ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ನಾನು ನಿವೃತ್ತಿ ಹೊಂದಲ್ಲ, 2027ರ ವಿಶ್ವಕಪ್ ನಲ್ಲಿ ಆಡೇ ಆಡ್ತೇನೆ: ರೋಹಿತ್ ಶರ್ಮಾ ಖಡಕ್ ಸಂದೇಶ!

On: March 10, 2025 9:39 PM
Follow Us:
---Advertisement---

SUDDIKSHANA KANNADA NEWS/ DAVANAGERE/ DATE:11-03-2025

ಮುಂಬೈ: ಚಾಂಪಿಯನ್ಸ್ ಟ್ರೋಫಿ ಗೆದ್ದ ಬಳಿಕ ಟೀಂ ಇಂಡಿಯಾ ಏಕದಿನ ತಂಡದ ನಾಯಕ ರೋಹಿತ್ ಶರ್ಮಾ ಗುಡ್ ನ್ಯೂಸ್ ನೀಡಿದ್ದಾರೆ. ವದಂತಿಗಳು ಹಬ್ಬಿದ್ದು, ನಾನು ಯಾವುದೇ ಕಾರಣಕ್ಕೂ ನಿವೃತ್ತಿ ಪಡೆಯುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

2027 ರ ವಿಶ್ವಕಪ್ ಆಡುತ್ತೇನೆ. ಈ ಬಗ್ಗೆ ಯೋಚಿಸುತ್ತಿದ್ದೇನೆ. ನಾನು ನಿವೃತ್ತಿಯಾಗುತ್ತೇನೆಂಬ ವದಂತಿ ಹಬ್ಬುತ್ತಿದೆ. ಯಾಕೆ ಎಂಬುದು ಗೊತ್ತಿಲ್ಲ. ಆದ್ರೆ, ನಾನು ಫಿಟ್ ಇದ್ದೇನೆ. ಮುಂದಿನ ವಿಶ್ವಕಪ್ ವರೆಗೆ ಆಡುತ್ತೇನೆ. ಈ ಬಗ್ಗೆ ರೆಡಿಯಾಗುತ್ತಿದ್ದೇನೆ ಎಂದು ತಿಳಿಸಿದ್ದಾರೆ.

ಇನ್ನು 2 ತಿಂಗಳು ಕಳೆದರೆ ರೋಹಿತ್ ಶರ್ಮಾ 38ನೇ ವಸಂತಕ್ಕೆ ಕಾಲಿಡಲಿದ್ದಾರೆ. ಭಾರತದ ಮುಂದಿನ ಪ್ರಮುಖ ಏಕದಿನ ಟೂರ್ನಮೆಂಟ್ 2027 ರ ಏಕದಿನ ವಿಶ್ವಕಪ್. ಆದ್ರೆ. ಬಿಸಿಸಿಐ ಎಲ್ಲಿಯವರೆಗೆ ರೋಹಿತ್ ಶರ್ಮಾರನ್ನು ಸೆಲೆಕ್ಟ್ ಮಾಡುತ್ತದೆ ಎಂಬ ಕುತೂಹಲ ಎಲ್ಲರಲ್ಲಿಯೂ ಇದ್ದೇ ಇದೆ.

2025 ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ಜಯಗಳಿಸಿದ ನಂತರ ಅವರ ಏಕದಿನ ಆಟದ ಬಗ್ಗೆ ಸ್ಪಷ್ಟ ಹೇಳಿಕೆ ನೀಡಿದರು. “ನಾನು ಈ ಸ್ವರೂಪದಿಂದ ನಿವೃತ್ತಿ ಹೊಂದುವುದಿಲ್ಲ. ಮುಂದೆ ಯಾವುದೇ ವದಂತಿಗಳು ಹರಡದಂತೆ ನೋಡಿಕೊಳ್ಳುತ್ತೇನೆ. ಕೋಯಿ ಭವಿಷ್ಯದ ಯೋಜನೆ ಹೈ ನಹಿ, ಜೋ ಚಲ್ ರಹಾ ಹೈ ಚಲೇಗಾ (ಭವಿಷ್ಯದ ಯೋಜನೆ ಇಲ್ಲ, ಏನು ನಡೆಯುತ್ತಿದೆಯೋ ಅದು ಹಾಗೆಯೇ ಮುಂದುವರಿಯುತ್ತದೆ),” ಎಂದು ರೋಹಿತ್ ಶರ್ಮಾ ಸ್ಪಷ್ಟಪಡಿಸಿದರು.

“ಸಾಕಷ್ಟು ಕ್ರಿಕೆಟ್ ಆಡಿದ ಹುಡುಗರಲ್ಲಿಯೂ ಸಹ ಬಹಳಷ್ಟು ಹಸಿವು ಇರುತ್ತದೆ. ಅದು ಕಿರಿಯ ಆಟಗಾರರ ಮೇಲೂ ಪರಿಣಾಮ ಬೀರುತ್ತದೆ. ನಮ್ಮಲ್ಲಿ ನಿಜವಾದ ದಿಗ್ಗಜರಾದ ಐದರಿಂದ ಆರು ಆಟಗಾರರಿದ್ದಾರೆ. ಇದು ನಮ್ಮೆಲ್ಲರಿಗೂ ಕೆಲಸವನ್ನು ಸುಲಭಗೊಳಿಸುತ್ತದೆ ಎಂದು ಹೇಳುವ ಮೂಲಕ ಅಲ್ಲಿಯವರೆಗೆ ವಿರಾಟ್ ಕೊಹ್ಲಿ, ಮೊಹಮ್ಮದ್ ಶಮಿ, ರವೀಂದ್ರ ಜಡೇಜಾ ಸೇರಿದಂತೆ ಹಿರಿಯರು ಇರಲಿದ್ದಾರೆ ಎಂಬ ಸುಳಿವು ಕೊಟ್ಟಿದ್ದಾರೆ.

ಯೋಗರಾಜ್

ಇದು ಡಿಜಿಟಲ್ ಯುಗ. ಕೈ ಬೆರಳಿನಲ್ಲೇ ಸುದ್ದಿಗಳು ಜನರಿಗೆ ತಲುಪಬೇಕು ಎಂಬುದು ನಮ್ಮ ಸದುದ್ದೇಶ. ಈಗಾಗಲೇ ಲಕ್ಷಾಂತರ ಓದುಗರನ್ನೊಳಗೊಂಡ ಈ ಡಿಜಿಟಲ್ ಮಾಧ್ಯಮ ಜನಮನ ಗೆದ್ದಿದೆ. ಡೈಲಿಹಂಟ್ ನಲ್ಲಿಯೂ ಜನರ ಕೈಬೆರಳಿನಲ್ಲೇ ಸಿಗುತ್ತದೆ. ದಾವಣಗೆರೆ, ಕೃಷಿ, ಉದ್ಯೋಗ, ವಾಣಿಜ್ಯ, ಅಪರಾಧ ಜಗತ್ತಿನ, ರಾಷ್ಟ್ರ, ಅಂತಾರಾಷ್ಟ್ರೀಯ ಸೇರಿದಂತೆ ಓದುಗರಿಗೆ ಬೇಕಾದ ಮಾಹಿತಿ ಒದಗಿಸಲಾಗುತ್ತಿದೆ. ಭಾರೀ ಮಟ್ಟದಲ್ಲಿ ಪ್ರತಿಕ್ರಿಯೆಯೂ ಬಂದಿದೆ, ಬರುತ್ತಲೇ ಇದೆ. ಓದುಗರು ನೀಡಿದ ಪ್ರೋತ್ಸಾಹ, ತೋರಿದ ಪ್ರೀತಿ, ನೀಡುತ್ತಿರುವ ಮಾರ್ಗದರ್ಶನವೇ ಈ ಮಾಧ್ಯಮ ಇಷ್ಟೊಂದು ಪ್ರಮಾಣದಲ್ಲಿ ಬೆಳೆಯಲು ಸಾಧ್ಯವಾಗಿದೆ. ದಾವಣಗೆರೆಯಲ್ಲಿ ನಂಬರ್ ಒನ್ ನ್ಯೂಸ್ ಪೋರ್ಟಲ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಎಷ್ಟೋ ಮಂದಿ ನ್ಯೂಸ್ ಪ್ರಕಟಿಸುವಂತೆ ಹೇಳುತ್ತಲೇ ಇದ್ದಾರೆ. ದಾವಣಗೆರೆ ಜಿಲ್ಲೆ ಮಾತ್ರವಲ್ಲ, ಬೇರೆ ಜಿಲ್ಲೆಗಳಿಂದಲೂ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ. ಸ್ಥಳೀಯ ಸಮಸ್ಯೆಗಳು, ಜನರಿಗೆ ಮತ್ತಷ್ಟು ಹತ್ತಿರವಾಗುವ ಸದುದ್ದೇಶದಿಂದ ಸುದ್ದಿಗಳನ್ನು ಪ್ರಕಟಿಸಲಾಗುವುದು. ವೈಯಕ್ತಿಕ ವಿಚಾರ, ಆಸ್ತಿ ವಿಚಾರ, ಗಂಡ ಹೆಂಡತಿ ಸಮಸ್ಯೆಯಂಥ ಸುದ್ದಿಗಳನ್ನ ಬಿತ್ತರಿಸಲಾಗುವುದಿಲ್ಲ. ನಿಜವಾದ ಸಮಸ್ಯೆಗಳಿದ್ದರೆ ಖಂಡಿತವಾಗಿಯೂ ಪ್ರಕಟಿಸಲಾಗುವುದು. ಹಾಗಾಗಿ, ಹೊಸ ವೇದಿಕೆ ಕಲ್ಪಿಸಿಕೊಡಲಾಗುತ್ತಿದೆ. ವಾಟ್ಸಪ್ ನಂಬರ್: 96869-97836, ಇ-ಮೇಲ್ ವಿಳಾಸ: suddikshana.com ಈ ವಿಳಾಸಕ್ಕೆ ಕಳುಹಿಸಿಕೊಡಿ. ಅರ್ಹವಿದ್ದ ಸುದ್ದಿಗಳನ್ನು ಖಂಡಿತವಾಗಿಯೂ ಪ್ರಕಟಿಸಲಾಗುತ್ತದೆ. ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

ಮಿಸ್ ಮಾಡ್ದೆ ಓದಿ

ಸಾಲ

ವೈಯಕ್ತಿಕ ಸಾಲ ತೆಗೆದುಕೊಳ್ಳುತ್ತೀರಾ: ಹೇಗೆ ಬಳಸಬೇಕೆಂಬ 5 ಸ್ಮಾರ್ಟ್ ಐಡಿಯಾಗಳು ಇಲ್ಲಿವೆ

ಕ್ರೆಡಿಟ್ ಕಾರ್ಡ್‌

ಕ್ರೆಡಿಟ್ ಕಾರ್ಡ್‌ನಲ್ಲಿ ಕನಿಷ್ಠ ಬಾಕಿ ಮಾತ್ರ ಪಾವತಿಸುವುದರಿಂದ ಹಣಕಾಸು ಮತ್ತು ಕ್ರೆಡಿಟ್ ಸ್ಕೋರ್‌ಗೆ ಹಾನಿಯಾಗುತ್ತೆ, ಹೇಗೆ?

ಪ್ರಿಯಾಂಕ್ ಖರ್ಗೆ

ದೇಶದ ಸಮಸ್ಯೆಗಳಿಗೆ ವಿಶ್ವಗುರು ಮೋದಿ ಹೊಣೆಗಾರಿಕೆ ಹೊರುವುದಿಲ್ಲ!: ಪ್ರಿಯಾಂಕ್ ಖರ್ಗೆ ಕಿಡಿಕಿಡಿ

ಸಿದ್ದರಾಮಯ್ಯ

ಬೆಳಗಾವಿ ಡಿಸಿ ಕಬ್ಬು ಪ್ರತಿ ಟನ್ ಗೆ 3200 ರೂ. ನಿಗದಿಗೆ ಕಾರ್ಖಾನೆಗಳು ಒಪ್ಪಿಕೊಡರೆ ಸಮಸ್ಯೆ ಪರಿಹರಿಸಲು ಕ್ರಮ: ಸಿದ್ದರಾಮಯ್ಯ ಭರವಸೆ

ಸಕ್ಕರೆ

ಸಕ್ಕರೆ, ಎಥೆನಾಲ್, ವಿದ್ಯುತ್ ಉತ್ಪಾದಿಸಿದರೂ ಸಕ್ಕರೆ ಕಾರ್ಖಾನೆ ನಡೆಸುವುದು ಬಹಳ ಕಷ್ಟ: ಮಾಲೀಕರ ಅಳಲು!

ಸಿದ್ದರಾಮಯ್ಯ

MSP ದರ ಹೆಚ್ಚಳಕ್ಕೆ ರಾಜ್ಯದ ಕೇಂದ್ರ ಸಚಿವರು ಸಹಕರಿಸುತ್ತಿಲ್ಲ ಮೋದಿ ಜೊತೆ ಮಾತಾಡ್ತಿಲ್ಲ, ಏನು ಮಾಡೋದು?: ಸಿದ್ದರಾಮಯ್ಯ ಪ್ರಶ್ನೆ

Leave a Comment