SUDDIKSHANA KANNADA NEWS/ DAVANAGERE/ DATE:22-02-2025
ಬೆಂಗಳೂರು: ಗೃಹಲಕ್ಷ್ಮಿ ಯೋಜನೆಯಡಿ ಹಣ ಬಂದಿಲ್ಲ ಎನ್ನೋ ಕೊರಗು ನಿಂತಿಲ್ಲ. ಕಳೆದ ಮೂರು ತಿಂಗಳಿನಿಂದ ಅಕ್ಕಿ ಹಣ ಮತ್ತು ಪ್ರತಿ ತಿಂಗಳು ನೀಡುವ 2 ಸಾವಿರ ರೂಪಾಯಿ ಬಂದಿಲ್ಲ ಎಂದು ಚಿಂತಾಕ್ರಾಂತರಾಗಿದ್ದಾರೆ. ಈ ನಡುವೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಗೃಹಲಕ್ಷ್ಮೀಯರಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ.
ಇನ್ನೊಂದು ವಾರದಲ್ಲಿ ಬಾಕಿ ಇರುವ ಹಣ ಪಾವತಿಯಾಗುತ್ತದೆ. ನನಗೆ ಆಕ್ಸಿಡೆಂಟ್ ಆದ ಕಾರಣ ಹಣ ಬಿಡುಗಡೆ ವಿಳಂಬವಾಗಿದೆ. ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಇನ್ನೊಂದು ವಾರದೊಳಗೆ ಹಣ ಪಾವತಿ ಆಗಲಿದೆ. ಗೃಹಲಕ್ಷ್ಮೀ ಯೋಜನೆಯಡಿ ಬರಬೇಕಿರುವ ಹಣ ಅಕೌಂಟ್ ಗೆ ಕ್ರೆಡಿಟ್ ಆಗಲಿದೆ ಎಂಬ ಭರವಸೆ ನೀಡಿದ್ದಾರೆ.
ಕಳೆದ ಕೆಲ ದಿನಗಳ ಹಿಂದೆಯಷ್ಟೇ ಸಿಎಂ ಸಿದ್ದರಾಮಯ್ಯರು ಹಣ ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದ್ದರು. ಇದು ವಿಪಕ್ಷಗಳ ಟೀಕೆಗೆ ಗುರಿಯಾಗಿತ್ತು. ಈಗ ಲಕ್ಷ್ಮೀ ಹೆಬ್ಬಾಳ್ಕರ್ ಅವರೇ ಭರವಸೆ ನೀಡಿದ್ದು, ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಆದಷ್ಟು ಬೇಗ ಮಹಿಳೆಯರಿಗೆ ಪ್ರತಿತಿಂಗಳ 2 ಸಾವಿರ ರೂಪಾಯಿ ಬಾಕಿ ಇದ್ದರೆ ಕೂಡಲೇ ಪಾವತಿಸುವಂತೆ ಹೇಳಿದ್ದಾರೆ. ಇದು ಗೃಹಲಕ್ಷ್ಮೀಯರಿಗೆ ಖುಷಿ ಕೊಟ್ಟಿದೆ.