ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಒಂದೂವರೆ ವರ್ಷದ ಪೋರನ ಟ್ಯಾಲೆಂಟ್ ಗೆ ಫಿದಾ ಗ್ಯಾರಂಟಿ: ಇಂಡಿಯಾ ಬುಕ್ ಆಫ್ ರೆಕಾರ್ಡ್ ಗೆ

On: August 22, 2023 9:41 AM
Follow Us:
---Advertisement---

SUDDIKSHANA KANNADA NEWS| DAVANAGERE| DATE:22-08-2023

ದಾವಣಗೆರೆ: ಈ ಕಂದನಿಗೆ ಕೇವಲ 1 ವರ್ಷ 3 ತಿಂಗಳು. ಸುಮಾರು 20 ದೇಶಗಳ ಧ್ವಜಗಳು, 25 ಕ್ಕೂ ಹೆಚ್ಚು ಪಕ್ಷಿಗಳು, 25 ಕ್ಕೂ ಅಧಿಕ ತರಕಾರಿಗಳು 30 ಕ್ಕೂ ಅಧಿಕ ಪ್ರಾಣಿಗಳು 18 ಹೆಸರಾಂತ ಪರ್ವತಗಳು, ಪ್ರಾಣಿಗಳು ಹಾಗೂ ವರ್ಣಮಾಲೆಗಳನ್ನ ಗುರುತಿಸುವಲ್ಲಿ ನಿಪುಣ. ಈ ಕಾರಣಕ್ಕೆ ದೇಶ ಮೆಚ್ಚುವ ಸಾಧನೆ ಮಾಡಿದ್ದಾನೆ ಈ ಪೋರ.

ಈಗ ತಾನೆ ಪ್ರಪಂಚದ ಜ್ಞಾನಕ್ಕಾಗಿ ಹಂಬಲಿಸುತ್ತಿರುವ ಪುಟ್ಟ ಪೊರ. ದೇಶವೇ ಮೆಚ್ಚುವ ಸಾಧನೆ ಮಾಡಿದ್ದಾನೆ. ಕೇವಲ 1 ವರ್ಷ ಮೂರು ತಿಂಗಳಲ್ಲೇ ಇಂಡಿಯಾ ಬುಕ್ ಆಫ್ ರೆಕಾರ್ಡ್ ಗೆ ಸೇರ್ಪಡೆ ಆಗಿದ್ದಾನೆ.

ಚನ್ನಗಿರಿ ತಾಲ್ಲೂಕಿನ ನಲ್ಲೂರು ಗ್ರಾಮದ ಕಾಂಗ್ರೆಸ್ ಮುಖಂಡ, ಗ್ರಾಮ ಪಂಚಾಯಿತಿ ಸದಸ್ಯ ಗುಡ್ಡಣ್ಣ ಗೀತಾ ದಂಪತಿ ಮೊಮ್ಮಗ ಮನ್ವಿತ್ ಸಿ.ಎಸ್ ಈ ಅಪ್ರತಿಮ ಸಾಧನೆ ಮಾಡಿದ್ದ ಪುಟ್ಟ ಕಂದ.

ಮನ್ವಿತ್ ತಾಯಿ ಸೌಮ್ಯಶ್ರೀ ಜಿ. ಹಾಗೂ ತಂದೆ ಚೇತನ್ ಎಂ. ಈ ದಂಪತಿ ವೃತ್ತಿಯಲ್ಲಿ ಸಾಫ್ಟ್‍ವೇರ್ ಇಂಜಿಯರ್. ಮನೆಯಲ್ಲಿದ್ದ ಸಂದರ್ಭದಲ್ಲಿ ತನ್ನ ಮಗ ಮನ್ವಿತ್‍ಗೆ ಸಾಮನ್ಯ ಜ್ಞಾನದ ಬಗ್ಗೆ ಹೇಳಿಕೊಟ್ಟಿದ್ದಾರೆ. ಇನ್ನೂ ಮಾತು ಬರುವ ಸಂದರ್ಭದಲ್ಲೇ ಮನ್ವಿತ್ ಅಪಾರ ಜ್ಞಾಪಕ ಶಕ್ತಿ ಹೊಂದಿದ್ದು ಇಂಡಿಯಾ ಬುಕ್ ಆಫ್ ರೆಕಾರ್ಡ್‍ಗೆ ಸೇರ್ಪಡೆಗೊಂಡಿದ್ದಾನೆ.

ಈತನ ಬುದ್ಧಿಶಕ್ತಿ ಹಾಗೂ ನೆನಪಿನ ಶಕ್ತಿ ಗುರುತಿಸಿದ ಈತನ ಪೋಷಕರು ಇಂಡಿಯಾ ಬುಕ್ ಆಫ್ ರೆಕಾರ್ಡ್‍ಗೆ ಶಿಫಾರಸ್ಸು ಮಾಡಿದ್ದರು. ಇದೀಗ ಮನ್ವಿತ್ ಈ ಸಾಧನೆಯನ್ನ ರೆಕಾರ್ಡ್ ಎಂದು ಘೋಷಣೆ ಮಾಡಿ ಪ್ರಮಾಣ ಪತ್ರವನ್ನು ನೀಡಿದ್ದಾರೆ.

ಈ ಪುಟ್ಟಪೋರನ ಸಾಧನೆ ಮೆಚ್ಚಿ ಶಾಸಕ ಬಸವರಾಜು ವಿ. ಶಿವಗಂಗಾ ಸೇರಿದಂತೆ ಗ್ರಾಮದ ಮುಖಂಡರು ಸನ್ಮಾನಿಸಿ ಅಭಿನಂಧನೆ ಸಲ್ಲಿಸಿ ಶುಭಕೋರಿದ್ದಾರೆ. ಆಡುವ ವಯಸ್ಸಲ್ಲೇ ದೊಡ್ಡ ಸಾಧನೆ ಮಾಡಿದ ಈ ಬಾಲಕ ಮುಂದೆಯೇ ಹೆಚ್ಚು ಸಾಧನೆ ಮಾಡಲಿ ಎಂಬುದು ಎಲ್ಲರ ಆಶಯ.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment