ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿರುತ್ತವೆ.
ಆರೋಪಿತರು ಈಗ್ಗೆ ಸುಮಾರು 5 ತಿಂಗಳ ಹಿಂದೆ ಹಾವೇರಿ ಜಿಲ್ಲಾ ಕಾರಾಗೃಹ ದಿಂದ ಬಿಡುಗಡೆಯಾಗಿದ್ದು, ಘನ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿರುತ್ತಾರೆ.
ಪತ್ತೆ ಕಾರ್ಯದಲ್ಲಿ ಭಾಗಿಯಾಗಿದ್ದ ಮೇಲ್ಕಂಡ ಅಧಿಕಾರಿಗಳು ಹಾಗೂ ಸಿಬ್ಬಂದಿಯವರಾದ ಪ್ರಕಾಶ್, ಕರಿಬಸಪ್ಪ ಕೆ.ಆರ್, ಮಾರುತಿ, ಮಂಜುನಾಥ, ಕರಿಬಸಪ್ಪ, ನಾಗರಾಜ್, ಲೋಕಾನಾಯ್ಕ, ಅರುಣಕುಮಾರ,
ಶ್ರೀನಿವಾಸ, ಸಂತೋಷಕುಮಾರ, ತಿಮ್ಮಪ್ಪ, ಚನ್ನಬಸಪ್ಪ, ಜಯಪ್ರಕಾಶ, ನೀಲಪ್ಪ, ಕಣ್ಣಪ್ಪ, ಕರಿಬಸಪ್ಪ, ಜಗದೀಶ ಅವರನ್ನು ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ್ ಅವರು ಅಭಿನಂದಿಸಿದ್ದಾರೆ.