Home ಕ್ರೈಂ ನ್ಯೂಸ್ ಪೊಲೀಸ್ ಠಾಣೆಯಲ್ಲಿ ಪತಿಯ ಕಣ್ಣೀರು: ‘ನಾಲ್ಕನೇ ಪ್ರೇಮಿಯೇ ಬೇಕು’ ಎಂದ ಪತ್ನಿಯ ಹಠ!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ಪೊಲೀಸ್ ಠಾಣೆಯಲ್ಲಿ ಪತಿಯ ಕಣ್ಣೀರು: ‘ನಾಲ್ಕನೇ ಪ್ರೇಮಿಯೇ ಬೇಕು’ ಎಂದ ಪತ್ನಿಯ ಹಠ!

Share
ಪೊಲೀಸ್
Share

ನವದೆಹಲಿ: ಮದುವೆ ಎಂದರೆ ಏಳು ಹೆಜ್ಜೆಗಳ ಪವಿತ್ರ ಬಂಧ, ಕಷ್ಟ-ಸುಖದಲ್ಲಿ ಜೊತೆಯಾಗಿ ಬಾಳುವ ನಂಬಿಕೆ. ಆದರೆ ಇತ್ತೀಚಿನ ದಿನಗಳಲ್ಲಿ ಇಂತಹ ಪವಿತ್ರ ಬಾಂಧವ್ಯಗಳು ಕ್ಷುಲ್ಲಕ ಕಾರಣಗಳಿಗೆ ಮುರಿದುಬೀಳುತ್ತಿರುವುದಕ್ಕೆ ಈ ಘಟನೆ ಸ್ಪಷ್ಟ ಉದಾಹರಣೆಯಾಗಿದೆ. ಪೊಲೀಸ್ ಠಾಣೆಯಲ್ಲೇ ನಡೆದ ಕೌಟುಂಬಿಕ ಡ್ರಾಮಾವೊಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಸಂಸಾರ ಉಳಿಸಿಕೊ ಎಂದು ಗೋದಾಡಿದ ಪತಿ:

ವರದಿಗಳ ಪ್ರಕಾರ, ಮನೆ ತೊರೆದಿದ್ದ ಪತ್ನಿಯನ್ನು ಮರಳಿ ಕರೆತರಲು ಪತಿ ಪೊಲೀಸ್ ಠಾಣೆಗೆ ಆಗಮಿಸಿದ್ದನು. ಅಧಿಕಾರಿಗಳ ಸಮ್ಮುಖದಲ್ಲೇ ಕಣ್ಣೀರಿಡುತ್ತಾ “ನನ್ನನ್ನು ಬಿಟ್ಟು ಹೋಗಬೇಡ, ನಮ್ಮ ಸಂಸಾರವನ್ನು ಹಾಳು ಮಾಡಿಕೊಳ್ಳಬೇಡ” ಎಂದು ಪತಿ ಗೋಗರೆದಿದ್ದಾನೆ. ಆದರೆ ಆತನ ಮನವಿಗೆ ಪತ್ನಿ ಕನಿಷ್ಠ ಸ್ಪಂದನೆಯನ್ನೂ ನೀಡಲಿಲ್ಲ.

ನಾಲ್ಕನೇ ಪ್ರೇಮಿಯ ಜೊತೆಯೇ ಹೋಗುವೆ ಎಂದ ಪತ್ನಿ:

ಪತಿಯ ಮನವಿಯನ್ನು ಸಂಪೂರ್ಣವಾಗಿ ತಳ್ಳಿಹಾಕಿದ ಪತ್ನಿ, “ನನಗೆ ಸಂಸಾರ ಬೇಡ, ನಾನು ನನ್ನ ನಾಲ್ಕನೇ ಪ್ರೇಮಿಯೊಂದಿಗೆ ಇರುತ್ತೇನೆ ಮತ್ತು ಆತನ ಜೊತೆಯೇ ಹೋಗುತ್ತೇನೆ” ಎಂದು ಪೊಲೀಸ್ ಠಾಣೆಯಲ್ಲೇ ಹಠ ಹಿಡಿದಿದ್ದಾಳೆ. ಪೊಲೀಸರು ಮತ್ತು ಕುಟುಂಬಸ್ಥರು ಎಷ್ಟೇ ಬುದ್ಧಿಮಾತು ಹೇಳಿದರೂ ಆಕೆ ತನ್ನ ಪಟ್ಟು ಸಡಿಸಲಿಲ್ಲ.

ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ:

ಈ ಘಟನೆಯ ವಿಡಿಯೋ ಮತ್ತು ಮಾಹಿತಿ ಹೊರಬೀಳುತ್ತಿದ್ದಂತೆ ನೆಟ್ಟಿಗರು ಆಕ್ರೋಶ ಹಾಗೂ ಕಳವಳ ವ್ಯಕ್ತಪಡಿಸುತ್ತಿದ್ದಾರೆ. ಒಬ್ಬನಿಗೆ ಸಂಸಾರ ಉಳಿಸಿಕೊಳ್ಳುವ ತವಕವಾದರೆ, ಇನ್ನೊಬ್ಬರಿಗೆ ಹಠ ಎಂತಹ ಸ್ಥಿತಿಗೆ ತಲುಪಿಸುತ್ತದೆ ಎಂಬುದಕ್ಕೆ ಇದು ಉದಾಹರಣೆ ಎಂದು ಹಲವರು ಕಮೆಂಟ್ ಮಾಡಿದ್ದಾರೆ. ಪ್ರಸ್ತುತ ಘಟನೆಯ ಸತ್ಯಾಸತ್ಯತೆ ತನಿಖೆಯಿಂದಷ್ಟೇ ಹೊರಬರಬೇಕಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನು ಪ್ರಕ್ರಿಯೆಗಳು ಮುಂದುವರಿದಿವೆ.

Share

Leave a comment

Leave a Reply

Your email address will not be published. Required fields are marked *

Related Articles