Home ಕ್ರೈಂ ನ್ಯೂಸ್ ಸಾವಿನಲ್ಲೂ ಸಾರ್ಥಕತೆ: ರಸ್ತೆ ಅಪಘಾತದಲ್ಲಿ ಜೀವ ಕಳೆದುಕೊಂಡ 9ನೇ ತರಗತಿ ವಿದ್ಯಾರ್ಥಿನಿ, ಅಂಗಾಂಗ ದಾನದ ಮೂಲಕ 6 ಜೀವ ಉಳಿಸಿದ ರೋಹಿತಾ!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ಸಾವಿನಲ್ಲೂ ಸಾರ್ಥಕತೆ: ರಸ್ತೆ ಅಪಘಾತದಲ್ಲಿ ಜೀವ ಕಳೆದುಕೊಂಡ 9ನೇ ತರಗತಿ ವಿದ್ಯಾರ್ಥಿನಿ, ಅಂಗಾಂಗ ದಾನದ ಮೂಲಕ 6 ಜೀವ ಉಳಿಸಿದ ರೋಹಿತಾ!

Share
ಅಪಘಾತ
Share

ಹೈದರಾಬಾದ್: ತೆಲಂಗಾಣದ ಹೈದರಾಬಾದ್ ನಗರದ ಬಾಲನಗರ ಫ್ಲೈಓವರ್ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಬ್ರೇನ್‌ಡೆಡ್ ಎಂದು ಘೋಷಿಸಲ್ಪಟ್ಟ 13 ವರ್ಷದ ಒಂಬತ್ತನೇ ತರಗತಿ ವಿದ್ಯಾರ್ಥಿನಿ ಗುಡ ರೋಹಿತಾ, ತನ್ನ ಅಂಗಾಂಗ ದಾನದ ಮೂಲಕ ಆರು ಮಂದಿ ರೋಗಿಗಳಿಗೆ ಹೊಸ ಜೀವ ನೀಡಿ ಮಾದರಿಯಾಗಿದ್ದಾರೆ.

ದೇವಾಲಯದಿಂದ ಕುಟುಂಬದೊಂದಿಗೆ ಆಟೋದಲ್ಲಿ ವಾಪಸ್ಸಾಗುತ್ತಿದ್ದಾಗ ಹಿಂದಿನಿಂದ ಬಂದ ಲಾರಿ ಆಟೋಗೆ ಡಿಕ್ಕಿ ಹೊಡೆದ ಪರಿಣಾಮ ರೋಹಿತಾ ತೀವ್ರವಾಗಿ ಗಾಯಗೊಂಡಿದ್ದರು.

ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಅಕ್ಟೋಬರ್ 30 ರಂದು ಬಾಲಕಿ ಬ್ರೇನ್‌ಡೆಡ್ ಆಗಿರುವುದಾಗಿ ವೈದ್ಯರು ತಿಳಿಸಿದರು. ಈ ದುಃಖದ ನಡುವೆಯೂ ಬಾಲಕಿಯ ತಂದೆ ನಾರಾಯಣ ರಾವ್ ಹಾಗೂ ಕುಟುಂಬಸ್ಥರು ‘ಜೀವದನ್’  ಅಂಗಾಂಗ ದಾನ ಕಾರ್ಯಕ್ರಮದಡಿ ರೋಹಿತಾಳ ಅಂಗಾಂಗಗಳನ್ನು ದಾನ ಮಾಡಲು ಒಪ್ಪಿಗೆ ಸೂಚಿಸಿದರು. ಬಾಲಕಿಯ ಎರಡು ಕಿಡ್ನಿಗಳು, ಯಕೃತ್ತಿನ ಎರಡು ಭಾಗಗಳು ಹಾಗೂ ಎರಡು ಕಾರ್ನಿಯಾಗಳನ್ನು ಯಶಸ್ವಿಯಾಗಿ ಸಂಗ್ರಹಿಸಿ ಆರು ಜನರಿಗೆ ಕಸಿ ಮಾಡಲಾಗಿದೆ. ಹೈದರಾಬಾದ್ ಪೊಲೀಸ್ ಆಯುಕ್ತ ವಿ.ಸಿ. ಸಜ್ಜನರ್ ಸೇರಿದಂತೆ ಹಲವು ಗಣ್ಯರು ಬಾಲಕಿಯ ಕುಟುಂಬದ ಈ ನಿಸ್ವಾರ್ಥ ನಿರ್ಧಾರವನ್ನು ಕೊಂಡಾಡಿದ್ದಾರೆ.

ಅಂಗಾಂಗ ದಾನದಿಂದ 6 ಜೀವಗಳು ಉಳಿದುವು: ಬ್ರೇನ್‌ಡೆಡ್ ಆದ 13 ವರ್ಷದ ರೋಹಿತಾ ಅವರ ಕಿಡ್ನಿ, ಲಿವರ್ ಹಾಗೂ ಕಾರ್ನಿಯಾಗಳಿಂದ ಆರು ಮಂದಿಗೆ ಮರುಜೀವ ಸಿಕ್ಕಿದೆ.

ಅಪಘಾತದ ಹಿನ್ನೆಲೆ: ಅಕ್ಟೋಬರ್ 20 ರಂದು ದೇವಸ್ಥಾನದಿಂದ ವಾಪಸ್ ಬರುವಾಗ ಬಾಲನಗರ ಫ್ಲೈಓವರ್ ಬಳಿ ಲಾರಿ ಆಟೋಗೆ ಡಿಕ್ಕಿ ಹೊಡೆದಿದ್ದರಿಂದ ರೋಹಿತಾ ಗಂಭೀರವಾಗಿ ಗಾಯಗೊಂಡಿದ್ದರು.

ಕುಟುಂಬದ ಮಹತ್ವದ ನಿರ್ಧಾರ: ವೈದ್ಯರು ಬ್ರೇನ್‌ಡೆಡ್ ಎಂದು ಘೋಷಿಸಿದ ಬಳಿಕ, ತಂದೆ ನಾರಾಯಣ ರಾವ್ ಹಾಗೂ ಕುಟುಂಬಸ್ಥರು ಜೀವದನ್ ಯೋಜನೆಯಡಿ ಅಂಗಾಂಗ ದಾನ ಮಾಡಲು ಮುಂದೆ ಬಂದರು.

ಪೊಲೀಸ್ ಕಮಿಷನರ್ ಪ್ರಶಂಸೆ: ಹೈದರಾಬಾದ್ ಪೊಲೀಸ್ ಕಮಿಷನರ್ ವಿ.ಸಿ. ಸಜ್ಜನರ್ ಅವರು ಬಾಲಕಿಯ ಕುಟುಂಬದ ತ್ಯಾಗವನ್ನು ಶ್ಲಾಘಿಸಿ, ರೋಹಿತಾಳ ಹೆಸರು ಎಂದೆಂದಿಗೂ ಸ್ಮರಣೀಯ ಎಂದು ತಿಳಿಸಿದ್ದಾರೆ.

ಈ ಘಟನೆಯು ಸಮಾಜದಲ್ಲಿ ಅಂಗಾಂಗ ದಾನದ ಮಹತ್ವದ ಕುರಿತು ಮತ್ತೊಮ್ಮೆ ಜನಜಾಗೃತಿ ಮೂಡಿಸಿದ್ದು, ಕಿರಿದಾದ ವಯಸ್ಸಿನಲ್ಲಿ ರೋಹಿತಾ ಬಿಟ್ಟುಹೋದ ಹೆಜ್ಜೆ ಗುರುತುಗಳು ಸ್ಫೂರ್ತಿದಾಯಕವಾಗಿವೆ.

Share

Leave a comment

Leave a Reply

Your email address will not be published. Required fields are marked *

Related Articles