SUDDIKSHANA KANNADA NEWS/ DAVANAGERE/ DATE:11-03-2025
ಮುಂಬೈ: ಚಾಂಪಿಯನ್ಸ್ ಟ್ರೋಫಿ ಗೆದ್ದ ಬಳಿಕ ಟೀಂ ಇಂಡಿಯಾ ಏಕದಿನ ತಂಡದ ನಾಯಕ ರೋಹಿತ್ ಶರ್ಮಾ ಗುಡ್ ನ್ಯೂಸ್ ನೀಡಿದ್ದಾರೆ. ವದಂತಿಗಳು ಹಬ್ಬಿದ್ದು, ನಾನು ಯಾವುದೇ ಕಾರಣಕ್ಕೂ ನಿವೃತ್ತಿ ಪಡೆಯುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
2027 ರ ವಿಶ್ವಕಪ್ ಆಡುತ್ತೇನೆ. ಈ ಬಗ್ಗೆ ಯೋಚಿಸುತ್ತಿದ್ದೇನೆ. ನಾನು ನಿವೃತ್ತಿಯಾಗುತ್ತೇನೆಂಬ ವದಂತಿ ಹಬ್ಬುತ್ತಿದೆ. ಯಾಕೆ ಎಂಬುದು ಗೊತ್ತಿಲ್ಲ. ಆದ್ರೆ, ನಾನು ಫಿಟ್ ಇದ್ದೇನೆ. ಮುಂದಿನ ವಿಶ್ವಕಪ್ ವರೆಗೆ ಆಡುತ್ತೇನೆ. ಈ ಬಗ್ಗೆ ರೆಡಿಯಾಗುತ್ತಿದ್ದೇನೆ ಎಂದು ತಿಳಿಸಿದ್ದಾರೆ.
ಇನ್ನು 2 ತಿಂಗಳು ಕಳೆದರೆ ರೋಹಿತ್ ಶರ್ಮಾ 38ನೇ ವಸಂತಕ್ಕೆ ಕಾಲಿಡಲಿದ್ದಾರೆ. ಭಾರತದ ಮುಂದಿನ ಪ್ರಮುಖ ಏಕದಿನ ಟೂರ್ನಮೆಂಟ್ 2027 ರ ಏಕದಿನ ವಿಶ್ವಕಪ್. ಆದ್ರೆ. ಬಿಸಿಸಿಐ ಎಲ್ಲಿಯವರೆಗೆ ರೋಹಿತ್ ಶರ್ಮಾರನ್ನು ಸೆಲೆಕ್ಟ್ ಮಾಡುತ್ತದೆ ಎಂಬ ಕುತೂಹಲ ಎಲ್ಲರಲ್ಲಿಯೂ ಇದ್ದೇ ಇದೆ.
2025 ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ಜಯಗಳಿಸಿದ ನಂತರ ಅವರ ಏಕದಿನ ಆಟದ ಬಗ್ಗೆ ಸ್ಪಷ್ಟ ಹೇಳಿಕೆ ನೀಡಿದರು. “ನಾನು ಈ ಸ್ವರೂಪದಿಂದ ನಿವೃತ್ತಿ ಹೊಂದುವುದಿಲ್ಲ. ಮುಂದೆ ಯಾವುದೇ ವದಂತಿಗಳು ಹರಡದಂತೆ ನೋಡಿಕೊಳ್ಳುತ್ತೇನೆ. ಕೋಯಿ ಭವಿಷ್ಯದ ಯೋಜನೆ ಹೈ ನಹಿ, ಜೋ ಚಲ್ ರಹಾ ಹೈ ಚಲೇಗಾ (ಭವಿಷ್ಯದ ಯೋಜನೆ ಇಲ್ಲ, ಏನು ನಡೆಯುತ್ತಿದೆಯೋ ಅದು ಹಾಗೆಯೇ ಮುಂದುವರಿಯುತ್ತದೆ),” ಎಂದು ರೋಹಿತ್ ಶರ್ಮಾ ಸ್ಪಷ್ಟಪಡಿಸಿದರು.
“ಸಾಕಷ್ಟು ಕ್ರಿಕೆಟ್ ಆಡಿದ ಹುಡುಗರಲ್ಲಿಯೂ ಸಹ ಬಹಳಷ್ಟು ಹಸಿವು ಇರುತ್ತದೆ. ಅದು ಕಿರಿಯ ಆಟಗಾರರ ಮೇಲೂ ಪರಿಣಾಮ ಬೀರುತ್ತದೆ. ನಮ್ಮಲ್ಲಿ ನಿಜವಾದ ದಿಗ್ಗಜರಾದ ಐದರಿಂದ ಆರು ಆಟಗಾರರಿದ್ದಾರೆ. ಇದು ನಮ್ಮೆಲ್ಲರಿಗೂ ಕೆಲಸವನ್ನು ಸುಲಭಗೊಳಿಸುತ್ತದೆ ಎಂದು ಹೇಳುವ ಮೂಲಕ ಅಲ್ಲಿಯವರೆಗೆ ವಿರಾಟ್ ಕೊಹ್ಲಿ, ಮೊಹಮ್ಮದ್ ಶಮಿ, ರವೀಂದ್ರ ಜಡೇಜಾ ಸೇರಿದಂತೆ ಹಿರಿಯರು ಇರಲಿದ್ದಾರೆ ಎಂಬ ಸುಳಿವು ಕೊಟ್ಟಿದ್ದಾರೆ.