ದಂಬುಲ್ಲ: ತ್ರಿ-ರಾಷ್ಟ್ರ ಸರಣಿಯ ಫೈನಲ್ ಪಂದ್ಯದಲ್ಲಿ ಭಾರತ ‘ಎ’ ತಂಡದ ಯುವ ಆಟಗಾರ ವೈಭವ್ ಸೂರ್ಯವಂಶಿ ಅಕ್ಷರಶಃ ಬ್ಯಾಟಿಂಗ್ ಆರ್ಭಟ ನಡೆಸಿದ್ದಾರೆ.
ಶ್ರೀಲಂಕಾ ‘ಎ’ ತಂಡದ ಬೌಲರ್‌ಗಳನ್ನು ಕೇವಲ 29 ಎಸೆತಗಳಲ್ಲಿ 94 ರನ್‌ಗಳ ಸುರಿಮಳೆಗೈಯುವ ಮೂಲಕ ಪಂದ್ಯದ ಗತಿಯನ್ನೇ ಬದಲಿಸಿದ್ದಾರೆ.
ಈ ಅದ್ಭುತ ಇನ್ನಿಂಗ್ಸ್‌ನಲ್ಲಿ ಸೂರ್ಯವಂಶಿ 10 ಬೌಂಡರಿ ಮತ್ತು 8 ಭರ್ಜರಿ ಸಿಕ್ಸರ್‌ಗಳನ್ನು ಸಿಡಿಸಿದ್ದಾರೆ. ವಿಶೇಷವಾಗಿ, 11 ಎಸೆತಗಳಲ್ಲಿ ತಮ್ಮ ಅರ್ಧಶತಕವನ್ನು ಪೂರೈಸುವ ಮೂಲಕ ಲಿಸ್ಟ್-ಎ ಕ್ರಿಕೆಟ್‌ನಲ್ಲಿ ಅತಿ ವೇಗದ ಅರ್ಧಶತಕದ ದಾಖಲೆ ಬರೆದಿದ್ದಾರೆ.
ಮೊಹಮ್ಮದ್ ಶಿರಾಜ್ ಅವರ ಒಂದೇ ಓವರ್‌ನಲ್ಲಿ 26 ರನ್ ಸಿಡಿಸಿ ಪಂದ್ಯದ ಮೇಲೆ ಭಾರತ ತಂಡದ ಹಿಡಿತವನ್ನು ಬಿಗಿಗೊಳಿಸಿದರು.
ಪ್ರಸ್ತುತ, ಭಾರತ ತಂಡವು ಕ್ರೀಸ್‌ನಲ್ಲಿ ಕ್ಯಾಪ್ಟನ್ ತಿಲಕ್ ವರ್ಮಾ ಮತ್ತು ರುತುರಾಜ್ ಗಾಯಕ್ವಾಡ್ ಅವರೊಂದಿಗೆ ಬೃಹತ್ ಮೊತ್ತದತ್ತ ದಾಪುಗಾಲು ಹಾಕುತ್ತಿದೆ.





Leave a comment