ಸುವಿಗಾಂಮ್: ಗುಜರಾತ್ನ ವಾವ್-ಥರಡ್ ಜಿಲ್ಲೆಯ ಸುವಿಗಾಂಮ್ನಲ್ಲಿ ಅತ್ಯಂತ ಭೀಕರ ಹಾಗೂ ಮನಕಲುಕುವ ಘಟನೆಯೊಂದು ಬೆಳಕಿಗೆ ಬಂದಿದೆ. ಹೆತ್ತ ಮಗನೆಂದೂ ನೋಡದೆ, ಎರಡೂವರೆ ವರ್ಷದ ಹಸುಗೂಸಿನ ಮೇಲೆ ಪೆಟ್ರೋಲ್ ಸುಟ್ಟು ಜೀವಂತ ದಹನ ಮಾಡಿರುವ ಅಮಾನವೀಯ ಘಟನೆ ನಡೆದಿದೆ. ಈ ಕೃತ್ಯದ ಬಳಿಕ ಸಾಕ್ಷ್ಯ ಮುಚ್ಚಿಹಾಕಲು ಆರೋಪಿ ತಂದೆ ಮಗನ ಶವವನ್ನು ರಹಸ್ಯವಾಗಿ ಹೂತುಹಾಕಿದ್ದಾನೆ. ಸದ್ಯ ಪೊಲೀಸರು ಆರೋಪಿಯನ್ನು ಬಂಧಿಸಿ, ಕೊಲೆ ಹಾಗೂ ಸಾಕ್ಷ್ಯ ನಾಶಪಡಿಸಿದ ಕೃತ್ಯದಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಘಟನೆಯ ವಿವರ:
ಆರೋಪಿ ಅಶೋಕ್ ರಾವಲ್ ಎಂಬಾತನ ಪತ್ನಿ ತನ್ನ ತವರು ಮನೆಗೆ ತೆರಳಿದ್ದಳು. ಇದರಿಂದಾಗಿ ಮಗ ನವ್ಘನ್ನನ್ನು ನೋಡಿಕೊಳ್ಳುವ ಏಕೈಕ ಜವಾಬ್ದಾರಿ ಅಶೋಕ್ ಮೇಲಿತ್ತು. ಒಂಟಿಯಾಗಿ ಮಗನನ್ನು ಸಾಕುವುದು ಭಾರವಗಿದೆ ಮತ್ತು ಮಗು ತನಗೆ ಹೊರೆಯಾಗಿದೆ ಎಂದು ಆರೋಪಿ ಭಾವಿಸಿದ್ದಾನೆ.
ಅಕ್ಟೋಬರ್ 13ರ ಮಧ್ಯಾಹ್ನ 1 ರಿಂದ 2 ಗಂಟೆಯ ಸುಮಾರಿಗೆ ಆರೋಪಿ ತನ್ನ ಪುಟ್ಟ ಮಗನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಮಗುವಿಗೆ ತೀವ್ರ ಸುಟ್ಟ ಗಾಯಗಳಾಗಿದ್ದರೂ, ಕೊನೆಗೆ ಆಸ್ಪತ್ರೆಗೆ ಕರೆದೊಯ್ದಿದ್ದರೂ ಮಗು ಸಾವನ್ನಪ್ಪಿದೆ. ಮಗು ಮೃತಪಟ್ಟ ಬಳಿಕ ಯಾರೂ ಇಲ್ಲದ ವೇಳೆ ಸ್ಥಳೀಯ ಸ್ಮಶಾನದಲ್ಲಿ ಶವವನ್ನು ರಹಸ್ಯವಾಗಿ ಹೂತುಹಾಕುವ ಮೂಲಕ ಕ್ರಿಮಿನಲ್ ಕೃತ್ಯವನ್ನು ಮುಚ್ಚಿಹಾಕಲು ಯತ್ನಿಸಿದ್ದಾರೆ.
ಬೆಳಕಿಗೆ ಬಂದ ಕೃತ್ಯ:
ಆರೋಪಿಯ ಚಿಕ್ಕಪ್ಪ ಬಾಬುಭಾಯ್ ರಾವಲ್ ಅವರಿಗೆ ಈ ಘಟನೆಯ ಬಗ್ಗೆ ಮಾಹಿತಿ ತಿಳಿದು ಬಂದಿದೆ. ಸತ್ಯ ತಿಳಿದು ಬೆಚ್ಚಿಬಿದ್ದ ಅವರು ತಕ್ಷಣ ಸುವಿಗಾಂಮ್ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಸ್ಮಶಾನದಲ್ಲಿದ್ದ ಮಗುವಿನ ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿಕೊಟ್ಟಿದ್ದಾರೆ. ಬಿಎನ್ಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.
- Ashok Rawal case
- BNS murder case arrest
- child murder case India
- Crime News Kannada.
- father sets son ablaze
- gujarat father arrested
- Gujarat father burns son
- Suigam crime news
- toddler murdered in gujarat
- Vav-Tharad crime report
- ಅಪರಾಧ ಸುದ್ದಿ
- ಗುಜರಾತ್ ವ್ಯಕ್ತಿ ಬಂಧನ
- ಗುಜರಾತ್ ಸುದ್ದಿ
- ತಂದೆಯಿಂದ ಮಗನ ಕೊಲೆ
- ಪೆಟ್ರೋಲ್ ಹಾಕಿ ದಹನ
- ಮಗನ ಹತ್ಯೆ
- ಸುವಿಗಾಂಮ್ ಕ್ರೈಮ್





Leave a comment