SUDDIKSHANA KANNADA NEWS/ DAVANAGERE/ DATE-10-05-2025
ದಾವಣಗೆರೆ: ದಾವಣಗೆರೆ ಪಕ್ಕದಲ್ಲಿರುವ ಹುಬ್ಬಳ್ಳಿ ನಮ್ಮ ಊರು. ದಾವಣಗೆರೆಯೊಂದಿಗೆ ಬಹಳಷ್ಟು ವರ್ಷಗಳ ನಂಟು ಇದ್ದು, ಮೂಲತಹ ನಾಟಕ ಕಂಪನಿಯಿಂದ ಕಲಾವಿದನಾಗಿ ಹೊರಹೊಮ್ಮಿದ್ದು, ಇದೇ ಊರಿನಲ್ಲಿ ನಮ್ಮ ತಂದೆಯವರ ನಾಟಕ ಕಂಪನಿ ಇತ್ತು ಎಂದು ನಟ ಶರಣ್ ಮೆಲುಕು ಹಾಕಿದ್ದಾರೆ.
ಅವರುಜಿಎಂ ವಿಶ್ವವಿದ್ಯಾಲಯದ ಆವರಣದಲ್ಲಿರವ ಆಂಫಿಥಿಯೇಟರ್ ನಲ್ಲಿ ಸಂಜೆ ಹಮ್ಮಿಕೊಳ್ಳಲಾಗಿದ್ದ ಮಲ್ಲಿಕಾ ಸಾಂಸ್ಕೃತಿಕ ಉತ್ಸವದ ವಿಶೇಷ ಅತಿಥಿಗಳಾಗಿ ಆಗಮಿಸಿ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಇಲ್ಲಿದ್ದಂತಹ ನಾಟಕ ಕಂಪನಿಗಳು ವರ್ಷಗಟ್ಟಲೆ ನಾಟಕಗಳು ಪ್ರದರ್ಶನಗೊಂಡ ಇತಿಹಾಸವುಳ್ಳ ದಾವಣಗೆರೆಯು ಕಲೆಯ ತವರೂರಾಗಿದೆ. ಜಿಎಂ ಶೈಕ್ಷಣಿಕ ಸಂಸ್ಥೆಯು ಕಲೆಯ ಉತ್ಸವದ ಮಲ್ಲಿಕಾ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯಾಗಿ ಕಲಾವಿದನಾದ ನನ್ನನ್ನು ಆಹ್ವಾನಿಸಿ ಪ್ರೋತ್ಸಾಹ ನೀಡುತ್ತಿರುವುದು ಕಲಾವಿದರ ಬೆಳೆಸುವ ಉದ್ದೇಶ ಇದರಲ್ಲಿ ಅಡಗಿದೆ. ಇದು ಹೆಮ್ಮೆ ಅನಿಸಲಿದೆ ಅಲ್ಲದೇ ಹೃದಯ ತುಂಬಿ ಬರಲಿದೆ ಎಂದು ಖುಷಿ ಹಂಚಿಕೊಂಡರು.
ಜಿಎಂ ವಿಶ್ವವಿದ್ಯಾಲಯದ ಕುಲಸಚಿವರಾದ ಡಾ. ಸುನೀಲ್ ಕುಮಾರ್ ಬಿ.ಎಸ್ ಪ್ರಾಸ್ತವಿಕವಾಗಿ ಮಾತನಾಡಿ, ಮಲ್ಲಿಕಾ ಉತ್ಸವವು ಕಲೆ, ಸಂಗೀತ, ನೃತ್ಯ, ನಾಟಕ ಮತ್ತು ಕ್ರೀಡೆಗಳಂತಹ ವಿವಿಧ ಕ್ಷೇತ್ರಗಳಲ್ಲಿ ವಿದ್ಯಾರ್ಥಿಗಳ ಪ್ರತಿಭೆಯನ್ನು ಪ್ರದರ್ಶಿಸುವ ಎರಡು ದಿನಗಳ ಕಾರ್ಯಕ್ರಮವಾಗಿದೆ. ನಮ್ಮ ಸಂಸ್ಥೆಯು ಶೈಕ್ಷಣಿಕ ವಿದ್ಯಾಭ್ಯಾಸಕ್ಕೂ ಒತ್ತು ನೀಡಿ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲಾಗುತ್ತಿದ್ದು, ಶ್ರೀಮತಿ ಜಿ.ಎಂ. ಹಾಲಮ್ಮ ಮತ್ತು ಶ್ರೀ ಜಿ. ಮಲ್ಲಿಕಾರ್ಜುನಪ್ಪ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಕೊಡಲ್ಪಡುವ ಕಾಲೇಜು ಮಟ್ಟದಲ್ಲಿ ಪ್ರಸಕ್ತ ರ‍್ಯಾಂಕ್ ಮತ್ತು ಶೇ. 90 ಕಿಂತ ಹೆಚ್ಚು ಅಂಕ ಪಡೆದ
ಜಿಎಂ ಶಿಕ್ಷಣ ಸಂಸ್ಥೆಯ ಸುಮಾರು 24 ಇಂಜಿನಿಯರಿಂಗ್ ಸೇರಿದಂತೆ ಪದವಿ ವಿದ್ಯಾರ್ಥಿಗಳಿಗೆ ತಲಾ 10 ಗ್ರಾಂ ಚಿನ್ನದ ನಾಣ್ಯವನ್ನು ವಿತರಿಸಿ ಪುರಸ್ಕರಿಸಲಾಗುತ್ತಿದೆ ಎಂದು ಹೇಳಿದರು.
ಗೌರವ ಅತಿಥಿಗಳಾಗಿ ಜಿಎಂಐಟಿ ಕಾಲೇಜಿನ ಆಡಳಿತ ಅಧಿಕಾರಿಗಳಾದ ವೈ.ಯು. ಸುಭಾಷ್ ಚಂದ್ರ ಉಪಸ್ಥಿತರಿದ್ದರು. ಜಿಎಂ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಎಸ್.ಆರ್. ಶಂಕಪಾಲ್, ಸಹ ಕುಲಪತಿಗಳಾದ ಡಾ. ಹೆಚ್.ಡಿ. ಮಹೇಶಪ್ಪ, ವಿದ್ಯಾರ್ಥಿಗಳ ವ್ಯವಹಾರಗಳ ನಿರ್ದೇಶನಾಲಯದ ನಿರ್ದೇಶಕರಾದ ಡಾ. ಹೆಚ್.ಎಸ್. ಕಿರಣ್ ಕುಮಾರ್ ಉಪಸ್ಥಿತರಿದ್ದರು. ಇಸಿಇ ವಿಭಾಗದ ವಿದ್ಯಾರ್ಥಿಗಳಾದ ಇಂಚರ ಮತ್ತು ತಂಡದಿಂದ ಪ್ರಾರ್ಥನಾ ನೃತ್ಯ ಪ್ರದರ್ಶಿಸಿದರು. ಜಿಎಂಐಟಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಎಂ.ಬಿ. ಸಂಜಯ್ ಪಾಂಡೆ ಸ್ವಾಗತಿಸಿದರು.