ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಹಿಂದೂಗಳ ಮೇಲೆ ಕೇಸ್, ಆಜಾದ್ ನಗರದಲ್ಲಿ ಕಾನೂನು ಗಾಳಿಗೆ ತೂರಿದ್ದರೂ ಕ್ರಮ ಏಕಿಲ್ಲ: ಹಿಂದೂ ಮುಖಂಡರ ರೋಷಾವೇಶ!

On: September 27, 2025 8:02 PM
Follow Us:
ಹಿಂದೂ
---Advertisement---

SUDDIKSHANA KANNADA NEWS/DAVANAGERE/DATE:27_09_2025

ದಾವಣಗೆರೆ: ದಾವಣಗೆರೆಯಲ್ಲಿ ಹಿಂದೂಗಳ ಮೇಲೆ ಮಾತ್ರ ಯಾಕೆ ಕೇಸ್ ಹಾಕ್ತೀರಾ. ಆಟೋ ಚಾಲಕರ ಮೇಲೆ ದಸರಾ ಮೆರವಣಿಗೆ ಹೋಗುವಾಗ ಪ್ರಕರಣ ದಾಖಲಿಸುತ್ತಿದ್ದೀರಾ? ಆಜಾದ್ ನಗರದಲ್ಲಿ ತ್ರಿಬಲ್ ರೈಡಿಂಗ್, ಹೆಲ್ಮೆಟ್ ಇಲ್ಲದೇ ವಾಹನ ಚಾಲನೆ, ದಾಖಲೆಗಳಿಲ್ಲದಿದ್ದರೂ ವಾಹನಗಳ ಓಡಾಟ ಹೆಚ್ಚಾಗಿದ್ದರೂ ಪೊಲೀಸರು ಕೇಸ್ ಹಾಕಿಲ್ಲ. ಹಿಂದೂಗಳ ಮೇಲೆ ಯಾಕೆ ದೌರ್ಜನ್ಯ ಎಸಗುತ್ತೀರಾ? ನಾವು ಕಾನೂನು ಪಾಲನೆ ಮಾಡ್ತೇವೆ. ಹಿಂದೂಗಳಿಗೆ ಮಾತ್ರ ಕಾನೂನಾ? ಬೇರೆಯವರಿಗೆ ಇಲ್ಲವಾ?

ಇದು ದಸರಾ ಮಹೋತ್ಸವ ಹಿನ್ನೆಲೆಯಲ್ಲಿ ಆಟೋ ರ್ಯಾಲಿಗೆ ಅಡ್ಡಿ ಮಾಡಿದ ಟ್ರಾಫಿಕ್ ಪೊಲೀಸರ ವಿರುದ್ಧ ಹಿಂದೂ ಸಂಘಟನೆಗಳ ಮುಖಂಡರು, ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದ ಪರಿ. ಪೊಲೀಸರು ಮತ್ತು ಹಿಂದೂ ಸಂಘಟನೆಗಳ ಮುಖಂಡರ ನಡುವೆ ವಾಗ್ವಾದ ಜೋರಾಗಿತ್ತು.

READ ALSO THIS STORY: ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಕ್ರೀಡಾಕೂಟಕ್ಕೆ ದಾವಣಗೆರೆಯ ಶ್ರೀ ಸಿದ್ಧಗಂಗಾ ಕಾಲೇಜಿನ ವಿದ್ಯಾರ್ಥಿಗಳು ಆಯ್ಕೆ

ದಾವಣಗೆರೆಯ ಹೈಸ್ಕೂಲ್‌ ಮೈದಾನದಲ್ಲಿ ದಸರಾ ಹಿನ್ನಲೆ ದಾವಣಗೆರೆಯಲ್ಲಿಂದು ಆಟೋ ರ್ಯಾಲಿ ಏರ್ಪಡಿಸಲಾಗಿತ್ತು. ರ್ಯಾಲಿ ಶುರುವಾಗುತ್ತಿದ್ದಂತೆ ಆಟೋ ಆರ್ ಸಿ, ಡಿಎಲ್ ಚೆಕ್ ಮಾಡ್ತಿವಿ ಅಂತಾ ಟ್ರಾಫಿಕ್ ಪೊಲೀಸರು ಆಟೋಗಳನ್ನು ತಡೆದರು. ಈದ್ ಮಿಲಾದ್ ಸಂದರ್ಭದಲ್ಲಿ ಇದೇ ರೀತಿ ಚೆಕ್ ಮಾಡಿದ್ರಾ. ಈಗ ಮಾತ್ರ ಯಾಕೆ ಇಷ್ಟೊಂದು ಕಠಿಣ ಕಾನೂನು? ಒಂದೇ ಬೈಕ್ ನಲ್ಲಿ ಮೂರು ಜನ ಹೋದ್ರು ಬಾಯಿ ಮುಚ್ಕೊಂಡು ಇದ್ರಿ. ಈಗ ಹಿಂದೂಗಳ ಹಬ್ಬಕ್ಕೆ ಇನ್ನಿಲ್ಲದ ರೂಲ್ಸ್ ಗಳು ಹೇಳ್ತೀರಿ ಎಂದು ಮಹಾನಗರ ಪಾಲಿಕೆ ಮಾಜಿ ಮೇಯರ್ ಎಸ್. ಟಿ. ವೀರೇಶ್ ಅವರು ಪ್ರಶ್ನೆಗಳ ಸುರಿಮಳೆಗೈದರು.

ಆಟೋ ಆರ್ ಸಿ, ಡಿಎಲ್ ಇಲ್ಲದೇನೆ ಆಟೋ ಓಡಿಸ್ತಾರ. ರ್ಯಾಲಿ ಹೋಗುವ ಸಂದರ್ಭದಲ್ಲಿ ಪರಿಶೀಲನೆ ಮಾಡ್ತೀರಾ ಎಂದು ಪೊಲೀಸರ ಜೊತೆ ಮಾತಿನ ಚಕಮಕಿ ನಡೆಯಿತು. ಗೇಟ್ ಗೆ ಬೀಗ ಹಾಕ್ತಿನಿ ಎಂದ ಟ್ರಾಫಿಕ್ ಪೊಲೀಸ್ ಮಂಜುನಾಥ್ ನಲುವಾಗಲು ಮಾತಿಗೆ ಆಕ್ರೋಶ ವ್ಯಕ್ತಪಡಿಸಿದರು.

ಡಿವೈಎಸ್ಪಿ ವಿರುದ್ದವೂ ಕೆಂಡಾಮಂಡಲರಾದ ಹಿಂದೂ ಮುಖಂಡ ಎಸ್. ಟಿ. ವೀರೇಶ್ ಹಾಗೂ ಕಾರ್ಯಕರ್ತರು ಹಿಂದೂಗಳ ಮೇಲಿನ ದಬ್ಬಾಳಿಕೆ ಸಹಿಸಿಕೊಂಡು ಕೂರಲು ಸಾಧ್ಯವಿಲ್ಲ. ಕಾನೂನು ಕ್ರಮ ಎಲ್ಲರ ಮೇಲೆ ಒಂದೇ ರೀತಿಯಲ್ಲಿ ಇರಬೇಕು. ಹಿಂದೂಗಳಿಗೆ ಒಂದು ಕಾನೂನು? ಮುಸ್ಲಿರಿಗೆ ಒಂದು ಕಾನೂನು ಇದೆಯಾ? ಎಲ್ಲರನ್ನೂ ಪರಿಶೀಲಿಸಿ. ಯಾವ ವಾಹನಗಳ ಚಾಲಕರು ದಾಖಲೆಗಳಿಲ್ಲದೇ ಓಡಿಸ್ತಾರೋ ಕೇಸ್ ಹಾಕಲಿ. ಆಜಾದ್ ನಗರದಲ್ಲಿ ಯಾರ ಭಯವಿಲ್ಲದೇ ವಾಹನಗಳ ಓಡಾಟ ಜೋರಾಗಿದ್ದು, ಮೊದಲು ಅಲ್ಲಿ ಹೋಗಿ ಕೇಸ್ ಹಾಕಿ ಎಂದು ಕಾರ್ಯಕರ್ತರು ಒತ್ತಾಯಿಸಿದರು.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

ಮಿಸ್ ಮಾಡ್ದೆ ಓದಿ

Leave a Comment