Home ದಾವಣಗೆರೆ ಸತತ 4ನೇ ದಿನವೂ ಏರಿಕೆಯಾದ ಚಿನ್ನದ ದರ: ₹1.54 ಲಕ್ಷ ರೂ. ಗಡಿ ದಾಟಿದ 24K ಬಂಗಾರ!
ದಾವಣಗೆರೆನವದೆಹಲಿಬೆಂಗಳೂರುವಾಣಿಜ್ಯ

ಸತತ 4ನೇ ದಿನವೂ ಏರಿಕೆಯಾದ ಚಿನ್ನದ ದರ: ₹1.54 ಲಕ್ಷ ರೂ. ಗಡಿ ದಾಟಿದ 24K ಬಂಗಾರ!

Share
ಚಿನ್ನ
Share

ನವದೆಹಲಿ: ದೇಶೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಏರಿಕೆ ಸತತ ನಾಲ್ಕನೇ ದಿನವೂ ಮುಂದುವರಿದಿದೆ.

ರಾಜಧಾನಿ ದೆಹಲಿಯಲ್ಲಿ 24 ಕ್ಯಾರೆಟ್ (99.9% ಶುದ್ಧತೆ) ಚಿನ್ನದ ದರ ತೆರಿಗೆ ಸೇರಿ ಪ್ರತಿ 10 ಗ್ರಾಂಗೆ ₹1,54,000 ತಲುಪಿದೆ. ಮಲ್ಟಿ ಕಮೋಡಿಟಿ ಎಕ್ಸ್‌ಚೇಂಜ್ (MCX) ಫ್ಯೂಚರ್ಸ್ ಮಾರುಕಟ್ಟೆಯಲ್ಲಿಯೂ ಪ್ರತಿ 10 ಗ್ರಾಂ ಚಿನ್ನದ ದರ ₹1,51,985 ರಷ್ಟಿದೆ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅಮೆರಿಕನ್ ಡಾಲರ್ ಮೌಲ್ಯ ಇಳಿಕೆ ಹಾಗೂ ಕಚ್ಚಾ ತೈಲ ಬೆಲೆ ಕಡಿಮೆಯಾಗಿರುವುದು ಬಂಗಾರದ ಬೆಲೆ ಏರಿಕೆಗೆ ಪ್ರಮುಖ ಕಾರಣವಾಗಿದೆ.

ಪ್ರಮುಖ ನಗರಗಳ ರಿಟೇಲ್ ಚಿನ್ನದ ದರ (ಪ್ರತಿ 10 ಗ್ರಾಂಗೆ):

ಬೆಂಗಳೂರು: 24K: ₹1,49,890 | 22K: ₹1,37,400 | 18K: ₹1,12,420

ದೆಹಲಿ: 24K: ₹1,50,040 | 22K: ₹1,37,550 | 18K: ₹1,12,570

ಮುಂಬೈ/ಕೋಲ್ಕತ್ತಾ: 24K: ₹1,49,890 | 22K: ₹1,37,400 | 18K: ₹1,12,420

ಚೆನ್ನೈ: 24K: ₹1,50,000 | 22K: ₹1,37,500 | 18K: ₹1,15,650

ವಾರಾಂತ್ಯದಲ್ಲಿ ಬುಲಿಯನ್ ಮಾರುಕಟ್ಟೆಗೆ ರಜೆ ಇರುವುದರಿಂದ ಆಗಸ್ಟ್ 8 ಮತ್ತು 9 ರಂದು ಇದೇ ದರ ಮುಂದುವರಿಯಲಿದೆ.

Share

Leave a comment

Leave a Reply

Your email address will not be published. Required fields are marked *

Related Articles