SUDDIKSHANA KANNADA NEWS/ DAVANAGERE/ DATE:26-11-2024
ದಾವಣಗೆರೆ: ಆಕೆ ಸುಂದರ ಹೆಂಡತಿ, ಮತ್ತೊಬ್ಬಳ ಸಹವಾಸದಿಂದ ವಿಷ ನೀಡಿ ಕೈಹಿಡಿದ ಹೆಂಡತಿಯನ್ನೇ ಕೊಂದಿದ್ದ, 10 ವರ್ಷದ ಬಳಿಕ ಇದೀಗ ಆರೋಪಿ ಗಂಡನಿಗೆ ಕೋರ್ಟ್ ಜೀವಾವಧಿ ಶಿಕ್ಷೆ ನೀಡಿದೆ.
ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲ್ಲೂಕು ಅರಳಿಕಟ್ಟೆಯಲ್ಲಿ 2014 ಅಕ್ಟೋಬರ್ 15 ರಂದು ನಡೆದಿದ್ದ ಘಟನೆ ಇದು. ಶೈಲಜಾ ಎಂಬ ಸುಂದರಿಯನ್ನು ಮದುವೆಯಾಗಿದ್ದ ವೈದ್ಯ ಡಾ. ಮಹಾದೇವ್ ಎಂಬಾತನೇ ಶಿಕ್ಷೆಗೊಳಪಟ್ಟ ಅಪರಾಧಿ
ಬೆಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಈತ ಮದುವೆಯಾಗಿ 3 ತಿಂಗಳಾಗಿತ್ತು. 2014 ಅಕ್ಟೋಬರ್ 15 ರಂದು ತನ್ನ ಹೆಂಡತಿ ಮನೆ ಅರಳಿಕಟ್ಟೆಗೆ ಬಂದಿದ್ದ ಅಂದು ರಾತ್ರಿ ಸೆವೋಪ್ಲೋರೆನ್ ಎಂಬ ಅನಾಸ್ತೇಷಿಯಾ ಔಷಧ ನೀಡಿ ಉಸಿರಿಗಟ್ಟಿಸಿ ಕೊಲೆ ಮಾಡಿದ್ದ. ಅನುಮಾನ ಬಂದ ಹಿನ್ನೆಲೆ ಮೃತಳ ಪೋಷಕರು ಸಂತೇಬೆನ್ನೂರು ಪೊಲೀಸ್ ಠಾಣೆಯಲ್ಲಿ ಕೊಲೆ ಆರೋಪದಡಿ ದೂರು ದಾಖಲಿಸಿದ್ದದರು.
10 ವರ್ಷಗಳ ಕಾಲ ನಡೆದ ಸುದೀರ್ಘ ವಿಚಾರಣೆ ಬಳಿಕ ದಾವಣಗೆರೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಆರೋಪಿ ಮಹಾದೇವ್ಗೆ ಜೀವಾವಧಿ ಶಿಕ್ಷೆ ಹಾಗೂ 1 ಲಕ್ಷ ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದೆ. ಇದೀಗ ಮೃತಳ ಪೋಷಕರು ಸತ್ಯಕ್ಕೆ ಜಯ ಸಿಕ್ಕಿದೆ ಎಂದು ಹೇಳಿದ್ದಾರೆ.