ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಲಕ್ಷ್ಮೀ ರಂಗನಾಥ ಸ್ವಾಮಿ ಬ್ರಹ್ಮರಥೋತ್ಸವ, ಹನುಮನ ಜಯಂತಿಯಲ್ಲಿ ಜಿ. ಬಿ. ವಿನಯ್ ಕುಮಾರ್ ಭಾಗಿ

On: April 13, 2025 6:23 PM
Follow Us:
---Advertisement---

ದಾವಣಗೆರೆ: ಹರಿಹರ ತಾಲೂಕಿನ ಮಲೇಬೆನ್ನೂರಿನ ಕೋಮಾರನಹಳ್ಳಿಯ ಹೆಳವನಕಟ್ಟೆ ಲಕ್ಷ್ಮೀ ರಂಗನಾಥ ಸ್ವಾಮಿ ಬ್ರಹ್ಮರಥೋತ್ಸವದಲ್ಲಿ ಸ್ವಾಭಿಮಾನಿ ಬಳಗದ ರಾಜ್ಯಾಧ್ಯಕ್ಷ ಜಿ. ಬಿ. ವಿನಯ್ ಕುಮಾರ್ ಅವರು ಭಾಗಿಯಾದರು.

ಗಜೇಂದ್ರಮೋಕ್ಷದ ಬಳಿಕ ಆರಂಭವಾದ ಉತ್ಸವಮೂರ್ತಿಯ ಗ್ರಾಮ ಪ್ರದಕ್ಷಿಣೆಯಲ್ಲಿ ಪಾಲ್ಗೊಂಡು ಪುನೀತರಾದರು. ರಥಕ್ಕೆ ಭಕ್ತರು ಬಾಳೆಹಣ್ಣು, ತೆಂಗಿನಕಾಯಿ ಸಮರ್ಪಿಸಿದರಲ್ಲದೇ, ಹರಿಹರ ಮಹಾದೇವ, ಲಕ್ಷ್ಮೀ ರಮಣ ರಮಾರಮಣ, ಇಂದಿರಾ ರಮಣ, ಗೋವಿಂದ ಗೋವಿಂದ ಎಂದು ಹೇಳುತ್ತಾ ಭಕ್ತರ ಜೊತೆ ವಿನಯ್ ಕುಮಾರ್ ಅವರೂ ರಥೋತ್ಸವದಲ್ಲಿ ಪಾಲ್ಗೊಂಡು ಗಮನ ಸೆಳೆದರು.

ಜಿ. ಬಿ. ವಿನಯ್ ಕುಮಾರ್ ಅವರು ಕೊಮಾರನಹಳ್ಳಿಗೆ ಆಗಮಿಸುತ್ತಿದ್ದಂತೆ ಗ್ರಾಮದ ಮುಖಂಡರು ಅದ್ಧೂರಿ ಸ್ವಾಗತ ಕೋರಿದರು. ಡೊಳ್ಳು, ತಮಟೆ ಹಾಗೂ ಜಾಂಚ್ ಮೇಳ ಸೇರಿದಂತೆ ವಿವಿಧ ಕಲಾ ತಂಡಗಳು ಮೆರವಣಿಗೆಗೆ ರಂಗು ತಂದವು. ಗ್ರಾಮಸ್ಥರ ಜೊತೆ ವಿನಯ್ ಕುಮಾರ್ ಅವರೂ ಸಹ ಡೊಳ್ಳು, ತಮಟೆ, ಚಾಂಜ್ ಮೇಳದಲ್ಲಿ ಕುಣಿಯುತ್ತಾ, ಬಾರಿಸುತ್ತಾ ಎಲ್ಲರನ್ನೂ ರಂಜಿಸಿದರು. ವಿನಯ್ ಕುಮಾರ್ ಅವರ ಸರಳತೆಗೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದರು. ಈ ವೇಳೆ ಯುವಕರು ವಿನಯ್ ಕುಮಾರ್ ಅವರ ಜೊತೆ ಸೆಲ್ಫಿ ತೆಗೆದುಕೊಳ್ಳಲು ಮುಗಿಬಿದ್ದ ದೃಶ್ಯವೂ ಕಂಡುಬಂತು.

ಈ ವೇಳೆ ಮಾತನಾಡಿದ ವಿನಯ್ ಕುಮಾರ್ ಅವರು, ಲಕ್ಷ್ಮೀ ರಂಗನಾಥ ಸ್ವಾಮಿ ಬ್ರಹ್ಮರಥೋತ್ಸವದಲ್ಲಿ ಪಾಲ್ಗೊಂಡಿದ್ದು ತುಂಬಾನೇ ಖುಷಿ ಕೊಟ್ಟಿದೆ. ಗ್ರಾಮಸ್ಥರು ತೋರಿದ ಪ್ರೀತಿಗೆ ನಾನು ಎಂದಿಗೂ ಚಿರಋಣಿಯಾಗಿರುತ್ತೇನೆ ಎಂದು ಹೇಳಿದರು.

ಲಕ್ಷ್ಮೀ ರಂಗನಾಥ ಸ್ವಾಮಿ ಎಲ್ಲರಿಗೂ ಒಳಿತು ಮಾಡಲಿ. ಉತ್ತಮ ಮಳೆ, ಬೆಳೆಯಾಗಲಿ. ಸರ್ವರಿಗೂ ದೇವರ ಅನುಗ್ರಹ ಸಿಗಲಿ ಎಂದು ದೇವರಲ್ಲಿ ಜಿ. ಬಿ. ವಿನಯ್ ಕುಮಾರ್ ಅವರು ಪ್ರಾರ್ಥಿಸಿದರು.

ಇನ್ನು ದಾವಣಗೆರೆ ತಾಲೂಕಿನ ಆಂಜನೇಯ ಮಿಲ್ ನ ಹನುಮನ ಜಯಂತಿ ಕಾರ್ಯಕ್ರಮದಲ್ಲಿಯೂ ವಿನಯ್ ಕುಮಾರ್ ಭಾಗಿಯಾದರು. ಈ ವೇಳೆ ಹನುಮನ ಜಯಂತಿಯ ಉತ್ಸವ ಮೂರ್ತಿ ಹೊತ್ತು ಭಕ್ತರ ಜೊತೆ ಹೆಜ್ಜೆ ಹಾಕಿದರು. ಆಂಜನೇಯ ಸ್ವಾಮಿ ದರ್ಶನ ಪಡೆದ ಬಳಿಕ ಮೆರವಣಿಗೆಯಲ್ಲಿ ಪಾಲ್ಗೊಂಡರು. ಭಕ್ತರು ಹಾಗೂ ಆಂಜನೇಯ ಮಿಲ್ ಭಾಗದ ಜನರು ವಿನಯ್ ಕುಮಾರ್ ಅವರಿಗೆ ಧನ್ಯವಾದ ಅರ್ಪಿಸಿದರು.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment