SUDDIKSHANA KANNADA NEWS/ DAVANAGERE/ DATE:08-03-2025
ನವದೆಹಲಿ: ನಾನು ಸೌಹಾರ್ದಯುತ ಮಾತುಕತೆ ನಡೆಸಿದ್ದೇನೆ. ಅದು ಖಾಸಗಿ ಮಾತುಕತೆ ಅಷ್ಟೇ. ಇದು ಎಚ್‌ಎಎಲ್ ಅಧಿಕಾರಿಗಳನ್ನು ‘ಖಂಡಿಸಿದ’ ವಿಡಿಯೋ ಬಗ್ಗೆ ಐಎಎಫ್ ಮುಖ್ಯಸ್ಥರ ಸ್ಪಷ್ಟನೆ.
ಸ್ನೇಹಯುತ ಮಾತುಕತೆ, ಖಾಸಗಿ ಮಾತುಕತೆ ನಡೆಸಿದ್ದು, ತೇಜಸ್ ಜೆಟ್ ವಿಳಂಬದ ಬಗ್ಗೆ ಎಚ್‌ಎಎಲ್ ಅಧಿಕಾರಿಗಳನ್ನು ‘ಖಂಡಿಸಿದ’ ವೈರಲ್ ವಿಡಿಯೋದ ಬಗ್ಗೆ ಮೊದಲ ಬಾರಿಗೆ ಐಎಎಫ್ ಮುಖ್ಯಸ್ಥರು ಸ್ಪಷ್ಟನೆ ಕೊಟ್ಟಿದ್ದಾರೆ.
“ನಾನು ಎಚ್‌ಎಎಲ್‌ನ ತಾಂತ್ರಿಕ ಸಿಬ್ಬಂದಿಯೊಂದಿಗೆ ಸ್ನೇಹಪರ ಮಾತುಕತೆ ನಡೆಸುತ್ತಿದ್ದೆ. ಅದನ್ನು ಹೊರಹಾಕಿದ ರೀತಿ ಸರಿಯಲ್ಲ” ಎಂದು ವಾಯುಪಡೆಯ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಎಪಿ ಸಿಂಗ್, ಇಂಡಿಯಾ ಟುಡೇಗೆ ತಿಳಿಸಿದ್ದಾರೆ.
ಕಾನ್ಕ್ಲೇವ್ 2025 ರಲ್ಲಿ ಇಂಡಿಯಾ ಟುಡೇ ನ್ಯೂಸ್ ನಿರ್ದೇಶಕ ರಾಹುಲ್ ಕನ್ವಾಲ್ ಮತ್ತು ವ್ಯವಸ್ಥಾಪಕ ಸಂಪಾದಕ ಗೌರವ್ ಸಾವಂತ್ ಅವರೊಂದಿಗೆ ನಡೆಸಿದ ಸಂವಾದದಲ್ಲಿ ಹೇಳಿದರು.