Home ದಾವಣಗೆರೆ ಡೆಲ್ಲಿ ಸತ್ಯನಿಕೇತನ ಕಟ್ಟಡ ದುರಂತ: ಹೊಣೆಗಾರಿಕೆ ಇಲ್ಲವೇ? ಬಿಜೆಪಿ ವಿರುದ್ಧ ರಾಹುಲ್ ಗಾಂಧಿ ಕಿಡಿ
ದಾವಣಗೆರೆಕ್ರೈಂ ನ್ಯೂಸ್ನವದೆಹಲಿಬೆಂಗಳೂರು

ಡೆಲ್ಲಿ ಸತ್ಯನಿಕೇತನ ಕಟ್ಟಡ ದುರಂತ: ಹೊಣೆಗಾರಿಕೆ ಇಲ್ಲವೇ? ಬಿಜೆಪಿ ವಿರುದ್ಧ ರಾಹುಲ್ ಗಾಂಧಿ ಕಿಡಿ

Share
ರಾಹುಲ್ ಗಾಂಧಿ
Share

ನವದೆಹಲಿಯ ಸೌತ್ ಕ್ಯಾಂಪಸ್ ಬಳಿಯ ಸತ್ಯನಿಕೇತನ  ಪ್ರದೇಶದಲ್ಲಿ ಸಂಭವಿಸಿದ ಭೀಕರ ಬಹುಮಹಡಿಯ ಪಿಜಿ (PG) ಕಟ್ಟಡ ಕುಸಿತದ ದುರಂತವು ಇಡೀ ದೇಶವನ್ನು ಬೆಚ್ಚಿಬೀಳಿಸಿದೆ. ತ್ರಿಬಲ್ ಇಂಜಿನ್ ಸರ್ಕಾರ ಹೊಂದಿರುವ ಬಿಜೆಪಿಗೆ ಹೊಣೆಗಾರಿಕೆ ಇಲ್ಲವೇ ಎಂದು ವಿಪಕ್ಷ ನಾಯಕ ರಾಹುಲ್ ಗಾಂಧಿ ಕಿಡಿಕಾರಿದ್ದಾರೆ. 

ವಿದ್ಯಾರ್ಥಿಗಳು ವಾಸಿಸುತ್ತಿದ್ದ ಈ ಐದು ಮಹಡಿಯ ಕಟ್ಟಡ ಹಠಾತ್ತನೆ ಕುಸಿದುಬಿದ್ದ ಪರಿಣಾಮ 7 ಜನರು ಸಾವನ್ನಪ್ಪ ಹಲವರು ಗಾಯಗೊಂಡಿದ್ದಾರೆ. ಈ ದುರ್ಘಟನೆ ರಾಜಕೀಯ ವಲಯದಲ್ಲೂ ತೀವ್ರ ಕೋಲಾಹಲ ಸೃಷ್ಟಿಸಿದೆ.

ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಕೇಂದ್ರ ಸರ್ಕಾರದ ವಿರುದ್ಧ ತೀವ್ರವಾಗಿ ವಾಗ್ದಾಳಿ ನಡೆಸಿದ್ದಾರೆ.

ದೆಹಲಿಯಲ್ಲಿ “ತ್ರಿಪಲ್-ಇಂಜಿನ್” ಸರ್ಕಾರವಿದ್ದರೂ ಇಂತಹ ಅನಾಹುತಗಳು ತಪ್ಪುತ್ತಿಲ್ಲೇಕೆ ಎಂದು ಪ್ರಶ್ನಿಸಿರುವ ಅವರು, ಸರ್ಕಾರದ ಕಡೆಯಿಂದ ಯಾವುದೇ ಮುನ್ನೆಚ್ಚರಿಕೆ ಕ್ರಮಗಳಿಲ್ಲದೆ ಕೇವಲ ಮೈಮರೆವು ಪ್ರದರ್ಶಿಸಲಾಗುತ್ತಿದೆ ಎಂದು ಕಿಡಿಕಾರಿದ್ದಾರೆ.

ಅಪಘಾತಗಳು ಸಂಭವಿಸಿದ ನಂತರ ಗಿಮಿಕ್ ಮಾಡುವುದು ಮತ್ತು ಕೇವಲ ಕೆಳಹಂತದ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಿ ತಪ್ಪಿಸಿಕೊಳ್ಳುವುದು ಸರ್ಕಾರದ ಚಾಳಿಯಾಗಿದೆ ಎಂದು ಟೀಕಿಸಿದ್ದಾರೆ.

ಮತ್ತೊಂದೆಡೆ, ದೆಹಲಿ ಹೈಕೋರ್ಟ್ ಈ ದುರ್ಘಟನೆ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸಿದ್ದು, ರಾಜಧಾನಿಯಲ್ಲಿರುವ ಎಲ್ಲಾ ಪಿಜಿ ಹಾಸ್ಟೆಲ್‌ಗಳನ್ನು ಪರಿಶೀಲಿಸುವಂತೆ ಮುನ್ಸಿಪಲ್ ಕಾರ್ಪೊರೇಷನ್ ಆಫ್ ದಿಲ್ಲಿಗೆ  ಕಟ್ಟುನಿಟ್ಟಿನ ಸೂಚನೆ ನೀಡಿದೆ.

ಕಟ್ಟಡದ ಮಾಲೀಕರ ನಿರ್ಲಕ್ಷ್ಯ ಹಾಗೂ ನಿಯಮಬಾಹಿರ ಬೇಸ್‌ಮೆಂಟ್ ನವೀಕರಣವೇ ಈ ದುರಂತಕ್ಕೆ ಪ್ರಮುಖ ಕಾರಣ ಎಂದು ಶಂಕಿಸಲಾಗಿದೆ.

Share

Leave a comment

Leave a Reply

Your email address will not be published. Required fields are marked *

Recent Posts

Recent Comments

No comments to show.
Related Articles