ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

Gruha Jyothi: ಉಚಿತ ವಿದ್ಯುತ್ ಪಡೆಯಬೇಕಾ? ಗೃಹ ಯೋಜನೆ ಅರ್ಜಿ ಸಲ್ಲಿಸುವುದು ಹೇಗೆ? ತಿಳಿಯಬೇಕಾ? ಈ ಸ್ಟೋರಿ ನೋಡಿ

On: June 18, 2023 1:20 PM
Follow Us:
Gruha Jyothi
---Advertisement---

SUDDIKSHANA KANNADA NEWS/ DAVANAGERE/ DATE:18-06-2023

 

ಬೆಂಗಳೂರು (Bangalore) : ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ 200 ಯೂನಿಟ್ ವಿದ್ಯುತ್ ಫ್ರೀ ನೀಡುವುದಾಗಿ ಘೋಷಿಸಲಾಗಿತ್ತು. ಇದನ್ನು ಅನುಷ್ಠಾನಗೊಳಿಸುವುದಾಗಿ ಸಿಎಂ ಸಿದ್ದರಾಮಯ್ಯ ಹೇಳಿದ್ದರು. ಅದರಂತೆ ಕ್ಯಾಬಿನೇಟ್ ನಲ್ಲಿಯೂ ಈಗಾಗಲೇ ಗೃಹ ಜ್ಯೋತಿ ಯೋಜನೆಗೆ ನೀಡಲಾಗಿದೆ. ಆದ್ರೆ, ಈಗ ಉಚಿತ ವಿದ್ಯುತ್ ಪಡೆಯುವವರು ಅರ್ಜಿ ಹೇಗೆ ಸಲ್ಲಿಸಬೇಕು ಎಂಬ ಗೊಂದಲ ಇದ್ದೇ ಇರುತ್ತದೆ. ಇದರ ಪರಿಹಾರಕ್ಕಾಗಿ ಈ ಸ್ಟೋರಿ ನೋಡಿ. ಸಂಪೂರ್ಣ ಮಾಹಿತಿ ಸಿಗುತ್ತದೆ.

ಜುಲೈ 1ರಿಂದ ಜಾರಿಯಾಗಲಿರುವ ರಾಜ್ಯ ಸರ್ಕಾರದ ಎರಡನೇ ಗ್ಯಾರಂಟಿ ಗೃಹಜ್ಯೋತಿ (Gruha Jyothi) ಯೋಜನೆಗೆ ಅರ್ಜಿ ಸಲ್ಲಿಕೆ ಶುರುವಾಗಿದೆ. ಸೇವಾ ಸಿಂಧು ಪೋರ್ಟಲ್​ನಲ್ಲಿ ಕೆಲ ಬದಲಾವಣೆಯಿಂದಾಗಿ ಅರ್ಜಿ ಸಲ್ಲಿಕೆಗೆ ವಿಳಂಬವಾಗಿತ್ತು.
ಸದ್ಯ ಎಲ್ಲವೂ ಸರಿಯಾಗಿದ್ದು, ಭಾನುವಾರದಿಂದ ಅರ್ಜಿ ಸಲ್ಲಿಸಬಹುದು ಎಂದು ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿತ್ತು ಅದರಂತೆ ಅರ್ಜಿ ಸಲ್ಲಿಕೆಗೆ ತಾಂತ್ರಿಕ ಸಮಸ್ಯೆಯಿಂದಾಗಿ ದಿನಪೂರ್ತಿ ಕಾರ್ಯನಿರ್ವಹಣೆ ಆಗಿಲ್ಲ. ಈ ಹಿನ್ನೆಲೆಯಲ್ಲಿ
ಸೋಮವಾರದಿಂದ ಮತ್ತೆ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸುವುದು ಹೇಗೆ ಗೃಹಜ್ಯೋತಿ (Gruha Jyothi)ಗೆ….?

ಗೃಹಜ್ಯೋತಿ ಯೋಜನೆ ಅಡಿ ಸೇವಾ ಸಿಂಧು ಪೋರ್ಟಲ್ ಮೂಲಕ ನೋಂದಣಿಗೆ ಅವಕಾಶ ಕಲ್ಪಿಸಲಾಗಿದೆ. https://sevasindhugss.karnataka.gov.in ವೆಬ್​ಸೈಟ್​ಗೆ ಭೇಟಿ ನೀಡುವ ಮೂಲಕ ಮೊಬೈಲ್, ಕಂಪ್ಯೂಟರ್,
ಲ್ಯಾಪ್​ಟಾಪ್​ನಲ್ಲೂ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ ಸಂಖ್ಯೆ 1912 ಸಂಪರ್ಕಿಸಬಹುದು.

ಈ ಸುದ್ದಿಯನ್ನೂ ಓದಿ:

Requirement: ಕರ್ನಾಟಕದಲ್ಲಿ ಭರ್ಜರಿ ನೇಮಕಾತಿ: ಪಿಡಿಒ, ಎಸ್ ಡಿಎ 1280 ಪೋಸ್ಟ್ ಗಳು ಸೇರಿದಂತೆ ಡೆಪ್ಯೂಟಿ ಮ್ಯಾನೇಜರ್ ನೇಮಕಾತಿ ಸಂಪೂರ್ಣ ಮಾಹಿತಿ

ಎಲ್ಲೆಲ್ಲಿ ಅರ್ಜಿ ಸಲ್ಲಿಕೆಗಿದೆ ಅವಕಾಶ:

ಬೆಂಗಳೂರು ಒನ್, ಕರ್ನಾಟಕ ಒನ್, ಗ್ರಾಮ ಒನ್, ನಾಡ ಕಚೇರಿ, ಗ್ರಾ.ಪಂ. ಕಚೇರಿ, ವಿದ್ಯುತ್​ ಕಚೇರಿಗಳಲ್ಲಿ ನೋಂದಾಯಿಸಬಹುದು. ಆಧಾರ್ ಕಾರ್ಡ್, ಆರ್​ಆರ್ ನಂಬರ್, ಮೊಬೈಲ್ ಸಂಖ್ಯೆ, ಮನೆ ಬಾಡಿಗೆ ಕರಾರು ಪತ್ರ ನೀಡಿ ಅರ್ಜಿ ಸಲ್ಲಿಸಬಹುದಾಗಿದೆ.

ಇತ್ತೀಚಿಗೆ ಗೃಹ ಜ್ಯೋತಿ (Gruha Jyothi)ಯೋಜನೆಗೆ ಇದೇ ತಿಂಗಳು 15 ರಿಂದ ಅರ್ಜಿ ಸಲ್ಲಿಕೆ ಆರಂಭವಾಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಇಂಧನ ಸಚಿವ ಕೆ.ಜೆ. ಜಾರ್ಜ್‌ ಅವರು ಹೇಳಿದ್ದರು. ಆದರೆ ತಾಂತ್ರಿಕ ದೋಷ ಹಿನ್ನೆಲೆಯಲ್ಲಿ ಸೇವಾಸಿಂಧು ಆ್ಯಪ್​ ಮೂಲಕ ಅರ್ಜಿ ಸಲ್ಲಿಸಲು ವಿಳಂಬವಾಗಿತ್ತು. ಇದರಿಂದ ಸರ್ಕಾರ ಅರ್ಜಿ ಸಲ್ಲಿಸುವ ದಿನಾಂಕ ಮುಂದೂಡಿತ್ತು. ಹೀಗಾಗಿ ಗೃಹಜ್ಯೋತಿ ಯೋಜನೆಗೆ ನೋಂದಣಿ ನಾಳೆಯಿಂದ ಅರ್ಜಿ ಸಲ್ಲಿಸಲು ಕೋರಲಾಗಿದೆ.

ಬೆಸ್ಕಾಂ, ನಾಡಕಚೇರಿಗಳ ಕಾರ್ಯನಿರ್ವಹಣೆ:

ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಗೃಹ ಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಕೆ ಹಿನ್ನಲೆ ಇಂದು ಕೂಡ ಬೆಸ್ಕಾಂ ಕಚೇರಿ ಹಾಗೂ ನಾಡ ಕಚೇರಿಗಳಲ್ಲಿ ಕಾರ್ಯನಿರ್ವಹಿಸಲು ಸೂಚನೆ ನೀಡಲಾಗಿತ್ತು. ಸಾರ್ವಜನಿಕರಿಗೆ ಸಹಾಯ ಮಾಡುವ ದೃಷ್ಟಿಯಿಂದ ಭಾನುವಾರದಂದು ಕೂಡ ಕರ್ತವ್ಯ ದಿನವೆಂದು ಪರಿಗಣಿಸಿ, ಇಂದು ಬೆಳಿಗ್ಗೆ 11 ಗಂಟೆಯಿಂದ ಅರ್ಜಿ ಸಲ್ಲಿಸಲು ಸೂಚನೆ ನೀಡಲಾಗಿತ್ತು.

11 ಗಂಟೆಗೆ ಗೃಹಜ್ಯೋತಿ ಯೋಜನೆಗೆ ಸರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿತ್ತು. ಇನ್ನು ಗೃಹ ಜ್ಯೋತಿ ಯೋಜನೆ ಅರ್ಜಿ ಸಲ್ಲಿಕೆಗೆ ಬೆಂಗಳೂರು ನಗರದ ಎಂ.ಜಿ ರಸ್ತೆಯ ಬೆಸ್ಕಾಂ ಪ್ರಾದೇಶಿಕ ಕಚೇರಿಯಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಉಚಿತ 200 ಯೂನಿಟ್ ಎನ್ನುವ ಬೋರ್ಡ್ ಹಾಕಿರುವ ಸಿಬ್ಬಂದಿ, ಎರಡು ಕಂಪ್ಯೂಟರ್ ಇಟ್ಟು, ಎರಡು ಕೌಂಟರ್ ತೆರೆಯಲು ರೆಡಿ ಮಾಡಿಕೊಳ್ಳಲಾಗಿದೆ. ಜೊತೆಗೆ ಏನೇನು ದಾಖಲೆಗಳು ಬೇಕು, ಹೇಗೆ, ಎಲ್ಲಿ ಅಪ್ಲೋಡ್ ಮಾಡಬಹುದು ಎನ್ನುವುದರ ಬಗ್ಗೆ ಸಂಪೂರ್ಣ ವಿವರಗಳು ಆ ಬೋರ್ಡ್​ನಲ್ಲಿದೆ.

 

ಗೃಹ ಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಕೆ ಪ್ರಾರಂಭ, ಗೃಹ ಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ? ದಾವಣಗೆರೆಯಲ್ಲಿ ಅರ್ಜಿ ಸಲ್ಲಿಕೆಗೆ ಜನರು ಏನು ಮಾಡಬೇಕು..?

Gruha Jyothi Yojane,Gruha Jyothi Online, Gruha Jyothi Apllication, Gruha Jyothi Latest News, Davanagere Gruha Jyothi News

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment