Home ದಾವಣಗೆರೆ ಹಾಸನ ಡಿಸಿಗೆ ಫೈಲ್ ಕ್ಲಿಯರೆನ್ಸ್‌ಗೆ ಲಕ್ಷಾಂತರ ರೂಪಾಯಿ ಲಂಚ? ವಾಟ್ಸಾಪ್ ಚಾಟ್ ಬಿಡುಗಡೆಗೊಳಿಸಿದ ಹೆಚ್.ಡಿ. ಕುಮಾರಸ್ವಾಮಿ ಸರ್ಕಾರಕ್ಕೆ ಹಾಕಿದ ಸವಾಲೇನು?
ದಾವಣಗೆರೆಕ್ರೈಂ ನ್ಯೂಸ್ನವದೆಹಲಿಬೆಂಗಳೂರು

ಹಾಸನ ಡಿಸಿಗೆ ಫೈಲ್ ಕ್ಲಿಯರೆನ್ಸ್‌ಗೆ ಲಕ್ಷಾಂತರ ರೂಪಾಯಿ ಲಂಚ? ವಾಟ್ಸಾಪ್ ಚಾಟ್ ಬಿಡುಗಡೆಗೊಳಿಸಿದ ಹೆಚ್.ಡಿ. ಕುಮಾರಸ್ವಾಮಿ ಸರ್ಕಾರಕ್ಕೆ ಹಾಕಿದ ಸವಾಲೇನು?

Share
ಹಾಸನ
Share

ಹಾಸನ:ರಾಜ್ಯದಲ್ಲಿ ಸರ್ಕಾರಿ ಕಡತಗಳ ವಿಲೇವಾರಿ ಹಾಗೂ ವರ್ಗಾವಣೆಗಳಿಗೆ ಲಂಚದ ಹಾವಳಿ ಮಿತಿಮೀರಿದೆ ಎಂದು ಕೇಂದ್ರ ಸಚಿವ ಹಾಗೂ ಜೆಡಿಎಸ್ ನಾಯಕ ಹೆಚ್.ಡಿ. ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.

ಹಾಸನದಲ್ಲಿ ಸುದ್ದಿಗೋಷ್ಠಿ ನಡೆಸಿರುವ ಅವರು, ಮೂರು ಸ್ಟೋನ್ ಕ್ರಷರ್ ಫೈಲ್‌ಗಳ ವಿಲೇವಾರಿಗೆ ಬರೋಬ್ಬರಿ 60 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಡಲಾಗಿದೆ ಎಂದು ಆರೋಪಿಸಿ, 15 ಪುಟಗಳ ವಾಟ್ಸಾಪ್ ಸಂಭಾಷಣೆಯ ದಾಖಲೆಗಳನ್ನು ಬಹಿರಂಗಪಡಿಸಿದ್ದಾರೆ.

ಅಧಿಕಾರಿಯನ್ನು ನಿರ್ದಿಷ್ಟ ಹುದ್ದೆಯಲ್ಲಿ ಮುಂದುವರಿಸಲು 75 ಲಕ್ಷ ರೂ. ಹಣ ಸಂದಾಯವಾಗಿದೆ ಹಾಗೂ ಜಮೀನು ಪರಿವರ್ತನೆ ಮತ್ತು ಕ್ರಷರ್ ಅನುಮೋದನೆಗಳ ಹೆಸರಿನಲ್ಲಿ ದೊಡ್ಡ ಮಟ್ಟದಲ್ಲಿ ಅಕ್ರಮ ಹಣ ವಸೂಲಿ ನಡೆಯುತ್ತಿದೆ ಎಂದು ಅವರು ಕಿಡಿಕಾರಿದ್ದಾರೆ.

ಫೈಲ್ ಕ್ಲಿಯರೆನ್ಸ್‌ಗೆ ಲಂಚದ ಬೇಡಿಕೆ: ಕ್ರಷರ್-ಸಂಬಂಧಿತ ಮೂರು ಕಡತಗಳನ್ನು ವಿಲೇವಾರಿ ಮಾಡಲು ಕೇಳಲಾದ 60 ಲಕ್ಷ ರೂ.ಗಳಲ್ಲಿ, 50 ಲಕ್ಷ ರೂ. ಹಿರಿಯ ಅಧಿಕಾರಿಗೆ ಮತ್ತು 10 ಲಕ್ಷ ರೂ. ಇತರೆ ಸಿಬ್ಬಂದಿಗೆ ಎಂದು ಹಂಚಿಕೆಯಾಗಿರುವುದಾಗಿ ವಾಟ್ಸಾಪ್ ಚಾಟ್‌ನಲ್ಲಿ ಉಲ್ಲೇಖಿಸಲಾಗಿದೆ.

ವರ್ಗಾವಣೆ ಮತ್ತು ಹುದ್ದೆ ಉಳಿಸಿಕೊಳ್ಳಲು ಹಣ: ನಿರ್ದಿಷ್ಟ ಅಧಿಕಾರಿಯನ್ನು ಅದೇ ಸ್ಥಳದಲ್ಲಿ ಉಳಿಸಿಕೊಳ್ಳಲು ವಿವಿಧ ಮೂಲಗಳಿಂದ 75 ಲಕ್ಷ ರೂ. ಸಂಗ್ರಹಿಸಿ ಮಧ್ಯವರ್ತಿ ಮೂಲಕ ನೀಡಲಾಗಿದೆ ಎಂದು ಕುಮಾರಸ್ವಾಮಿ ಆರೋಪಿಸಿದ್ದಾರೆ.

ಮೋಬೈಲ್ ವಶಕ್ಕೆ ಪಡೆಯಲು ಆಗ್ರಹ: ಈ ಅಕ್ರಮ ವಸೂಲಿ ದಂಧೆಯ ಹಿಂದೆ ಇರುವವರ ವಿರುದ್ಧ ಕಠಿಣ ತನಿಖೆ ನಡೆಸಬೇಕು ಹಾಗೂ ಸಂಬಂಧಪಟ್ಟವರ ಮೊಬೈಲ್ ಫೋನ್‌ಗಳನ್ನು ವಶಕ್ಕೆ ಪಡೆದು ಸತ್ಯಾಸತ್ಯತೆ ಹೊರತರಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಸರ್ಕಾರಕ್ಕೆ ಭ್ರಷ್ಟಾಚಾರ ನಿರ್ಮೂಲನೆ ಮಾಡುವ ಪ್ರಾಮಾಣಿಕ ಇಚ್ಛೆಶಕ್ತಿ ಇದ್ದರೆ ಇಂತಹ ಅಕ್ರಮಗಳಿಗೆ ತಡೆ ಹಾಕಬೇಕು. ಸರ್ಕಾರ ಇದನ್ನು ಸರಿಪಡಿಸಿದರೆ ನಾವು ಮೊದಲು ಅಭಿನಂದಿಸುವುದಾಗಿ ಹೆಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.

ಹಾಸನ ಡಿಸಿ ಇದಕ್ಕೆ ತಿರುಗೇಟು ನೀಡಿದ್ದು, ಮಾಧ್ಯಮಗಳಿಗೆ ಯಾಕೆ ಬಿಡುಗಡೆ ಮಾಡಿದ್ದೀರಿ. ಎಫ್ ಐಆರ್ ದಾಖಲಿಸಿ. ತನಿಖೆ ನಡೆಸುವಂತೆ ಆಗ್ರಹಿಸಿ ಎಂದು ಸಲಹೆ ನೀಡಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Related Articles