ರೋಹ್ಟಕ್ (ಹರ್ಯಾಣ): ಹರ್ಯಾಣದ ರೋಹ್ಟಕ್‌ನಲ್ಲಿ ಅತ್ಯಂತ ಆಘಾತಕಾರಿ ಹಾಗೂ ದುರಂತ ಘಟನೆಯೊಂದು ವರದಿಯಾಗಿದೆ. ಯುಕೆಜಿ (UKG) ಓದುತ್ತಿದ್ದ ಆರು ವರ್ಷದ ಹೆಣ್ಣು ಮಗುವಿನ ಮೇಲೆ ಖಾಸಗಿ ಶಾಲೆಯ ಆವರಣದಲ್ಲೇ ಲೈಂಗಿಕ ದೌರ್ಜನ್ಯ ಎಸಗಲಾಗಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಸೋಮವಾರ ಎಂದಿನಂತೆ ಶಾಲೆಗೆ ಹೋಗಿ ಮನೆಗೆ ಹಿಂತಿರುಗಿದ ಮಗುವಿನ ಬಟ್ಟೆ ಬದಲಾಯಿಸುವಾಗ ಆಕೆಯ ಸ್ಥಿತಿ ಗಂಭೀರವಾಗಿರುವುದನ್ನು ತಾಯಿ ಗಮನಿಸಿದ್ದಾರೆ. ತಕ್ಷಣವೇ ಮಗುವನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿನ ವೈದ್ಯರು ಲೈಂಗಿಕ ದೌರ್ಜನ್ಯದ ಶಂಕೆ ವ್ಯಕ್ತಪಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ರೋಹ್ಟಕ್‌ನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲು ಸೂಚಿಸಿದರು.
ಸರ್ಕಾರಿ ಆಸ್ಪತ್ರೆಯ ವೈದ್ಯರು ನೀಡಿ ಮಾಹಿತಿಯನ್ನಾಧರಿಸಿ, ಲಖನ್ ಮಜ್ರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಚುರುಕುಗೊಂಡಿದೆ. ಬಾಲಕಿಯ ಕುಟುಂಬಸ್ಥರು ಶಾಲೆಯ ಮುಂದೆ ಬೃಹತ್ ಪ್ರತಿಭಟನೆ ನಡೆಸಿದ್ದು, ಶಾಲೆಯ ಆವರಣದಲ್ಲೇ ಈ ಕೃತ್ಯ ನಡೆದಿದೆ ಎಂದು ಆರೋಪಿಸಿದ್ದಾರೆ. ಪೊಲೀಸರು ಪ್ರಸ್ತುತ ಶಾಲೆಯ ಸಿಸಿಟಿವಿ ಫೂಟೇಜ್‌ಗಳನ್ನು (CCTV Footage) ತೀವ್ರವಾಗಿ ಪರಿಶೀಲಿಸುತ್ತಿದ್ದಾರೆ. ಶಾಲಾ ಆವರಣದಲ್ಲಿ ಯಾವುದೇ ಅನಾಹುತ ಸಂಭವಿಸಿದ್ದರೆ ಸಂಸ್ಥೆಯು ಪೂರ್ಣ ಜವಾಬ್ದಾರಿ ಹೊರಲಿದೆ ಎಂದು ಶಾಲೆಯ ಪ್ರಿನ್ಸಿಪಾಲ್ ತಿಳಿಸಿದ್ದಾರೆ.
- 6 ವರ್ಷದ ಮಗುವಿನ ಮೇಲಿನ ದೌರ್ಜನ್ಯ
- Haryana UKG student assault
- Lakhan Majra police FIR
- Rohtak government hospital child abuse case
- Rohtak private school crime
- Rohtak sexual assault case
- School CCTV footage probe
- ರೋಹ್ಟಕ್ ಪೊಲೀಸ್ ತನಿಖೆ
- ರೋಹ್ಟಕ್ ಲೈಂಗಿಕ ದೌರ್ಜನ್ಯ
- ಲಖನ್ ಮಜ್ರಾ ಪೊಲೀಸ್ ಠಾಣೆ
- ಶಾಲಾ ಭದ್ರತೆ
- ಸಿಸಿಟಿವಿ ಪರಿಶೀಲನೆ
- ಹರ್ಯಾಣ ಶಾಲಾ ಆಘಾತ





Leave a comment