Home ದಾವಣಗೆರೆ ಗುರುಪೂರ್ಣಿಮೆ ಪ್ರಯುಕ್ತ ವಿಶೇಷ ಲೇಖನ: ತಂತ್ರಜ್ಞಾನ ಯುಗದಲ್ಲಿ ಗುರು– ಬದಲಾಗುತ್ತಿರುವ ಬೋಧನೆ, ಬದಲಾಗದ ಗುರುತ್ವ…! 
ದಾವಣಗೆರೆನವದೆಹಲಿಬೆಂಗಳೂರು

ಗುರುಪೂರ್ಣಿಮೆ ಪ್ರಯುಕ್ತ ವಿಶೇಷ ಲೇಖನ: ತಂತ್ರಜ್ಞಾನ ಯುಗದಲ್ಲಿ ಗುರು– ಬದಲಾಗುತ್ತಿರುವ ಬೋಧನೆ, ಬದಲಾಗದ ಗುರುತ್ವ…! 

Share
ಗುರುಪೂರ್ಣಿಮೆ
Share

ಗುರುಪೂರ್ಣಿಮೆಯ ಪೌರಾಣಿಕ ಹಿನ್ನೆಲೆ

ಕುರುಕ್ಷೇತ್ರದರಣರಂಗದಲ್ಲಿಅರ್ಜುನನ ಕೈಯಿಂದ ಗಾಂಡಿವ ಜಾರಿದಾಗ ಶ್ರೀ ಕೃಷ್ಣ ನೀಡಿದ ಭಗವದ್ಗೀತೆಯ ಜ್ಞಾನವು ಗುರು ಸಾನಿಧ್ಯದ ಮಹಿಮೆಯನ್ನು ಸಾರುತ್ತದೆ. ಅರ್ಜುನನ ಮುಂದೆ ಯುದ್ಧವಿತ್ತು, ಆದರೆ ಅವನ ಮನಸ್ಸಿನಲ್ಲಿ ಗೊಂದಲವಿತ್ತು, ಅವನ ಕೈಯಲ್ಲಿಆಯುಧವಿತ್ತು, ಆದರೆ ಅವನ ಹೃದಯದಲ್ಲಿದೌರ್ಬಲ್ಯವಿತ್ತು. ಆ ಕ್ಷಣದಲ್ಲಿಕೃಷ್ಣನು ಕೇವಲ ಸಾರಥಿಯಾಗಿರಲಿಲ್ಲ ಗುರುವಾಗಿದ್ದನು. ಅರ್ಜುನನಿಗೆ ಕೇವಲ ಯುದ್ಧ ಮಾಡುವುದನ್ನು ಕಲಿಸಲಿಲ್ಲ, ಧರ್ಮಕ್ಕಾಗಿ ಬದುಕುವುದನ್ನು ಕಲಿಸಿದನು.

ಇದೇ“ಗುರುವಿನ ಮಹಿಮೆ” ಭಾರತೀಯ ಪುರಾಣ ಮತ್ತುಇತಿಹಾಸದ ಪುಟಗಳನ್ನು ತೆರೆದರೆಗುರು ಶಿಷ್ಯ ಸಂಬಂಧದ ಅನೇಕ ಅಮರ ಕಥೆಗಳು ಕಾಣುತ್ತವೆ.

1. ದ್ರೋಣಾಚಾರ್ಯ ಮತ್ತುಅರ್ಜುನಗುರುವಿನ ಬೋಧನೆ ಮತ್ತು ಶಿಷ್ಯನ ಏಕಾಗ್ರತೆಯ ಪ್ರತೀಕ.

2. ಸಂದಿಪೆನಿ ಮಹರ್ಷಿ ಮತ್ತು ಶ್ರೀ ಕೃಷ್ಣಜ್ಞಾನ ಪಡೆದ ಶಿಷ್ಯನು ಗುರುವಿನ ಋಣವನ್ನು ಮರೆಯಬಾರದೆಂಬ ಸಂದೇಶ.

3. ಚಾಣಕ್ಯ ಮತ್ತುಚಂದ್ರಗುಪ್ತಗುರುವಿನ ದೂರದೃಷ್ಟಿಒಬ್ಬ ಸಾಮಾನ್ಯ ಬಾಲಕನನ್ನು ಸಾಮ್ರಾಟನನ್ನಾಗಿ ರೂಪಿಸಿದ ಕಥೆ.

4. ವಿಶ್ವಾಮಿತ್ರ ಮತ್ತು ಶ್ರೀರಾಮ ಗುರುವಿನ ಮಾರ್ಗದರ್ಶನದಲ್ಲಿ ಶಿಷ್ಯನು ತನ್ನ ಶಕ್ತಿಯನ್ನುಅರಿತುಧರ್ಮರಕ್ಷಣೆಗೆ ಸಜ್ಜಾದ ಮಹಾನ್‌ಉದಾಹರಣೆ.

ಈ ಕಥೆಗಳೆಲ್ಲ ಒಂದು ಸತ್ಯವನ್ನು ಸಾರುತ್ತವೆ. ಶಿಷ್ಯನ ಒಳಗೆ ಅಡಗಿರುವ ಶಕ್ತಿಯನ್ನು ಮೊದಲು ಗುರುತಿಸುವ ಕಣ್ಣು ಗುರುವಿನದು.

ಗುರುಪೌರ್ಣಿಮೆಯ ಪೌರಾಣಿಕ ಹಿನ್ನೆಲೆಯನ್ನು ನೆನೆದಾಗ ಮೊದಲು ನೆನಪಾಗುವ ಮಹಾನ್ ವ್ಯಕ್ತಿತ್ವ ಮಹರ್ಷಿ ವೇದ ವ್ಯಾಸರು ಪರಸರ ಮಹರ್ಷಿ ಮತ್ತು ಸತ್ಯಹತಿಯ ಪುತ್ರನಾಗಿ ಜನಿಸಿದ ವ್ಯಾಸರು ಸಾಮಾನ್ಯ ಮಾನವನಲ್ಲ ಭಾರತೀಯಜ್ಞಾನ ಪರಂಪರೆಯ ಮಹಾನ್‌ ದರ್ಶನಿಕರು ವೇದಗಳ ಅಪಾರ ಜ್ಞಾನವನ್ನು ವಿಭಾಗಿಸಿ ಜನಸಾಮಾನ್ಯರಿಗೆ ಸುಲಭವಾಗಿಗ್ರಹಿಸುವಂತೆ ಮಾಡಿದ ಕಾರಣ ಅವರಿಗೆ ವೇದವ್ಯಾಸ ಎಂಬ ಹೆಸರು ದೊರೆಯಿತು.

ವೇದಗಳನ್ನು ನಾಲ್ಕು ಭಾಗಗಳಾಗಿ ವ್ಯವಸ್ಥಿತಗೊಳಿಸಿದವರು ಋಗ್ವೇದ,ಯಜುರ್ವೇದ, ಸಾಮವೇದ ಮತ್ತುಅಥರ್ವಣ ವೇದ ಈ ಜ್ಞಾನದ್ವಾರಗಳನ್ನು ವ್ಯವಸ್ಥಿತಗೊಳಿಸಿ ಭಾರತೀಯ ಸಂಸ್ಕೃತಿಯ ಜ್ಞಾನ ಭಂಡಾರವನ್ನು ಮುಂದಿನ ಪೀಳಿಗೆಗಳಿಗೆ ಉಳಿಸಿದ ಮಹಾನ್ ಋಷಿ ವ್ಯಾಸರುಅವರ ಕಲಮಿನಿಂದ ಹೊರಬಂದ ಮಹಾಭಾರತ ಕೇವಲ ಒಂದು ಮಹಾಕಾವ್ಯವಲ್ಲಅದು ಮನುಷ್ಯನ ಮನಸ್ಸಿನ ಮಹಾ ಗ್ರಂಥ ಅದರೊಳಗೆ ಧರ್ಮವಿದೆ, ಸತ್ಯವಿದೆ,ಯುದ್ಧವಿದೆ, ಶಾಂತಿಯ ಹಂಬಲವಿದೆ,  ಮನುಷ್ಯನ ದೌರ್ಬಲ್ಯವಿದೆ, ದೈವತ್ವದ ಹುಡುಕಾಟವಿದೆ.

ಗುರುಪೂರ್ಣಿಮೆ ಆಚರಣೆಯ ಹಿನ್ನೆಲೆ

ಆಷಾಢ ಮಾಸದ ಪೌರ್ಣಿಮೆಎಂದುಆಚರಿಸುವಗುರುಪೌರ್ಣಿಮೆಗುರುವಿನ ಮಹತ್ವವನ್ನು ಸ್ಮರಿಸುವ ಪವಿತ್ರ ದಿನವಾಗಿದೆ ಮಹರ್ಷಿ ವೇದವ್ಯಾಸರ ಜನ್ಮದಿನದ ಸ್ಮರಣಾರ್ಥವಾಗಿ ಈ ದಿನವನ್ನು ವ್ಯಾಸ ಪೂರ್ಣಿಮೆ ಎಂದು ಕರೆಯಲಾಗುತ್ತದೆ. ವೇದಗಳು ಪುರಾಣಗಳು ಹಾಗೂ ಭಾರತೀಯ ಜ್ಞಾನ ಪರಂಪರೆಯನ್ನು ಜನಸಾಮಾನ್ಯರಿಗೆ ತಲುಪಿಸುವಲ್ಲಿ ವೇದವ್ಯಾಸರ ಕೊಡುಗೆ ಅಪಾರ. ಹೀಗಾಗಿ ಈ ದಿನವು ಜ್ಞಾನ ಸಂಸ್ಕೃತಿ ಮತ್ತುಗುರು ಶಿಷ್ಯ ಪರಂಪರೆಯ ಮಹತ್ವವನ್ನು ಸಾರುತ್ತದೆ. ಗುರುವಿನ ಜ್ಞಾನಕ್ಕೆ ಗೌರವ ಗುರುವಿನ ಮಾರ್ಗದರ್ಶನಕ್ಕೆ ಕೃತಜ್ಞತೆ ಮತ್ತುಗುರು ತೋರಿದ ಸನ್ಮಾರ್ಗದಲ್ಲಿ ನಡೆಯುವ ಬದ್ಧತೆ ಇವೆ ಗುರುಪೂರ್ಣಿಮೆಯ ನಿಜವಾದ ಆಚರಣೆ.

ಬೋಧನೆಯ ಮಹತ್ವ 

ಒಂದು ಕಾಲವಿತು! ಗುರುಕುಲದ ಆಲದ ಮರದ ನೆರಳಲ್ಲಿ ಗುರುಕುಳಿತುಕೊಳ್ಳುತ್ತಿದ್ದ ಶಿಷ್ಯರು ಸುತ್ತಲೂ ಕುಳಿತು ಅಕ್ಷರಗಳನ್ನಷ್ಟೇ ಅಲ್ಲ ಬದುಕನ್ನುಕಲಿಯುತ್ತಿದ್ದರು! ಗುರು ಹೇಳಿದ ಮಾತುಗಳು ಗಾಳಿಯಲ್ಲಿ ಕರಗುತ್ತಿರಲಿಲ್ಲ. ಬೇರು  ಬಿಡುತ್ತಿದ್ದವು. ಕಾಲ ಬದಲಾಯಿತು!!! ಆಲದ ಮರದ ನೆರಳಿನ ಜಾಗದಲ್ಲಿತರಗತಿಯ ಗೋಡೆಗಳು ಬಂದವು. ತಾಳೆಗರಿಗಳ ಜಾಗದಲ್ಲಿ ಪುಸ್ತಕಗಳು ಬಂದವು. ಪುಸ್ತಕಗಳ ಜಾಗದಲ್ಲಿಕಂಪ್ಯೂಟರ್ ಗಳು ಬಂದವು. ಕಂಪ್ಯೂಟರ್ ಗಳ ಜಾಗದಲ್ಲಿ ಸ್ಮಾರ್ಟ್ ಫೋನ್‌ಗಳು ಬಂದವು. ಈಗ ಮನುಷ್ಯನ ಬೆರಳ ತುದಿಯಲ್ಲಿಕೃತಕ ಬುದ್ಧಿಮತ್ತೆ ನಿಂತಿದೆ

ಒಂದು ಕ್ಷಣದಲ್ಲಿ ಜಗತ್ತಿನ ಮಾಹಿತಿಯೇ ನಮ್ಮ ಮುಂದೆ ತೆರೆದುಕೊಳ್ಳುತ್ತದೆ! ಆದರೆಒಂದು ಪ್ರಶ್ನೆ ಮಾತ್ರ ಇನ್ನೂ ಉಳಿದಿದೆ.  ಮಾಹಿತಿ ಸಿಕ್ಕರೆ ಸಾಕೆ? ಇಲ್ಲ. ಮಾಹಿತಿ ನಮ್ಮ ಮೆದುಳನ್ನು ತುಂಬಬಹುದು. ಆದರೆಜ್ಞಾನ ನಮ್ಮ ಬದುಕನ್ನು ತುಂಬಬೇಕು. ಜ್ಞಾನವನ್ನು ವಿವೇಕವಾಗಿ ಬಳಸಬೇಕು. ವಿವೇಕವನ್ನು ಮಾನವೀಯತೆಯೊಂದಿಗೆ ಬೆಸೆಯಬೇಕು. ಇಲ್ಲಿಯೇ ಗುರುವಿನ ಅಗತ್ಯತೆ ಅತ್ಯಂತ ಅವಶ್ಯಕವಾಗಿಇದೆ.

ಗೂಗಲ್‌ ಇರುವಾಗ ಗುರು ಏಕೆ ಬೇಕು?

ಇಂದು ನಾವು ಕೇಳುವ ಪ್ರಶ್ನೆ, ಗೂಗಲ್‌ಇರುವಾಗಗುರು ಏಕೆ? ಉತ್ತರ ಬಹಳ ಸರಳ ಗೂಗಲ್ ನಮಗೆ ಉತ್ತರ ಕೊಡಬಹುದು. ಗುರು ನಮಗೆ ದಿಕ್ಕು ಕೊಡುತ್ತಾನೆ. ಗುರು ನಮಗೆ ವಿವೇಕ ನೀಡುತ್ತಾನೆ,ತಂತ್ರಜ್ಞಾನ ನಮ್ಮ ಮೆದುಳನ್ನು ವೇಗಗೊಳಿಸಬಹುದು, ಗುರು ನಮ್ಮ ಮನಸ್ಸನ್ನು ವಿಶಾಲಗೊಳಿಸುತ್ತಾನೆ, ಯಂತ್ರವು ನಮ್ಮತಪ್ಪನ್ನುಗುರುತಿಸಬಹುದು. ಆದರೆ ಆ ತಪ್ಪಿನ ಹಿಂದೆ ಅಡಗಿರುವ ನೋವನ್ನುಗುರು ಮಾತ್ರ ಅರ್ಥಮಾಡಿಕೊಳ್ಳಬಲ್ಲನು.

ಯಂತ್ರವು ನಮ್ಮ ಪ್ರಶ್ನೆಗೆಉತ್ತರಿಸಬಹುದು. ಆದರೆ “ನಾವು ಪ್ರಶ್ನೆಯನ್ನೇ ಕೇಳಲಾಗದಷ್ಟು ಕುಗ್ಗಿದಾಗ ನಮ್ಮೊಳಗೆ ಪ್ರಶ್ನಿಸುವ ಧೈರ್ಯವನ್ನು ಹುಟ್ಟಿಸುವವನು”“ಗುರು”. ಆದ್ದರಿಂದಲೇ ತಂತ್ರಜ್ಞಾನವು ಜ್ಞಾನವನ್ನು  ಹಂಚಬಹುದು. ಆದರೆ ಜ್ಞಾನಕ್ಕೆ ಜೀ ವ ತುಂಬುವವನುಗುರು. ಇದೇ ನಿಜವಾದ ಗುರುವಿನ ಮಹತ್ವ. ಶಿಷ್ಯ ಗುರುವಿಗಿಂತ ಎತ್ತರಕ್ಕೆ ಏರಿದಾಗ ಗುರು ಕುಗ್ಗುವುದಿಲ್ಲ. ಬದಲಾಗಿ ಆ ಎತ್ತರದಲ್ಲಿತನ್ನ ಕನಸು ಸಾಕಾರಗೊಂಡಿರುವುದನ್ನು ಕಂಡು ಹೆಮ್ಮೆಪಡುತ್ತಾನೆ.

ಇಂದು ತಂತ್ರಜ್ಞಾನದ ವೇಗದಲ್ಲಿ ಜಗತ್ತು ಓಡುತ್ತಿದೆ. ಕೃತಕ ಬುದ್ಧಿಮತ್ತೆ ಮನುಷ್ಯನ ಜ್ಞಾನವನ್ನುಅನುಕರಿಸುತ್ತಿದೆ. ರೋಬೋಟ್ಗಳು ಮನುಷ್ಯನ ಕೆಲಸವನ್ನು ಮಾಡುತ್ತಿವೆ. ಯಂತ್ರಗಳು ಮನುಷ್ಯನೊಂದಿಗೆ ಸಂಭಾಷಿಸುತ್ತಿದೆ. ಆದರೆ “ಒಬ್ಬ ವಿದ್ಯಾರ್ಥಿಯ ಕಣ್ಣಂಚಿನಲ್ಲಿ ಮೂಡುವ ಕಣ್ಣೀರನ್ನುಕಂಡು ಏನಾಯಿತು ಎಂದು ಕೇಳುವ ಯಂತ್ರ ಇನ್ನೂ ಹುಟ್ಟಿಲ್ಲ,

ಸೋತ ವಿದ್ಯಾರ್ಥಿಯ ಹೆಗಲ ಮೇಲೆ ಕೈಯಿಟ್ಟುಇದು ಅಂತ್ಯವಲ್ಲ, ಮತ್ತೊಂದು ಆರಂಭ ಎಂದು ಹೇಳುವ ಕೃತಕ ಹೃದಯ ಇನ್ನೂ ಸೃಷ್ಟಿಯಾಗಿಲ್ಲ”. ಏಕೆಂದರೆ ಗುರುವು ಕೇವಲ ಬುದ್ದಿಯಿಂದ ಬೋಧಿಸುವುದಿಲ್ಲ “ಹೃದಯದಿಂದ” ಬೋಧಿಸುತ್ತಾನೆ.

ಗುರು ಏಕೆ ಬೇಕು?

ಇಂದಿನ ಯುಗದಲ್ಲೂಗುರು ಏಕೆ ಬೇಕು? ಯುಗ ಬದಲಾಗಿದೆ ಹಿಂದೆಗುರುಕುಲವಿತ್ತು, ನಂತರ ಶಾಲೆ ಬಂತು ಈಗ ಸ್ಮಾರ್ಟ್ಕ್ಲಾಸ್ ಬಂದಿದೆ. ಒಮ್ಮೆ ತಾಳೆಗರಿಗಳು ಇದ್ದವು. ನಂತರ ಪುಸ್ತಕಗಳು ಬಂದವು ಈಗ ಡಿಜಿಟಲ್ ಗ್ರಂಥಾಲಯಗಳಿವೆ. ಒಮ್ಮೆ ಗುರುಗಳು ಮಾತು ಕೇಳಲು ದೂರದೂರಿಗೆ ನಡೆಯಬೇಕಾಗಿತ್ತು. ಈಗ ಒಂದು ಕ್ಲಿಕಿನಲ್ಲಿ ಜಗತ್ತಿನ ಜ್ಞಾನ ನಮ್ಮ ಮುಂದೆ ಬರುತ್ತದೆ. ಕೃತಕ ಬುದ್ಧಿ ಮತ್ತೆ ನಮ್ಮ ಪ್ರಶ್ನೆಗಳಿಗೆ ಉತ್ತರ ನೀಡುತ್ತದೆ. ಆದರೆ, ಯಾವ ಪ್ರಶ್ನೆಯನ್ನು ಕೇಳಬೇಕು ಎಂಬುದನ್ನು  ಕಲಿಸುವವರು ಯಾರು? ಇಂಟರ್ನೆಟ್ ನಮಗೆ ಮಾಹಿತಿಯನ್ನು ನೀಡುತ್ತದೆ. ಆದರೆ ಯಾವುದು ಸತ್ಯಯಾವುದು ಅಸತ್ಯ ಎಂದು ತಿಳಿಸುವವರು ಯಾರು? ತಂತ್ರಜ್ಞಾನ ನಮ್ಮ ವೇಗವನ್ನು ಹೆಚ್ಚಿಸುತ್ತದೆಆದರೆ ನಾವು ಯಾವ ದಿಕ್ಕಿನಲ್ಲಿ ಸಾಗಬೇಕು ಎಂದು ತೋರಿಸುವವರು ಯಾರು? ಅಲ್ಲಿಯೇ ಗುರುವಿನ ಮಹತ್ವಇದೆ.

ಕಾಲ ಬದಲಾಗಬಹುದು!ತಂತ್ರಜ್ಞಾನ ಬದಲಾಗಬಹುದು! ಆದರೆ ಮನುಷ್ಯನಿಗೆ ದಿಕ್ಕು ತೋರಿಸುವಗುರುವಿನ ಅಗತ್ಯ ಎಂದಿಗೂ ಬದಲಾಗುವುದಿಲ್ಲ!

ತಂತ್ರಜ್ಞಾನ ಮತ್ತು ಶಿಕ್ಷಕರ ಪಾತ್ರ

ತಂತ್ರಜ್ಞಾನವು ಶಿಕ್ಷಕರನ್ನು ಬದಲಿಸುವುದಿಲ್ಲ, ಬದಲಾಗಿ ಶಿಕ್ಷಕರ ಸಾಮರ್ಥ್ಯವನ್ನು ವಿಸ್ತರಿಸುವ ಸಾಧನವಾಗಬೇಕು. ಒಂದು ಸ್ಮಾರ್ಟ್ಕ್ಲಾಸ್ ಸಾವಿರಾರು ಚಿತ್ರಗಳನ್ನು ತೋರಿಸಬಹುದು. ಆದರೆ ಒಂದು ಉತ್ತಮ ಗುರು ವಿದ್ಯಾರ್ಥಿಯ ಮನಸ್ಸಿನ ಕಲ್ಪನೆಯ ಕಿಡಿಯನ್ನು ಹೊತ್ತಿಸಬಲ್ಲನು.

ಆನ್ ಲೈನ್ ತಂತ್ರಜ್ಞಾನವು ಹತ್ತಿರ ತಂದಿದೆ. ಆದರೆ ಮಾನವೀಯತೆಯನ್ನು ದೂರ ಮಾಡುವ ಅಪಾಯವೂ ಇದೆ. ಸಾಮಾಜಿಕ ಜಾಲತಾಣಗಳ ಅತಿಯಾದ ಬಳಕೆ, ಸುಳ್ಳು ಸುದ್ದಿಗಳು, ಡಿಜಿಟಲ್ ವ್ಯಸನ, ಮತ್ತು ಕೃತಕ ಸಂಬಂಧಗಳ ನಡುವೆ ಯುವಜನತೆಗೆ ಮಾನವೀಯ ಮೌಲ್ಯಗಳನ್ನು ಕಲಿಸುವ ಜವಾಬ್ದಾರಿ ಗುರುವಿನ ಮೇಲಿದೆ.

ತಂತ್ರಜ್ಞಾನ ಮನುಷ್ಯನ ಕೈಯಲ್ಲಿರುವ ಸಾಧನವಾಗಬೇಕು. ಮನುಷ್ಯನೇ ತಂತ್ರಜ್ಞಾನದ ಕೈಯಲ್ಲಿರುವ ಸಾಧನವಾಗಬಾರದು. ಈ ಅರಿವನ್ನು ಮೂಡಿಸುವವನೇ ನಿಜವಾದ ಗುರು. ಕಾಲ ಬದಲಾಗಬಹುದು, ತರಗತಿಗಳು ಬದಲಾಗಬಹುದು, ಪಾಠ ಪುಸ್ತಕಗಳು ಡಿಜಿಟಲ್ ಆಗಬಹುದು, ಕೃತಕ ಬುದ್ಧಿಮತ್ತೆ ಮಾನವನ ಜ್ಞಾನಕ್ಕೆ ಸವಾಲಾಗಬಹುದು, ಆದರೆ ಅಜ್ಞಾನದಿಂದ ಜ್ಞಾನದ ಕಡೆಗೆ ಮಾಹಿತಿಯಿಂದ ವಿವೇಕದಡೆಗೆ ಯಶಸ್ಸಿನಿಂದ ಸಾರ್ಥಕತೆದೆಡೆಗೆ ಕರೆದೊಯ್ಯುವ ಗುರುವಿನ ಬೆಳಕು ಎಂದಿಗೂ ನಂದುವುದಿಲ್ಲ.

ಇದೇ ತಂತ್ರಜ್ಞಾನ ಯುಗದ ಗುರುಪೂರ್ಣಿಮೆಯ ನಿಜವಾದ ಸಂದೇಶ. ಇಂದು ಶಿಕ್ಷಣದ ಜಗತ್ತು ಬದಲಾಗಿದೆ. ಗುರುಕುಲದ ಜಾಗದಲ್ಲಿ ಸ್ಮಾರ್ಟ್ ಕ್ಲಾಸ್ ಬಂದಿದೆ, ಕಪ್ಪು ಹೊಲಿಗೆಯ ಜಾಗದಲ್ಲಿ ಡಿಜಿಟಲ್ ಬೋರ್ಡ್ ಬಂದಿದೆ. ಪುಸ್ತಕಗಳ ಜಾಗದಲ್ಲಿ ಈ ಬುಕ್ಕುಗಳು ಬಂದಿವೆ. ಶಿಕ್ಷಕರ ಜೊತೆಗಿನ ಸಂವಾದದ ಜೊತೆಗೆ ಎಐ ಮತ್ತುಆನ್ಲೈನ್‌ಕಲಿಕೆಯು ಬಂದಿದೆ.

ಆದರೆ ಜ್ಞಾನವು ತಂತ್ರಜ್ಞಾನದಿಂದ ವೇಗವಾಗಿ ಸಿಗಬಹುದು. ಜೀವನದ ದಾರಿ ಮಾತ್ರ ಗುರುವಿನಿಂದಲೇ ಸಿಗುತ್ತದೆ. ಎಐ ನಮಗೆ ಸಾವಿರ ಉತ್ತರಗಳನ್ನು ಕೊಡಬಹುದು. ಆದರೆ ಯಾವ ಉತ್ತರವನ್ನುಆಯ್ಕೆ ಮಾಡಬೇಕು ಎಂಬ ವಿವೇಕವನ್ನುಗುರು ಕಲಿಸುತ್ತಾನೆ. ಇಂಟರ್ನೆಟ್ ನಮಗೆ ಪ್ರಪಂಚವನ್ನುತೋರಿಸಬಹುದು. ಆದರೆ ಆ ಪ್ರಪಂಚದಲ್ಲಿ ನಾವು ಹೇಗೆ ಬದುಕಬೇಕು ಎಂಬುದನ್ನುಗುರು ಕಲಿಸುತ್ತಾನೆ.

ತಂತ್ರಜ್ಞಾನ ನಮ್ಮನ್ನು ಯಶಸ್ವಿಯಾಗಿಸಬಹುದುಆದರೆ ಯಶಸ್ಸಿನಲ್ಲೂ ಮನುಷ್ಯರಾಗಿಯೇ ಉಳಿಯುವುದನ್ನು ಗುರು ಕಲಿಸುತ್ತಾನೆ. ಇದೇ ಕಾರಣಕ್ಕೆ ತಂತ್ರಜ್ಞಾನ ಯುಗದಲ್ಲಿ ಗುರುವಿನ ಅಗತ್ಯ ಕಡಿಮೆಯಾಗಿಲ್ಲ, ಬದಲಾಗಿಇನ್ನಷ್ಟು ಹೆಚ್ಚಾಗಿದೆ.

ಗುರುದಕ್ಷಿಣೆ

ಗುರುದಕ್ಷಿಣೆಎಂದರೇನು? ಗುರುವಿಗೆ ನಾವು ಏನು ಕೊಡಬಲ್ಲೆವು? ಚಿನ್ನವೇ? ಬೆಳ್ಳಿಯೇ? ಹಣವೇ? ಇಲ್ಲಗುರುವಿಗೆ ಸಲ್ಲಿಸುವ ಅತ್ಯಂತ ದೊಡ್ಡ ಗುರುದಕ್ಷಿಣೆ ಎಂದರೆ ಗುರು ಕಲಿಸಿದ ಮೌಲ್ಯಗಳಲ್ಲಿ ನಾವು ಬದುಕುವುದು.

ಗುರು ತೋರಿಸಿದ ಸತ್ಯದ ದಾರಿಯಲ್ಲಿ ನಡೆಯುವುದು, ನಮ್ಮ ಜ್ಞಾನವನ್ನು ಮತ್ತೊಬ್ಬರ ಬದುಕಿಗೆ ಬೆಳಕಾಗಿಸುವುದು, ನಾವು ಯಶಸ್ವಿಯಾದಾಗ ನಮ್ಮ ಯಶಸ್ಸಿನ ಮೆಟ್ಟಿಲುಗಳನ್ನು ನೆನಪಿಸಿಕೊಳ್ಳುವುದು, ಯಾಕೆಂದರೆ ಗುರುದಕ್ಷಿಣೆ ಗುರುವಿನ ಕೈಗೆ ಕೊಡುವ ಕಾಣಿಕೆಯಲ್ಲ, ಗುರುವಿನ “ಹೃದಯಕ್ಕೆ”ಕೊಡುವ ಸಂತೋಷ.

ಒಬ್ಬ ಶಿಷ್ಯನು ಉತ್ತಮ ಮನುಷ್ಯನಾದಾಗ ಒಬ್ಬಗುರು ನಿಜವಾಗಿ ಗೆದ್ದಿರುತ್ತಾನೆ. ಗುರುಪೂರ್ಣಿಮೆಯಂದು ಗುರುವಿಗೆಂದು ಭಾರೀ ಉಡುಗೊರೆ ನೀಡಬೇಕಿಲ್ಲ. ನಾವು ಒಳ್ಳೆಯ ಮನುಷ್ಯರಾಗೋಣ, ನಾವು ಸತ್ಯದ ದಾರಿಯಲ್ಲಿ ನಡೆಯೋಣ. ನಾವು ಮತ್ತೊಬ್ಬರ ಬದುಕಿನಲ್ಲಿ ಬೆಳಕಾಗೋಣ. ನಮ್ಮಜ್ಞಾನವನ್ನು ಸಮಾಜದ ಒಳಿತಿಗಾಗಿ ಬಳಸೋಣ ಇದೇ ಗುರುವಿಗೆ ಸಲ್ಲಿಸುವ ನಿಜವಾದ ಗುರುದಕ್ಷಿಣೆ.

ವಿಶೇಷ ಲೇಖನ: ಶ್ರೀಮತಿ ದೀಪಾ ಬಿ. ಎಸ್., ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು 
ಕನ್ನಡ ವಿಭಾಗ ಜೆಎಂ ವಿಶ್ವವಿದ್ಯಾಲಯ, ದಾವಣಗೆರೆ, 9342463269

Share

Leave a comment

Leave a Reply

Your email address will not be published. Required fields are marked *

Related Articles