Home ದಾವಣಗೆರೆ ಭಾರತದಲ್ಲಿ ನಿರ್ಮಾಣವಾದ ಮೊದಲ ಬುಲೆಟ್‌ ರೈಲು ಬಾಡಿ ಫ್ರೇಮ್‌ ಸಿದ್ಧ: 2027ರ ಮೇ ತಿಂಗಳಲ್ಲಿ ಟ್ರ್ಯಾಕ್ ಮೇಲೆ ಪರೀಕ್ಷೆ!
ದಾವಣಗೆರೆನವದೆಹಲಿಬೆಂಗಳೂರು

ಭಾರತದಲ್ಲಿ ನಿರ್ಮಾಣವಾದ ಮೊದಲ ಬುಲೆಟ್‌ ರೈಲು ಬಾಡಿ ಫ್ರೇಮ್‌ ಸಿದ್ಧ: 2027ರ ಮೇ ತಿಂಗಳಲ್ಲಿ ಟ್ರ್ಯಾಕ್ ಮೇಲೆ ಪರೀಕ್ಷೆ!

Share
ಭಾರತ
Share

ನವದೆಹಲಿ: ಭಾರತ ದೇಶದ ಸಾರಿಗೆ ಇತಿಹಾಸದಲ್ಲಿ ಮತ್ತೊಂದು ಮೈಲಿಗಲ್ಲು ಸ್ಥಾಪನೆಯಾಗಲು ದಿನಗಳು ಹತ್ತಿರವಾಗುತ್ತಿವೆ.

ಭಾರತದಲ್ಲೇ ಸಂಪೂರ್ಣವಾಗಿ ನಿರ್ಮಿಸಲಾದ ಮೊತ್ತಮೊದಲ ಹೈ-ಸ್ಪೀಡ್ ಬುಲೆಟ್ ರೈಲಿನ ಬಾಡಿ ಫ್ರೇಮ್ ಈಗ ಪೂರ್ಣಗೊಳ್ಳುವ ಹಂತ ತಲುಪಿದ್ದು, ಮುಂದಿನ ವರ್ಷ ಅಂದರೆ 2027ರ ಮೇ ತಿಂಗಳಲ್ಲಿ ಅಧಿಕೃತ ಪರೀಕ್ಷೆಗಾಗಿ ಹಳಿಗಳ ಮೇಲೆ ಬರಲಿದೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅಧಿಕೃತವಾಗಿ ಘೋಷಿಸಿದ್ದಾರೆ.

ಮುಂಬೈ-ಅಹಮದಾಬಾದ್ ಮಹತ್ವಾಕಾಂಕ್ಷೆಯ ಹೈ-ಸ್ಪೀಡ್ ರೈಲು ಕಾರಿಡಾರ್‌ಗಾಗಿ ಈ ಸ್ಥಳೀಯ ತಂತ್ರಜ್ಞಾನದ ರೈಲನ್ನು ಸಿದ್ಧಪಡಿಸಲಾಗುತ್ತಿದೆ. ಮೇಡ್ ಇನ್ ಇಂಡಿಯಾ  ಕಲ್ಪನೆಯಡಿಯಲ್ಲಿ ಭಾರತೀಯ ರೈಲ್ವೆಯು ತನ್ನ ತಾಂತ್ರಿಕ ಸಾಮರ್ಥ್ಯವನ್ನು ಮತ್ತೊಮ್ಮೆ ಸಾಬೀತುಪಡಿಸುತ್ತಿದೆ. ಅತ್ಯಾಧುನಿಕ ಸೌಲಭ್ಯಗಳು ಮತ್ತು ವಿಶ್ವದರ್ಜೆಯ ಸುರಕ್ಷತಾ ಮಾನದಂಡಗಳನ್ನು ಹೊಂದಿರುವ ಈ ರೈಲು ಭಾರತದ ರೈಲು ಪ್ರಯಾಣದ ಸ್ವರೂಪವನ್ನೇ ಸಂಪೂರ್ಣವಾಗಿ ಬದಲಾಯಿಸಲಿದೆ.

Share

Leave a comment

Leave a Reply

Your email address will not be published. Required fields are marked *

Recent Posts

Recent Comments

No comments to show.
Related Articles