SUDDIKSHANA KANNADA NEWS/ DAVANAGERE/ DATE:03-10-2023
ದಾವಣಗೆರೆ: ಔಷಧ ಅಂಗಡಿಯಲ್ಲಿ ದಾಂಧಲೆ ನಡೆಸಿದ್ದ ನಾಲ್ವರು ಆರೋಪಿಗಳನ್ನು ಹರಿಹರ (Harihara) ಪೊಲೀಸರು ಬಂಧಿಸಿದ್ದಾರೆ.
Read Also This Story:
Davanagere: ನಾನೇನೂ ಮಂತ್ರಿಗಿರಿ ಕೇಳಿಲ್ಲ,ಅನ್ಯಾಯದ ಬಗ್ಗೆ ಧ್ವನಿ ಎತ್ತಿದ್ದೇನೆ, ಸಿಎಂ ಸಿದ್ದರಾಮಯ್ಯ ಕರೆದಾಗ ಹೋಗಿ ಮಾತನಾಡುತ್ತೇನೆ: ಶಾಮನೂರು ಶಿವಶಂಕರಪ್ಪ
ದಾವಣಗೆರೆಯ ಖಾಲಿದ್ ಸಿದ್ಧಿಕ್ ಚಾರ್ಲಿ, ಆಸೀಫ್, ನದೀಮ್ ಹಾಗೂ ಅಹಮ್ಮದ್ ಪೈಲ್ವಾನ್ ಬಂಧಿತ ಆರೋಪಿಗಳು. ಮೆಡಿಕಲ್ ಶಾಪ್ ಗೆ ತೆರಳಿದ್ದವರು ಔಷಧ ನೀಡುವಂತೆ ಕೇಳಿದರು. ಆಗ ಮೆಡಿಕಲ್ ಶಾಪ್ ನವರು ವೈದ್ಯರ ಚೀಟಿ ನೀಡುವಂತೆ ಕೇಳಿದ್ದಾರೆ. ಇದರಿಂದ ರೊಚ್ಚಿಗೆದ್ದು ಅಂಗಡಿಯಲ್ಲಿ ದಾಂಧಲೆ ನಡೆಸಿ, ಹಲ್ಲೆ ಮಾಡಿದ್ದಾರೆ.
ಆಸೀಫ್ ಹಾಗೂ ಮಹಮ್ಮದ್ ಪೈಲ್ವಾನ್ ಮೆಡಿಕಲ್ ಶಾಪ್ ಗೆ ಬಂದು ಮಾತ್ರೆ ಕೇಳಿದ್ದು, ಈ ವೇಳೆ ವೈದ್ಯರ ಚೀಟಿ ಕೊಡದೇ ಯಾವುದೇ ಕಾರಣಕ್ಕೂ ಔಷಧ ನೀಡುವುದಿಲ್ಲ. ವೈದ್ಯರ ಚೀಟಿ ತನ್ನಿ, ಆಮೇಲೆ ಕೊಡುತ್ತೇನೆ ಎಂದು ಹೇಳಿ ವಾಪಸ್ ಕಳುಹಿಸಿದ್ದರು. ಇದರಿಂದ ರೊಚ್ಚಿಗೆದ್ದ ಅಹಮ್ಮದ್, ಆಸೀಫ್ ಅವರು, ಖಾಲಿದ್, ಸಿದ್ಧಿಕ್ ಚಾರ್ಲಿ ಎಂಬುವವರ ಜೊತೆ ಆಯುಧಗಳೊಂದಿಗೆ ಅಂಗಡಿಯ ಗಾಜು, ಸಾಮಗ್ರಿಗಳನ್ನು ಒಡೆದು ಹಲ್ಲೆ ಮಾಡಿದರು ಎಂದು ಮಾಲೀಕ ಅಮಾನುದ್ದೀನ್ ಹರಿಹರ (Harihara) ನಗರ ಪೊಲೀಸ್ ಠಾಣೆಯಲ್ಲಿ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದ ಆರೋಪಿಗಳನ್ನು ಸಾರ್ವಜನಿಕರ ಸಹಾಯದಿಂದ ಬೆನ್ನಟ್ಟಿ ಹಿಡಿಯಲಾಗಿದೆ. ಈ ವೇಳೆ ಆರೋಪಿಗಳು ನನ್ನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದರು ಎಂದು ಹೇಳಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಹರಿಹರ (Harihara) ನಗರ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.