Home ದಾವಣಗೆರೆ ಚಿನ್ನದ ಬೆಲೆಯಲ್ಲಿ ಭಾರಿ ಕುಸಿತ: ದೆಹಲಿ, ಮುಂಬೈ, ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳ ಇಂದಿನ ಚಿನ್ನದ ದರ ಪಟ್ಟಿ ಇಲ್ಲಿದೆ!
ದಾವಣಗೆರೆಬೆಂಗಳೂರುವಾಣಿಜ್ಯ

ಚಿನ್ನದ ಬೆಲೆಯಲ್ಲಿ ಭಾರಿ ಕುಸಿತ: ದೆಹಲಿ, ಮುಂಬೈ, ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳ ಇಂದಿನ ಚಿನ್ನದ ದರ ಪಟ್ಟಿ ಇಲ್ಲಿದೆ!

Share
ಚಿನ್ನ
Share

ಬೆಂಗಳೂರು: ಜಾಗತಿಕ ಮಾರುಕಟ್ಟೆಯಲ್ಲಿನ ಏರಿಳಿತ ಹಾಗೂ ಪಶ್ಚಿಮ ಏಷ್ಯಾದಲ್ಲಿನ ರಾಜಕೀಯ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ದೇಶೀಯ ಮಾರುಕಟ್ಟೆಯಲ್ಲಿ ಇಂದು ಚಿನ್ನದ ಬೆಲೆಯಲ್ಲಿ ಗಣನೀಯ ಕುಸಿತ ಕಂಡುಬಂದಿದೆ. ವಾರಾಂತ್ಯದ ಹಿನ್ನೆಲೆಯಲ್ಲಿ ಇಂದಿನ ದರಗಳೇ ಭಾನುವಾರದವರೆಗೂ ಮುಂದುವರಿಯಲಿವೆ ಎಂದು ಮಾರುಕಟ್ಟೆ ತಜ್ಞರು ತಿಳಿಸಿದ್ದಾರೆ.

ಆಲ್ ಇಂಡಿಯಾ ಸರಾಫಾ ಅಸೋಸಿಯೇಷನ್ ಮಾಹಿತಿ ಪ್ರಕಾರ, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ತೆರಿಗೆ ಒಳಗೊಂಡಂತೆ 10 ಗ್ರಾಂ ಅಪರಂಜಿ ಚಿನ್ನದ (24 ಕ್ಯಾರೆಟ್) ಬೆಲೆ 1,59,900 ರೂಪಾಯಿಗಳಿಗೆ ಇಳಿಕೆಯಾಗಿದೆ. ಇನ್ನು ಮಲ್ಟಿ ಕಮೋಡಿಟಿ ಎಕ್ಸ್ಚೇಂಜ್ (MCX) ಮಾರುಕಟ್ಟೆಯಲ್ಲೂ ಚಿನ್ನದ ಫ್ಯೂಚರ್ಸ್ ಶೇಕಡಾ 2.47 ರಷ್ಟು ಕುಸಿದು, 10 ಗ್ರಾಂಗೆ 1,55,600 ರೂಪಾಯಿ ತಲುಪಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲೂ ಸ್ಪಾಟ್ ಗೋಲ್ಡ್ ಬೆಲೆ ಪ್ರತಿ ಔನ್ಸ್‌ಗೆ 4,470.79 ಡಾಲರ್‌ಗೆ ಇಳಿಕೆಯಾಗಿದೆ.

ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳ ಇಂದಿನ ದರ ಪಟ್ಟಿ (10 ಗ್ರಾಂಗೆ):

ಬೆಂಗಳೂರು (Bengaluru):

24 ಕ್ಯಾರೆಟ್ – ₹1,55,730 | 22 ಕ್ಯಾರೆಟ್ – ₹1,42,750 | 18 ಕ್ಯಾರೆಟ್ – ₹1,16,800

ದೆಹಲಿ (Delhi):

24 ಕ್ಯಾರೆಟ್ – ₹1,55,880 | 22 ಕ್ಯಾರೆಟ್ – ₹1,42,900 | 18 ಕ್ಯಾರೆಟ್ – ₹1,16,950

ಮುಂಬೈ (Mumbai):

24 ಕ್ಯಾರೆಟ್ – ₹1,55,730 | 22 ಕ್ಯಾರೆಟ್ – ₹1,42,750 | 18 ಕ್ಯಾರೆಟ್ – ₹1,16,800

ಚೆನ್ನೈ (Chennai):

24 ಕ್ಯಾರೆಟ್ – ₹1,57,960 | 22 ಕ್ಯಾರೆಟ್ – ₹1,44,300 | 18 ಕ್ಯಾರೆಟ್ – ₹1,21,050

ಕೋಲ್ಕತಾ (Kolkata):

24 ಕ್ಯಾರೆಟ್ – ₹1,55,730 | 22 ಕ್ಯಾರೆಟ್ – ₹1,42,750 | 18 ಕ್ಯಾರೆಟ್ – ₹1,16,800

ಹೈದರಾಬಾದ್ (Hyderabad):

24 ಕ್ಯಾರೆಟ್ – ₹1,55,730 | 22 ಕ್ಯಾರೆಟ್ – ₹1,42,750 | 18 ಕ್ಯಾರೆಟ್ – ₹1,16,800

ಬೆಲೆ ಕುಸಿತಕ್ಕೆ ಕಾರಣವೇನು?

ಮಾರುಕಟ್ಟೆ ತಜ್ಞರ ಪ್ರಕಾರ, ಇರಾನ್ ಯುದ್ಧದ ಪರಿಣಾಮ ಹಾಗೂ ಜಾಗತಿಕ ಮಾರುಕಟ್ಟೆಯಲ್ಲಿ ಹೂಡಿಕೆದಾರರು ಎಚ್ಚರಿಕೆಯ ಹೆಜ್ಜೆ ಇಡುತ್ತಿರುವುದರಿಂದ ಚಿನ್ನದ ಬೆಲೆಗಳ ಮೇಲೆ ಒತ್ತಡ ಉಂಟಾಗಿದೆ. ಇದರೊಂದಿಗೆ ಯುಎಸ್ ಡಾಲರ್ ಇಂಡೆಕ್ಸ್ ಸ್ಥಿರವಾಗಿ ಕಾಯ್ದುಕೊಂಡಿರುವುದು ಕೂಡ ಹಳದಿ ಲೋಹದ ಬೆಲೆ ಇಳಿಕೆಗೆ ಪ್ರಮುಖ ಕಾರಣವಾಗಿದೆ.

Share

Leave a comment

Leave a Reply

Your email address will not be published. Required fields are marked *