ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಬೆಳ್ಳಿ ಪದಕ ಗೆದ್ದ ನೀರಜ್​ಗೆ 4 ಕೋಟಿ ರೂ.-ಕಂಚಿನ ಪದಕ ಗೆದ್ದ ಮನು ಭಾಕರ್​ಗೆ 5 ಕೋಟಿ ರೂ. ಬಹುಮಾನ ಘೋಷಣೆ

On: August 19, 2024 6:23 PM
Follow Us:
---Advertisement---

ಹರಿಯಾಣ :ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ಪದಕ ಗೆದ್ದ ರಾಜ್ಯದ ಕ್ರೀಡಾಪಟುಗಳಿಗೆ ಹರಿಯಾಣ ಸರ್ಕಾರ ಬಹುಮಾನ ಮೊತ್ತ ಘೋಷಿಸಿದೆ.

ಯಂಗ್ ಶೂಟರ್ ಮನು ಭಾಕರ್ 5 ಕೋಟಿ ರೂ. ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾಗೆ 4 ಕೋಟಿ ರೂ. ನೀಡಲಾಗಿದೆ. ಮನು ಭಾಕರ್ ಅವರು ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ 2 ಕಂಚಿನ ಪದಕ ಗೆದ್ದುಕೊಂಡಿದ್ದಾರೆ. 10 ಮೀಟರ್ ಏರ್ ಪಿಸ್ತೂಲ್ ಸಿಂಗಲ್ಸ್ ಮತ್ತು ಮಿಶ್ರ ತಂಡ ಸ್ಪರ್ಧೆಯಲ್ಲಿ ಕಂಚಿನ ಪದಕವನ್ನು ಗೆದ್ದಿದ್ದಾರೆ. ಭಾರತದ ಪರ ಒಲಿಂಪಿಕ್ಸ್ ಆವೃತ್ತಿಯಲ್ಲಿ ಎರಡು ಪದಕ ಗೆದ್ದ ಸಾಧನೆ ಮಾಡಿರುವ ಕಾರಣ ಮನು ಭಾಕರ್​ಗೆ 5 ಕೋಟಿ ರೂ. ನೀಡಲಾಗಿದೆ.

ಜಾವೆಲಿನ್ ಎಸೆತದಲ್ಲಿ ಬೆಳ್ಳಿ ಪದಕ ಗೆದ್ದಿರುವ ನೀರಜ್ ಚೋಪ್ರಾ ಅವರಿಗೆ 4 ಕೋಟಿ ರೂ. ಬಹುಮಾನ ಮೊತ್ತ ನೀಡಲಾಗಿದೆ. ಟೋಕಿಯೊ ಒಲಿಂಪಿಕ್ಸ್​ನಲ್ಲಿ ಚಿನ್ನದ ಪದಕ ಗೆದ್ದಿದ್ದ ನೀರಜ್ ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ 89.45 ಮೀಟರ್ ದೂರ ಎಸೆದು ಈ ಮೂಲಕ ದ್ವಿತೀಯ ಸ್ಥಾನ ಅಲಂಕರಿಸಿ ಬೆಳ್ಳಿ ಪದಕಕ್ಕೆ ಭಾಜನರಾಗಿದ್ದಾರೆ.

ಮನು ಭಾಕರ್ ಅವರ ಜೊತೆಗೂಡಿ ಏರ್ ಪಿಸ್ತೂಲ್ ಮಿಶ್ರ ಶೂಟಿಂಗ್​​ನಲ್ಲಿ ಕಂಚಿನ ಪದಕ ಗೆದ್ದಿದ್ದ ಸರಬ್ಜೋತ್ ಸಿಂಗ್ ಅವರಿಗೆ ಹರಿಯಾಣ ಸರ್ಕಾರ 2.5 ಕೋಟಿ ಬಹುಮಾನ ನೀಡಿದೆ. ಕುಸ್ತಿಯಲ್ಲಿ ಕಂಚಿನ ಪದಕ ಗೆದ್ದ ಯುವ ಕುಸ್ತಿಪಟು ಅಮನ್ ಸೆಹ್ರಾವತ್ ಅವರಿಗೂ 2.50 ಕೋಟಿ ರೂ. ಬಹುಮಾನ ನೀಡಲಾಗಿದೆ. ಈ ಮೂಲಕ ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ಮಿಂಚಿರುವ ರಾಜ್ಯದ ಆಟಗಾರರಿಗೆ ಹರಿಯಾಣ ಸರ್ಕಾರ ಕೋಟಿ ಮೊತ್ತವನ್ನು ನೀಡಿ ಪ್ರೋತ್ಸಾಹಿಸಿದೆ.

Join WhatsApp

Join Now

Join Telegram

Join Now

ಮಿಸ್ ಮಾಡ್ದೆ ಓದಿ

ಆರ್‌ಎಸ್‌ಎಸ್

ಆರ್‌ಎಸ್‌ಎಸ್ ಎಷ್ಟು ದೊಡ್ಡದು? ನಿಷೇಧ ಸಾಧ್ಯವೇ: ಎಲ್ಲೂ ಇಲ್ಲದ ಕುತೂಹಲಕಾರಿ ಮಾಹಿತಿ ಇಲ್ಲಿದೆ

ಪಾಕಿಸ್ತಾನ

ಶಾಶ್ವತ ಕದನ ವಿರಾಮ ಚೆಂಡು ‘ಅಫ್ಘಾನ್ ತಾಲಿಬಾನ್ ಅಂಗಳದಲ್ಲಿ’: ಪಾಕಿಸ್ತಾನ ಪಿಎಂ ಶೆಹಬಾಜ್ ಷರೀಫ್!

ಅಬಕಾರಿ

4.42 ಕೆಜಿ ಚಿನ್ನ, 7.3 ಕೆಜಿ ಬೆಳ್ಳಿ, 1 ಕೋಟಿ ನಗದು, ಐಷಾರಾಮಿ ಕಾರುಗಳು ಪತ್ತೆ: ನಿವೃತ್ತ ಅಬಕಾರಿ ಅಧಿಕಾರಿ ಅಕ್ರಮ ಸಂಪತ್ತು 18 ಕೋಟಿ ರೂ.ಗೂ ಹೆಚ್ಚು!

ಡೊನಾಲ್ಡ್ ಟ್ರಂಪ್

ಡೊನಾಲ್ಡ್ ಟ್ರಂಪ್ ಮತ್ತು ಪ್ರಧಾನಿ ಮಧ್ಯೆ ದೂರವಾಣಿ ಸಂಭಾಷಣೆ ನಡೆದಿಲ್ಲ: ಅಮೆರಿಕ ಅಧ್ಯಕ್ಷರ ಹೇಳಿಕೆ ತಿರಸ್ಕರಿಸಿದ ಭಾರತ!

ಬೆಳ್ಳಿ

ಭಾರತದಲ್ಲಿ ನಾಲ್ಕು ತಿಂಗಳಿಂದ ಏರುಗತಿಯಲ್ಲಿ ಇದ್ದ ಬೆಳ್ಳಿ ಧಾರಣೆ ಕಡಿಮೆಯಾಗುತ್ತಾ? ಇಲ್ಲಿದೆ ಉತ್ತರ

ಚನ್ನಗಿರಿ

ಮಾಮೂಲು ಪಡೆಯುವಾಗ ಪ್ರಗ್ನೆಂಟ್ ಇರೋಲ್ವ: ಅರಣ್ಯಾಧಿಕಾರಿ ಶ್ವೇತಾ ಬಗ್ಗೆ ಕೀಳುಮಟ್ಟದ ಹೇಳಿಕೆ ಕೊಟ್ಟ ಚನ್ನಗಿರಿ “ಕೈ” ಶಾಸಕ ಶಿವಗಂಗಾ ಬಸವರಾಜ್!

Leave a Comment