(Heart Attack) ನಮ್ಮ ದೇಹದ ಪ್ರತಿಯೊಂದು ಭಾಗಕ್ಕೆ ರಕ್ತ ಸಂಚಾರವನ್ನು ಮಾಡುವ ಹೃದಯವು ಮಾನವನ ದೇಹದ ಮುಖ್ಯ ಅಂಗಾಂಗವಾಗಿದೆ. ಹಿಂದಿನ ಕಾಲದಲ್ಲಿ ಹೃದಯಘಾತ ಎಂಬುದು ಕೇವಲ ವಯಸ್ಸಾದವರಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಈ ಒಂದು ಕಾಯಿಲೆಯು ಯುವ ಜನತೆಯಲ್ಲಿಯೂ ಕೂಡ ಹೆಚ್ಚಾಗಿ ಕಾಡುತ್ತಿದೆ.
ಯಾವುದೇ ಒಬ್ಬ ವ್ಯಕ್ತಿಗೆ ಹೃದಯಘಾತ ಆಗುವ ಮುಂಚೆ ಅವನಿಗೆ ಕೆಲವೊಂದಿಷ್ಟು ಸಂದೇಶಗಳನ್ನು ಅವನ ದೇಹವು ಕೊಡುತ್ತಿರುತ್ತದೆ. ಇಂತಹ ಚಿಕ್ಕ ಚಿಕ್ಕ ಲಕ್ಷಣಗಳನ್ನು ನಾವು ನಿರ್ಲಕ್ಷಿಸಿದ್ದಲ್ಲಿ ನಮಗೆ ದೊಡ್ಡ ತೊಂದರೆಯನ್ನುಂಟು ಮಾಡಬಹುದು. ಆದ್ದರಿಂದ ನಾವು ಈ ಒಂದು ಲೇಖನದಲ್ಲಿ ಹೃದಯಘಾತ ಆಗುವ ಮುಂಚೆ ಮನುಷ್ಯನಿಗೆ ಆಗುವ ಕೆಲವು ಲಕ್ಷಣಗಳನ್ನು ತಿಳಿದುಕೊಳ್ಳೋಣ.
1. ಮೊದಲನೇಯ ಲಕ್ಷಣ – ಹೃದಯಾಘಾತ ಆಗುವ ಮುಂಚೆ ಮನುಷ್ಯನಲ್ಲಿ ಕಾಣುವ ಮೊದಲನೆಯ ಲಕ್ಷಣವೆಂದರೆ ಅದು ಎದೆಯಲ್ಲಿ ಏರಿಳಿತ. ಇದು ಲಘು ಹೃದಯಘಾತದ ಸಾಮಾನ್ಯ ಲಕ್ಷಣಗಳಲ್ಲಿ ಒಂದಾಗಿದೆ. ಅಂದರೆ ಮನುಷ್ಯನಿಗೆ ಉಸಿರಾಡುವಾಗ ಎದೆಯಲ್ಲಿ ಅಸ್ವಸ್ಥತೆ, ಭಾರ ಅಥವಾ ಒತ್ತಡದ ರೂಪ ಮನುಷ್ಯನು ಅನುಭವಿಸುತ್ತಾನೆ. ಇಂತಹ ಲಕ್ಷಣಗಳು ನಿಮ್ಮಲ್ಲಿ ಕಂಡು ಬಂದರೆ ಅದನ್ನು ನಿರ್ಲಕ್ಷಿಸಬೇಡಿ.
2. ಎರಡನೇ ಲಕ್ಷಣ – ಉಸಿರಾಟದ ತೊಂದರೆ. ಮನುಷ್ಯನು ಯಾವುದೇ ರೀತಿಯ ದೈಹಿಕ ಚಟುವಟಿಕೆ ಅಥವಾ ಕಸರತ್ತಿನ ಕೆಲಸ ಮಾಡದೆ ಅವನು ಉಸಿರಾಟದ ತೊಂದರೆ ಅನುಭವಿಸುತ್ತಿದ್ದರೆ ಅದು ಹೃದಯಘಾತದ ಸಂಕೇತವಿರಬಹುದು. ಇದು ಮನುಷ್ಯನಿಗೆ ಎದೆಯಲ್ಲಿ ಒತ್ತಡ ಮತ್ತು ನೋವನ್ನುಂಟು ಮಾಡುತ್ತದೆ.
3. ಮೂರನೇ ಲಕ್ಷಣ – ಚಳಿ ಅಥವಾ ಬೆವರುವಿಕೆ. ಇದ್ದಕ್ಕಿದ್ದಂತೆಯೇ ಚಳಿ ಆಗುವುದು ಅಥವಾ ಬೆವರುವುದು ಕೂಡ ಹೃದಯಾಘಾತದ ಲಕ್ಷಣವಾಗಿದೆ.
4. ನಾಲ್ಕನೇ ಲಕ್ಷಣ – ಅತಿಯಾದ ಆಯಾಸ. ಸಣ್ಣಪುಟ್ಟ ಕೆಲಸ ಮಾಡಿದರು ಕೂಡ ಅತಿಯಾದ ಆಯಾಸವಾಗುವುದು ಕೂಡ ಹೃದಯಾಘಾತದ ಲಕ್ಷಣವಾಗಿರಬಹುದು.
5. ಐದನೇ ಲಕ್ಷಣ – ಕೈಕಾಲುಗಳಲ್ಲಿ ನೋವು. ಹೃದಯಾಘಾತದ ಲಕ್ಷಣ ಇರುವವರಿಗೆ ಭುಜ, ಕುತ್ತಿಗೆ, ತೋಳು ಹಾಗೂ ವಿವಿಧ ಅಂಗಗಳಲ್ಲಿ ನೋವಿನ ತೊಂದರೆಯಾಗುತ್ತಿದ್ದರೆ ಅದು ಕೂಡ ಹೃದಯಘಾತದ ಲಕ್ಷಣ.
ಹೃದಯಾಘಾತದ ಲಕ್ಷಣಗಳನ್ನು ಕಡೆಗಣಿಸಿದರೆ ಎಷ್ಟು ಅಪಾಯಕಾರಿ?
ಮನುಷ್ಯನಿಗೆ ಆಗಾಗ ಕಾಡುವ ಈ ಹೃದಯ ಕಾಟದ ಲಕ್ಷಣಗಳನ್ನು ಸಣ್ಣ ತೊಂದರೆ ಎಂದು ತಿಳಿದು ಕಡೆಗಣಿಸಿದರೆ ಅದು ಮುಂದಿನ ಹಂತದಲ್ಲಿ ದೊಡ್ಡ ಪರಿಣಾಮ ಬೀರುತ್ತದೆ. ಇದರ ಅರ್ಥ ಇಂತಹ ತೊಂದರೆಗಳನ್ನು ನೀವು ಅನುಭವಿಸುತ್ತಿದ್ದಲ್ಲಿ ಅದನ್ನು ಗಂಭೀರವಾಗಿ ತೆಗೆದುಕೊಂಡು ಚಿಂತೆ ಮಾಡುವ ಅವಶ್ಯಕತೆಯೂ ಕೂಡ ಇಲ್ಲ. ಏಕೆಂದರೆ ಇಂತಹ ಲಕ್ಷಣಗಳು ನಿಮ್ಮಲ್ಲಿ ಕಂಡುಬಂದಲ್ಲಿ ನೀವು ವೈದ್ಯರನ್ನು ಭೇಟಿ ನೀಡಿ ಸಲಹೆ ಪಡೆದುಕೊಳ್ಳುವುದು ಸೂಕ್ತ ಸಲಹೆಯಾಗಿದೆ.