SUDDIKSHANA KANNADA NEWS/ DAVANAGERE/DATE:04_08_2025
ಬೆಂಗಳೂರು: ಮೈಸೂರು ರಾಜ್ಯವನ್ನು ಸರ್ವಾಂಗೀಣ ಪ್ರಗತಿಯತ್ತ ಕೊಂಡೊಯ್ದ ಮಹಾರಾಜ, ಜನತೆಗಾಗಿ ಜೀವನವಿಡೀ ದುಡಿದ ರಾಜರ್ಷಿ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಪುಣ್ಯತಿಥಿಯ ಸಂಸ್ಮರಣಾ ಕಾರ್ಯಕ್ರಮದಲ್ಲಿಯೇ ಒಡೆಯರ್ ಕೊಡುಗೆಯನ್ನು ಅಪಮಾನಿಸುವ ಕೆಲಸವನ್ನು ಕಾಂಗ್ರೆಸ್ ಮಾಡಿದೆ. ಸಚಿವ ಹೆಚ್. ಸಿ. ಮಹಾದೇವಪ್ಪ ಹೇಳಿಕೆ ಸರಿಯಲ್ಲ ಎಂದು ಬಿಜೆಪಿ ಕಿಡಿಕಾರಿದೆ.
READ ALSO THIS STORY: ಕನ್ನಂಬಾಡಿ ಕಟ್ಟೆಗೆ ಅಡಿಪಾಯ ಹಾಕಿದ್ದು ಟಿಪ್ಪು: “ಹೆಚ್. ಸಿ. ಮಹಾದೇವಪ್ಪನವರೇ ರಾಜಮನೆತನದ ಕೊಡುಗೆ ಗೌರವಿಸಿ, ಇಲ್ಲದಿದ್ದರೆ ತೆಪ್ಪಗಿರಿ!”
ಈ ಹಿಂದಿನ ಅವಧಿಯಲ್ಲಿಯೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಒಡೆಯರ್ ಮನೆತನದ ವಿರುದ್ಧ ದ್ವೇಷದ ರಾಜಕಾರಣ ಮಾಡುತ್ತಾ ಬಂದಿದ್ದರು. ಅಧಿಕಾರಕ್ಕಾಗಿ ಸಂವಿಧಾನ ಮತ್ತು ಇತಿಹಾಸ ತಿರುಚುವಿಕೆಯ ಕೆಲಸವನ್ನು ಕಾಂಗ್ರೆಸ್ ನೆಹರು ಕಾಲದಿಂದಲೂ ಮಾಡುತ್ತಿದೆ. ದೇಶವನ್ನು ಲೂಟಿ ಹೊಡೆದ ಆಕ್ರಮಣಕಾರಿಗಳನ್ನು ವಿಜೃಂಭಿಸುವ ಕೆಲಸ ಕಾಂಗ್ರೆಸ್ ಮಾಡಿದೆ. 1799 ರಲ್ಲಿ ಮೃತರಾದ ಟಿಪ್ಪು ಸುಲ್ತಾನ್ ಕಾಲದಲ್ಲಿ ಯಾವುದೇ ಅಣೆಕಟ್ಟು ನಿರ್ಮಾಣವಾಗಿಲ್ಲ. 1911-1931 ರಲ್ಲಿ ಅವಧಿಯಲ್ಲಿ ನಿರ್ಮಾಣವಾದ ಕೃಷ್ಣರಾಜ ಸಾಗರ ಅಣೆಕಟ್ಟಿನ ಪರಿಕಲ್ಪನೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರದ್ದು ಹಾಗೂ ಕನ್ನಂಬಾಡಿ ನಿರ್ಮಾಣದ ನೇತೃತ್ವವನ್ನು ಹೊತ್ತಿದ್ದು ಭಾರತ ರತ್ನ ಸರ್. ಎಂ. ವಿಶ್ವೇಶ್ವರಯ್ಯನವರು ಎಂದು ತಿಳಿಸಿದೆ.
ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಡ್ರಗ್ಸ್ ಫ್ಯಾಕ್ಟರಿ ನಿರ್ಮಿಸಿದ ಕಾಂಗ್ರೆಸ್ ಸರ್ಕಾರ, ವೋಟ್ ಬ್ಯಾಂಕ್ಗಾಗಿ ಇತಿಹಾಸವನ್ನು ತಿರುಚುವ ಕೆಲಸವನ್ನು ಇನ್ನಾದರೂ ನಿಲ್ಲಿಸಬೇಕು ಎಂದು ಬಿಜೆಪಿ ಸಾಮಾಜಿಕ ಜಾಲತಾಣಗಳಲ್ಲಿ ಒತ್ತಾಯಿಸಿದೆ.