Home ಕ್ರೈಂ ನ್ಯೂಸ್ ಹೈದರಾಬಾದ್‌ನಲ್ಲಿ ಹೈ ಅಲರ್ಟ್ ಘೋಷಣೆ: ಮುಂಬೈ ಮಾದರಿಯ 26/11 ಉಗ್ರ ದಾಳಿ ನಡೆಸುವುದಾಗಿ ಲಷ್ಕರ್-ಎ-ತೈಬಾ ಬೆದರಿಕೆ ಇಮೇಲ್
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ಹೈದರಾಬಾದ್‌ನಲ್ಲಿ ಹೈ ಅಲರ್ಟ್ ಘೋಷಣೆ: ಮುಂಬೈ ಮಾದರಿಯ 26/11 ಉಗ್ರ ದಾಳಿ ನಡೆಸುವುದಾಗಿ ಲಷ್ಕರ್-ಎ-ತೈಬಾ ಬೆದರಿಕೆ ಇಮೇಲ್

Share
ಹೈದರಾಬಾದ್‌
Share

ಹೈದರಾಬಾದ್: ಲಷ್ಕರ್-ಎ-ತೈಬಾ (LeT) ಉಗ್ರ ಸಂಘಟನೆಯ ಹೆಸರಿನಲ್ಲಿ ಬಂದಿರುವ ಬೆದರಿಕೆ ಇಮೇಲ್ ಒಂದರಿಂದ ಹೈದರಾಬಾದ್ ನಗರದಲ್ಲಿ ತೀವ್ರ ಆತಂಕ ಸೃಷ್ಟಿಯಾಗಿದ್ದು, ಪೊಲೀಸರು ಹೈ ಅಲರ್ಟ್ ಘೋಷಿಸಿದ್ದಾರೆ.

ಹೈದರಾಬಾದ್‌ನ ಕಾಚಿಗುಡ ರೈಲು ನಿಲ್ದಾಣ ಹಾಗೂ ಹೋದಲ್ಲಿರುವ ‘ಹೋಟೆಲ್ ಟೂರಿಸ್ಟ್ ಪ್ಲಾಜಾ’ ಮೇಲೆ ಬಾಂಬ್ ದಾಳಿ ನಡೆಸಿ, ಕನಿಷ್ಠ 300 ಜನರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಲಾಗಿದೆ.

ನವೆಂಬರ್ 21 ರಂದು ಹೈದರಾಬಾದ್ ಪೊಲೀಸರ ವಿಶೇಷ ಶಾಖೆಯು ಈ ಕುರಿತು ಸುರಕ್ಷತಾ ಮುನ್ನೆಚ್ಚರಿಕೆ ಸಂದೇಶ ಹೊರಡಿಸಿದೆ. 2008 ರ ಮುಂಬೈ 26/11 ಉಗ್ರ ದಾಳಿಯ ದಿನವಾದ ನವೆಂಬರ್ 26 ರಂದೇ ಹೈದರಾಬಾದ್‌ನಲ್ಲಿಯೂ ಅದೇ ರೀತಿಯ ದಾಳಿ ಪುನರಾವರ್ತಿಸುವುದಾಗಿ ಮೇಲ್‌ನಲ್ಲಿ ಎಚ್ಚರಿಸಲಾಗಿದೆ. ಭಾರತೀಯ ಸೇನೆಯಿಂದ ಹತ್ಯೆಗೀಡಾದ ಲಷ್ಕರ್ ಕಮಾಂಡರ್ ಲತೀಫ್ ಭಟ್ ಮತ್ತು ಇತರ ಸಹಚರರ ಸಾವಿಗೆ ಪ್ರತಿಕಾರ ತೀರಿಸಿಕೊಳ್ಳಲು ಈ ದಾಳಿ ನಡೆಸುವುದಾಗಿ ಕಳುಹ ಕಳುಹಿಸಿರುವ ವ್ಯಕ್ತಿ ಬೆದರಿಕೆ ಹಾಕಿದ್ದಾನೆ.

ಗುರಿಯಾಗಿರುವ ಪ್ರಮುಖ ಸ್ಥಳಗಳು: ಕಾಚಿಗುಡ ರೈಲು ನಿಲ್ದಾಣ ಹಾಗೂ ಕಾಚಿಗುಡದ ‘ಹೋಟೆಲ್ ಟೂರಿಸ್ಟ್ ಪ್ಲಾಜಾ’ ಉಗ್ರರ ಹಿಟ್‌ಲಿಸ್ಟ್‌ನಲ್ಲಿವೆ ಎಂದು ಮೇಲ್‌ನಲ್ಲಿ ಉಲ್ಲೇಖಿಸಲಾಗಿದ್ದು, ಈ ಸುತ್ತಮುತ್ತ ಭದ್ರತೆಯನ್ನು ತೀವ್ರಗೊಳಿಸಲಾಗಿದೆ.

ಪೊಲೀಸರಿಂದ ಕಣ್ಗಾವಲು ಹಾಗೂ ತಪಾಸಣೆ: ನಗರದ ಎಲ್ಲಾ ಎಸ್‌.ಎಚ್‌.ಒಗಳು, ಎಸಿಪಿಗಳು ಮತ್ತು ಡಿಸಿಪಿಗಳಿಗೆ ಹೈ ಅಲರ್ಟ್‌ನಲ್ಲಿರಲು ಸೂಚಿಸಲಾಗಿದೆ. ಜನದಟ್ಟಣೆ ಪ್ರದೇಶಗಳು, ಧಾರ್ಮಿಕ ಸ್ಥಳಗಳು, ಬಸ್ ನಿಲ್ದಾಣಗಳು ಹಾಗೂ ಪ್ರಮುಖ ಜಾಗಗಳಲ್ಲಿ ತೀವ್ರ ವಾಹನ ತಪಾಸಣೆ ಮತ್ತು ವಿಧ್ವಂಸಕ ಕೃತ್ಯ ತಡೆ ತಪಾಸಣೆ ನಡೆಸಲಾಗುತ್ತಿದೆ.

ಸೈಬರ್ ಕ್ರೈಮ್ ತನಿಖೆ: ನಕಲಿ ಅಥವಾ ಬೆದರಿಕೆ ಇಮೇಲ್ ಕಳುಹಿಸಿರುವ ಕಿಡಿಗೇಡಿಗಳ ಜಾಡು ಹಿಡಿಯಲು ಸೈಬರ್ ಕ್ರೈಮ್ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಸಾರ್ವಜನಿಕರಿಗೆ ಮನವಿ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಹೈದರಾಬಾದ್ ನಗರ ಪೊಲೀಸ್ ಇಲಾಖೆ ಮನವಿ ಮಾಡಿದೆ. ಯಾವುದೇ ಶಂಕಾಸ್ಪದ ವ್ಯಕ್ತಿಗಳು ಅಥವಾ ವಸ್ತುಗಳು ಕಂಡುಬಂದಲ್ಲಿ ತಕ್ಷಣವೇ ತುರ್ತು ಸಂಖ್ಯೆ ‘112’ ಗೆ ಕರೆ ಮಾಡಿ ಮಾಹಿತಿ ನೀಡುವಂತೆ ಸಾರ್ವಜನಿಕರಿಗೆ ಸೂಚಿಸಲಾಗಿದೆ.

Share