ಬೆಂಗಳೂರು: ಆಸ್ಪತ್ರೆಗೆ ದಾಖಲಾಗಿರುವ ದೇಶಕಂಡ ಹಿರಿಯ ರಾಜಕೀಯ ಮುತ್ಸದ್ದಿ, ಮಾಜಿ ಪ್ರಧಾನಿ ಹೆಚ್. ಡಿ. ದೇವೇಗೌಡ ಅವರನ್ನು ಮಾಜಿ ಸಿಎಂ ಬಿ. ಎಸ್. ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಭೇಟಿ ಮಾಡಿದರು.
READ ALSO THIS STORY: ಪ್ರೀತಿ ಬಲೆಗೆ ಬಿದ್ದ ಹಿಂದೂ ಯುವತಿ ಸಾವು: ಆತ್ಮಹತ್ಯೆಗೆ ಲವ್ ಜಿಹಾದ್ ಶಂಕೆ!
ದೇವೇಗೌಡರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದರು. ಸಂಪೂರ್ಣವಾಗಿ ಚೇತರಿಸಿಕೊಳ್ಳುತ್ತಿರುವ ದೇವೇಗೌಡರು ಎಂದಿನಂತೆ ಲವಲವಿಕೆಯಿಂದ ನಮ್ಮೊಂದಿಗೆ ಬೆರೆತು ಮತ್ತಷ್ಟು ಮಾರ್ಗದರ್ಶನ ನೀಡುವಂತಾಗಲಿ ಎಂದು ಯಡಿಯೂರಪ್ಪ ಮತ್ತು ವಿಜಯೇಂದ್ರ ಅವರು ಹೇಳಿದರು. ಆರೋಗ್ಯದ ಬಗ್ಗೆ ಮಾಹಿತಿ ಪಡೆದರು.
ದೇವೇಗೌಡರು ಕರುನಾಡಿನ ಹೆಮ್ಮೆ, ಭಾರತದ ಹಿರಿಮೆ, ಅವರು ಸದಾ ಚೈತನ್ಯಶೀಲರಾಗಿ ದೇಶದ ಬೆಳವಣಿಗೆಗಳಲ್ಲಿ ಪಾಲ್ಗೊಳ್ಳಬೇಕೆಂಬುದು ನಮ್ಮೆಲ್ಲರ ಹಾರೈಕೆಯಾಗಿದೆ. ಇಂದಿನ ಪೀಳಿಗೆಗೆ ಅವರ ಬದುಕು, ಹೋರಾಟ, ಜೀವನಶೈಲಿ ಸದಾ ಮಾರ್ಗದರ್ಶಿಯಾಗಿದೆ. ಶತಾಯುಷ್ಯವನ್ನು ಪೂರೈಸಿ ಅವರು ಸುದೀರ್ಘ ಕಾಲ ನಮ್ಮೊಂದಿಗೆ ಇರಬೇಕೆಂಬುದು ಕೋಟಿ ಕೋಟಿ ಕನ್ನಡಿಗರ ಹಾರೈಕೆಯಾಗಿದೆ ಎಂದು ಯಡಿಯೂರಪ್ಪ, ವಿಜಯೇಂದ್ರ ಹೇಳಿದ್ದಾರೆ. ಈ ಇಬ್ಬರು ನಾಯಕರು ಕೈ ಮುಗಿದು ಆರೋಗ್ಯ ವಿಚಾರಿಸುತ್ತಿದ್ದಂತೆ ದೇವೇಗೌಡ ಅವರು ನಗುಮೊಗದಿಂದಲೇ ಸ್ವಾಗತಿಸಿ ನಮಸ್ಕಾರ ತಿಳಿಸಿದರು.