ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಸಿರಿಗೆರೆ, ಸಾಣೇಹಳ್ಳಿ ಶ್ರೀಗಳು ಒಂದಾಗುವವರೆಗೆ ಉಪವಾಸ ಸತ್ಯಾಗ್ರಹ: ಖಡ್ಗ ಸಂಘಟನೆ ಎಚ್ಚರಿಕೆ!

On: September 27, 2025 6:32 PM
Follow Us:
ಸಿರಿಗೆರೆ
---Advertisement---

SUDDIKSHANA KANNADA NEWS/DAVANAGERE/DATE:27_09_2025

ದಾವಣಗೆರೆ: ಸಿರಿಗೆರೆ ತರಳಬಾಳು ಬೃಹನ್ಮಠ ಮತ್ತು ಸಾಣೇಹಳ್ಳಿ ಮಠ ಭಿನ್ನಾಭಿಪ್ರಾಯ ಬದಿಗೊತ್ತಿ ಒಂದಾಗುವವರೆಗೆ ಉಪವಾಸ ಸತ್ಯಾಗ್ರಹ ನಡೆಸಬೇಕಾಗುತ್ತದೆ ಎಂದು ಖಡ್ಗ ಸ್ವಯಂ ಸೇವಕರ ಸಂಘ ಎಚ್ಚರಿಕೆ ನೀಡಿದೆ.

READ ALSO THIS STORY: ಹಿಂದೂಗಳ ಮೇಲೆ ಕೇಸ್, ಆಜಾದ್ ನಗರದಲ್ಲಿ ಕಾನೂನು ಗಾಳಿಗೆ ತೂರಿದ್ದರೂ ಇದ್ದರೂ ಕ್ರಮ ಏಕಿಲ್ಲ: ಹಿಂದೂ ಮುಖಂಡರ ರೋಷಾವೇಶ!

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘಟನೆಯ ಪ್ರಮುಖ ರಘು ಅವರು ಜಾತಿಗಣತಿಗೆ ಅಧಿಕಾರಿಗಳು ಲಿಂಗಾಯತರ ಮನೆಗಳಿಗೆ ಬಂದರೆ ಎಲ್ಲರೂ, ಒಮ್ಮತದಿಂದ ತರಳಬಾಳು ಬೃಹನ್ ಮಠ ಸಿರಿಗೆರೆ ಹಾಗೂ ಸಾಣೆೇಹಳ್ಳಿ ಮಠಗಳು ಧರ್ಮ ಹಾಗೂ ಜಾತಿಯ ಬಗ್ಗೆ ಭಿನ್ನಾಭಿಪ್ರಾಯವನ್ನು ವ್ಯಕ್ತಪಡಿಸಿವೆ. ಹಾಗಾಗಿ ಸ್ವಲ್ಪ ಸಮಯ ಬೇಕಾಗಿದೆ ಎಂದು ತಿಳಿಸಿದರು.

ಸಿರಿಗೆರೆ

ತರಳಬಾಳು ಸಿರಿಗೆರೆ ಮಠದ ಡಾ. ಶ್ರೀ ಶ್ರೀ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ಜಾತಿ ಗಣತಿಯ ವೇಳೆ ಧರ್ಮ ಹಿಂದೂ ಜಾತಿ ಲಿಂಗಾಯಿತ ಎಂದು ನಮೂದಿಸಿ ಎಂದು ಹೇಳುತ್ತಾರೆ. ತರಳುಬಾಳು ಸಿರಿಗೆರೆ ಶಾಖಾ ಮಠ ಸಾಣೆ ಹಳ್ಳಿ ಶ್ರೀಗಳಾದ ಡಾ. ಶ್ರೀ.ಶ್ರೀ. ಪಂಡಿತರಾಧ್ಯ ಶಿವಾಚಾರ್ಯ ಮಹಾಸ್ವಾಮೀಜಿಗಳು ಜಾತಿ ಗಣತಿಯ ವೇಳೆ ಧರ್ಮ ಲಿಂಗಾಯತ ಜಾತಿ ಲಿಂಗಾಯಿತ ಎಂದು ನಮೂದಿಸಿ ಎಂದು ಹೇಳುತ್ತಾರೆ. ಇದು ಸಮುದಾಯದವರಲ್ಲಿ ಗೊಂದಲಕ್ಕೆ ಕಾರಣವಾಗಿದೆ ಎಂದು ತಿಳಿಸಿದರು.

ಒಂದೇ ಮಠದ ಇಬ್ಬರು ಪೀಠಾಧಿಪತಿಗಳು ಈ ರೀತಿಯ ದ್ವಂದ್ವ ನಿಲುವನ್ನು ತಾಳಿದರೆ ಮಠಕ್ಕೆ ನಡೆದುಕೊಳ್ಳುವ ಭಕ್ತರಿಗೆ ಗೊಂದಲ ನಿರ್ಮಾಣವಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಉದಾಹರಣೆಗೆ ಸಿರಿಗೆರೆ ಮಠದ ಪರವಾಗಿ ಶೇಕಡಾ 50 ಭಾಗ ಮತ್ತು ಸಾಣೆಹಳ್ಳಿ ಮಠದ ಪರವಾಗಿ ಶೇಕಡಾ 50 ರಷ್ಟು ಭಾಗ ಇಬ್ಬರೂ ಗುರುಗಳ ಅಭಿಪ್ರಾಯದಂತೆ ಜಾತಿಗಣತಿಗೆ ದತ್ತಾಂಶವನ್ನು ಆಯೋಗದಲ್ಲಿ ನೋಂದಾಯಿಸಿದರೆ ಭವಿಷ್ಯದಲ್ಲಿ ಎರಡೂ ಮಠದ ಶ್ರೀಗಳು ಅಥವಾ ಭವಿಷ್ಯದ ಉತ್ತರಾಧಿಕಾರಿಗಳು ಒಮ್ಮತದ ನಿಲುವಿಗೆ ಬಂದರೆ ಈ ದತ್ತಾಂಶವನ್ನು ಸರಿಪಡಿಸಲು ಮಠದ ಭಕ್ತರಿಗೆ ಅವಕಾಶವಿದೆಯೇ? ದಯವಿಟ್ಟು ಸ್ಪಷ್ಟತೆ ನೀಡಬೇಕಾಗಿ ವಿನಂತಿ. ಇಲ್ಲವಾದಲ್ಲಿ ಭಕ್ತರು ಮತಾಂತರ ಪ್ರಕ್ರಿಯೆಯ ಮೂಲಕ ತಮ್ಮ ಧರ್ಮ ಬದಲಾವಣೆ ಮಾಡಿಕೊಳ್ಳುವ ಅನಿವಾರ್ಯತೆಯನ್ನು ಸೃಷ್ಟಿ ಮಾಡಬೇಡಿ. ಇದರ ಹೊಣೆಗಾರರು ನೀವೇ ಆಗಿರುತ್ತೀರಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಎರಡೂ ಮಠದ ಶ್ರೀಗಳು ಸ್ಪಷ್ಟನೆ ನೀಡುವುದಕ್ಕೆ ಮುನ್ನ ಯಾವುದೇ ಕಾರಣಕ್ಕೂ ಜಾತಿಗಣತಿಯಲ್ಲಿ ಪಾಲ್ಗೊಳ್ಳಬೇಡಿ ಮತ್ತು ಸಮಯವನ್ನು ಕೇಳಿ, ಏಕೆಂದರೆ ಒಮ್ಮೆ ಜಾತಿಗಣತಿಯಲ್ಲಿ ದತ್ತಾಂಶ ದಾಖಲೆಯಾದರೆ ಭವಿಷ್ಯದಲ್ಲಿ ತಮ್ಮ ದತ್ತಾಂಶವನ್ನು ಬದಲಾಯಿಸಲು ಯಾವುದೇ ದಾರಿ
ಇರುವುದಿಲ್ಲ, ನಿಮಗೆ ಮತಾಂತರ ಒಂದೇ ಆಯ್ಕೆ, ಲಿಂಗಾಯಿತ ಧರ್ಮವಾಗುತ್ತದೆಯೋ ಅಥವಾ ಜಾತಿಯಾಗಿಯೇ ಉಳಿಯುತ್ತದೆಯೋ ಅದನ್ನು ಸಮಯ ನಿರ್ಧರಿಸುತ್ತದೆ ಎಂದು ಹೇಳಿದರು.

ದಯವಿಟ್ಟು ಸಿರಿಗೆರೆ ಶ್ರೀಗಳು ಮತ್ತು ಸಾಣೇಹಳ್ಳಿ ಶ್ರೀಗಳು ಒಗ್ಗಟ್ಟಾಗಿ ಎಲ್ಲಾ ಭಕ್ತರ ಆಶಯವನ್ನು ಪರಿಗಣಿಸಬೇಕಾಗಿ ಈ ಮೂಲಕ ವಿನಂತಿಸಿಕೊಳ್ಳುತ್ತೇವೆ. ನೂರಾರು ವರ್ಷಗಳ ಇತಿಹಾಸವಿರುವ ತರಳಬಾಳು ಮಠದ ಗೌರವವನ್ನು ಉಳಿಸುವತ್ತ ಶ್ರೀಗಳು ಗಮನ ಹರಿಸಬೇಕು ಮತ್ತು ಭಕ್ತರ ಭಾವನೆಗಳನ್ನು ಅರ್ಥಮಾಡಿಕೊಳ್ಳಬೇಕು ಎಂದು ಈ ಮೂಲಕ ವಿನಂತಿಸಿಕೊಳ್ಳುತ್ತೇವೆ ಎಂದು ತಿಳಿಸಿದರು.

ಇತ್ತೀಚಿನ ದಿನಗಳಲ್ಲಿ ಸಿರಿಗೆರೆ ಮಠ ಮತ್ತು ಸಾಣೇಹಳ್ಳಿಯ ಮಠ ಇಬ್ಬಾಗವಾಗುತ್ತಿದೆ ಎನ್ನುವ ಭಾವನೆ ಭಕ್ತರಲ್ಲಿ ಬಂದಿರುವುದರಿಂದ ಇದನ್ನು ಬಹಳ ಸೂಕ್ಷ್ಮವಾಗಿ ಪರಿಗಣಿಸಬೇಕಾಗಿ ಈ ಮೂಲಕ ಸಮಸ್ತ ಲಿಂಗಾಯಿತ ಸಮುದಾಯದ ಪರವಾಗಿ ಶ್ರೀಗಳಲ್ಲಿ ವಿನಂತಿ ಮಾಡಿಕೊಳ್ಳುತ್ತೇವೆ ಎಂದು ಹೇಳಿದರು.

ಎರಡು ಮಠಗಳು ಒಂದಾಗದೆ ಇದ್ದ ಪಕ್ಷದಲ್ಲಿ, ಲಿಂಗಾಯತ ಸಮುದಾಯದ ಈ ಇಬ್ಬರು ಶ್ರೀಗಳು ಒಂದಾಗುವವರೆಗೆ ಉಪವಾಸ ಸತ್ಯಾಗ್ರಹ ಮಾಡಲು ಕರೆ ನೀಡಲಾಗುವುದು ಎಂದು ರಘು ಅವರು ಎಚ್ಚರಿಕೆ ನೀಡಿದರು.

ಗೋಷ್ಠಿಯಲ್ಲಿ ಖಡ್ಗ ಸಂಘಟನೆಯ ಪದಾಧಿಕಾರಿಗಳು ಹಾಜರಿದ್ದರು.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

ಮಿಸ್ ಮಾಡ್ದೆ ಓದಿ

Leave a Comment