ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಜಿಎಂಐಟಿಯಲ್ಲಿ 6 ಪಿಹೆಚ್ ಡಿ ಪದವೀಧರರಿಗೆ ಡಾಕ್ಟರೇಟ್, 1061 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ

On: November 24, 2024 1:06 PM
Follow Us:
---Advertisement---

SUDDIKSHANA KANNADA NEWS/ DAVANAGERE/ DATE:24-11-2024

ದಾವಣಗೆರೆ: ನಗರದ ಪ್ರತಿಷ್ಠಿತ ಜಿ.ಎಂ. ತಾಂತ್ರಿಕ ಮಹಾವಿದ್ಯಾಲಯದ ಜಿಎಂ ಹಾಲಮ್ಮ ಸಭಾಂಗಣದಲ್ಲಿ19 ಮತ್ತು 20ನೇ ಪದವಿ ಪ್ರದಾನ ಸಮಾರಂಭದಲ್ಲಿ 2022-23 ಹಾಗೂ 2023-24ನೇ ಸಾಲಿನ ಸೇರಿ ಒಟ್ಟು 1061 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮತ್ತು ಪಿಹೆಚ್ ಡಿಯಿಂದ 6 ವಿದ್ಯಾರ್ಥಿಗಳಿಗೆ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಯಿತು.

19ನೇ ಪದವಿ ಪ್ರದಾನ:

ಪಿಹೆಚ್ ಡಿಯಿಂದ ನಾಲ್ವರು ವಿದ್ಯಾರ್ಥಿಗಳಿಗೆ ಡಾಕ್ಟರೇಟ್ ಪದವಿ ಹಾಗೂ ಕಂಪ್ಯೂಟರ್ ಸೈನ್ಸ್ ಅಂಡ್ ಇಂಜಿನಿಯರಿಂಗ್, ಇನ್ಫರ್ಮೇಷನ್ ಸೈನ್ಸ್ ಅಂಡ್ ಇಂಜಿನಿಯರಿಂಗ್, ಎಲೆಕ್ಟ್ರಾನಿಕ್ ಅಂಡ್ ಕಮ್ಯುನಿಕೇಶನ್ ಇಂಜಿನಿಯರಿಂಗ್, ಬಯೋಟೆಕ್ನಾಲಜಿ, ಸಿವಿಲ್ ಇಂಜಿನಿಯರಿಂಗ್, ಮೆಕ್ಯಾನಿಕಲ್ ಇಂಜಿನಿಯರಿಂಗ್, ಎಂಬಿಎ ಸೇರಿದಂತೆ ಈ 7 ವಿಭಾಗಗಳಿಂದ 2022-23ನೇ ಸಾಲಿನ ಒಟ್ಟು 495 ವಿದ್ಯಾರ್ಥಿಗಳಿಗೆ ಜಿಎಂ ವಿಶ್ವವಿದ್ಯಾಲಯದ ಕುಲಪತಿಗಳಾದ ಎಸ್.ಆರ್. ಶಂಕಪಾಲ್ ಪದವಿ ಪ್ರದಾನ ಮಾಡಿದರು.

ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ಸಸ್ಯ ಸಂಕುಲಗಳ ನರ್ಸರಿಯಲ್ಲಿ ಸುಂದರ ಹೂವುಗಳು, ಹೂವಿನ ಸಸ್ಯಗಳ ಪಾಲನೆ, ಪೋಷಣೆ ಮತ್ತು ರಕ್ಷಣೆಯನ್ನೂ ಮಾಡುವುದು ಕಾಣಲಾಗುತ್ತದೆ. ಹೀಗೆ ಬೆಳೆದ ವಿವಿಧ ಬಗೆಯ ಸಸ್ಯಗಳು ಹೂವು ಮತ್ತು ಹಣ್ಣುಗಳನ್ನು ಪ್ರತಿಫಲವಾಗಿ ನೀಡುತ್ತವೆ. ಅಂತೆಯೇ ಕಾಲೇಜು ನರ್ಸರಿಯಂತೆ ಅಲ್ಲಿನ ಸಸ್ಯಗಳೇ ವಿದ್ಯಾರ್ಥಿಗಳು. ಅಧ್ಯಾಪಕರು, ತಂದೆ ತಾಯಿಯರು ನಿಮಗೆ ಪಾಲನೆ, ಪೋಷಣೆ ಜವಾಬ್ದಾರಿ ಹೊತ್ತ ತೋಟಗಾರರಂತೆ. ಜ್ಞಾನ ಪಡೆದು ಉಜ್ವಲ ಭವಿಷ್ಯ ರೂಪಿಸಿಕೊಳ್ಳಲು ನಿಮಗೆ ಎಲ್ಲ ತರಹ ಪೂರಕ ಸವಲತ್ತುಗಳ ನೀಡಲಾಗಿರುತ್ತದೆ ಎಂದು ತಿಳಿಸಿದರು.

ಕಾಲೇಜು, ಉದ್ಯೋಗ, ವೈವಾಹಿಕ ಬದುಕು ಹೀಗೆ ಜೀವನದ ಪ್ರತಿಯೊಂದು ಹಂತದಲ್ಲೂ ಸಣ್ಣ ಪುಟ್ಟ ಸಮಸ್ಯೆ, ಸವಾಲುಗಳು ಎದುರಾಗುವುದು ಸಹಜ. ಹಾಗಾಗಿ ನೀವು ವಿದ್ಯಾರ್ಥಿ ಹಂತದಲ್ಲಿ ಬರುವ ಸವಾಲು, ಸಮಸ್ಯೆಗಳ ಮೀರಿ ಜ್ಞಾನ ಮತ್ತು ಕೌಶಲ್ಯವನ್ನು ಪಡೆದು ಉಜ್ವಲ ಭವಿಷ್ಯ ನಿಮ್ಮದಾಗಿಸಿಕೊಳ್ಳಬೇಕು ಎಂಬುದಾಗಿ ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು.

ಇದಲ್ಲದೆ, ಅತ್ತ್ಯುತ್ತಮ ವಿದ್ಯಾರ್ಥಿ ಉಜ್ವಲ ಬದುಕಿಗೆ ಶಿಕ್ಷಕರೋರ್ವರು ಹೇಳಿಕೊಟ್ಟ ವಿದ್ಯೆ, ಮಕ್ಕಳ ಭವಿಷ್ಯದ ಬಗ್ಗೆ ಪೋಷಕರ ಕರ್ತವ್ಯ, ಕನಸ್ಸು ಹಾಗೂ ತಮ್ಮ ಉಜ್ವಲ ಭವಿಷ್ಯ ಕಟ್ಟಿಕೊಳ್ಳುವುದು ವಿದ್ಯಾರ್ಥಿಗಳ ಕೈಯಲಿದೆ ಎಂಬುದನ್ನು ಉದಾಹರಣೆ ಸಹಿತ ಮನವರಿಕೆ ಮಾಡಿದರಲ್ಲದೆ, ಬಡತನವನ್ನು ತೊಡೆದುಹಾಕಲು, ಗುಣಮಟ್ಟದ ಉದ್ಯೋಗಗಳನ್ನು ಸೃಷ್ಟಿಸಲು ಮತ್ತು ದೇಶದಲ್ಲಿ ಆಧುನಿಕ ಸೌಲಭ್ಯಗಳನ್ನು ಸೃಷ್ಟಿಸುವ ವಿಕಸಿತ ಭಾರತದ ನಿರ್ಮಾತೃ ನೀವಾಗಿ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಶ್ರೀಶೈಲ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಜಿ.ಎಂ. ಪ್ರಸನ್ನ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಜಿ.ಎಂ. ತಾಂತ್ರಿಕ ಮಹಾವಿದ್ಯಾಲಯದ ಎಂಬಿಎ ವಿಭಾಗದ ನಿರ್ದೇಶಕ ಡಾ. ಬಿ. ಬಕ್ಕಪ್ಪ, ಜಿ.ಎಂ. ತಾಂತ್ರಿಕ ಮಹಾವಿದ್ಯಾಲಯದ ಆಡಳಿತ ಮಂಡಳಿ ಸದಸ್ಯ ಡಾ. ಕೆ. ದಿವ್ಯಾನಂದ, ಕುಲಸಚಿವ ಡಾ. ಬಿ.ಎಸ್. ಸುನಿಲ್ ಕುಮಾರ್, ಪ್ರಾಂಶುಪಾಲರಾದ ಡಾ. ಎಂ.ಬಿ. ಸಂಜಯ್ ಪಾಂಡೆ ಉಪಸ್ಥಿತರಿದ್ದರು. ಎಲೆಕ್ಟ್ರಾನಿಕ್ ಅಂಡ್ ಕಮ್ಯುನಿಕೇಶನ್ ಇಂಜಿನಿಯರಿಂಗ್ ವಿಭಾಗದ ಪ್ರೊಫೇಸರ್ ಜೆ. ಪ್ರವೀಣ್ ಸ್ವಾಗತಿಸಿದರು.

20ನೇ ಪದವಿ ಪ್ರದಾನ : ಪಿಹೆಚ್ ಡಿಯಿಂದ ಇಬ್ಬರು ವಿದ್ಯಾರ್ಥಿಗಳಿಗೆ ಡಾಕ್ಟರೇಟ್ ಪದವಿ ಹಾಗೂ ಕಂಪ್ಯೂಟರ್ ಸೈನ್ಸ್ ಅಂಡ್ ಇಂಜಿನಿಯರಿಂಗ್, ಇನ್ಫರ್ಮೇಷನ್ ಸೈನ್ಸ್ ಅಂಡ್ ಇಂಜಿನಿಯರಿಂಗ್, ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಅಂಡ್ ಮಿಷನ್ ಲರ್ನಿಂಗ್, ಎಲೆಕ್ಟ್ರಾನಿಕ್ ಅಂಡ್ ಕಮ್ಯುನಿಕೇಶನ್ ಇಂಜಿನಿಯರಿಂಗ್, ಬಯೋಟೆಕ್ನಾಲಜಿ, ಸಿವಿಲ್ ಇಂಜಿನಿಯರಿಂಗ್, ಮೆಕ್ಯಾನಿಕಲ್ ಇಂಜಿನಿಯರಿಂಗ್, ಎಂಬಿಎ ಸೇರಿದಂತೆ ಈ 8 ವಿಭಾಗಗಳಿಂದ 2023-24ನೇ ಸಾಲಿನ ಒಟ್ಟು 566 ವಿದ್ಯಾರ್ಥಿಗಳಿಗೆ ಜಿಎಂ ವಿಶ್ವವಿದ್ಯಾಲಯದ ಸಹ ಕುಲಪತಿಗಳಾದ ಡಾ. ಎಚ್.ಡಿ. ಮಹೇಶಪ್ಪ ಪದವಿ ಪ್ರದಾನ ಮಾಡಿದರು.

ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ, ಪದವಿ ಪಡೆಯುವ ತನಕ ಜೀವನದ ಪ್ರಯತ್ನದ ಒಂದು ಘಟ್ಟವಾದರೆ ಪಡೆದ ನಂತರ ಮಹತ್ವದ ಜವಾಬ್ದಾರಿ ನಿಮ್ಮ ಮೇಲಿರಲಿದ್ದು, ಓದ್ಯೋಗ ಕ್ಷೇತ್ರ ಮತ್ತು ಸಮಾಜದ ಉದ್ದಾರಕಾರು ನೀವಾಗಬೇಕು. ಈ ಎರಡು ಕ್ಷೇತ್ರಗಳ ಅಗತ್ಯತೆಗಳು, ಬೇಡಿಕೆಗಳ ಬಗ್ಗೆ ಅರಿವು ನಿಮ್ಮಲ್ಲಿರಬೇಕು ಎಂದು ವಿದ್ಯಾರ್ಥಿಗಳಿಗೆ ಹೇಳಿದರು.

ನಿಮ್ಮ ಮುಂದಿನ ಓದ್ಯೋಗ ಮತ್ತು ಸಾಮಾಜಿಕ ಬೆಳವಣಿಗೆಯಲ್ಲಿ ಜಿಎಂ ತಾಂತ್ರಿಕ ಮಹಾವಿದ್ಯಾಲಯದ ಪಾತ್ರವೂ ಇದ್ದು, ಅದಕ್ಕೆ ಕೀರ್ತಿ ಸಿಗಬೇಕಾದರೆ ನಿಮ್ಮ ಮುಂದಿನ ಭವಿಷ್ಯ ಬೆಳವಣಿಗೆ ಮೇಲೆ ನಿಂತಿದೆ. ಈ ವಿದ್ಯಾಲಯದಲ್ಲಿನ ಕಲಿಕೆ ನಿಮಗೆ ಭವ್ಯ ಭವಿಷ್ಯಕ್ಕೆ ಮಾರ್ಗದರ್ಶನವಾಗಿದ್ದು, ಇಲ್ಲಿ ಕಲಿಸಿದ ಉತ್ತಮ ಜ್ಞಾನ ಮತ್ತು ಕೌಶಲ್ಯವನ್ನು ಓದ್ಯೋಗ ಮತ್ತು ಸಾಮಾಜಿಕ ಕ್ಷೇತ್ರಗಳ ಅಭಿವೃದ್ಧಿಗೆ ಕೊಡುಗೆ ನೀಡುವಂತಾಗಬೇಕು. ಇದು ನಿಮ್ಮ ಉಜ್ವಲ ಭವಿಷ್ಯ ಬೆಳವಣಿಗೆಗೆ ದಾರಿಯಾಗಲಿದೆ ಎಂದು ಹಿತನುಡಿದರು.

ಕಾರ್ಯಕ್ರಮದಲ್ಲಿ ಜಿಎಂ ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ಜಿ.ಎಂ. ಲಿಂಗರಾಜು ಅಧ್ಯಕ್ಷತೆ ವಹಿಸಿದ್ದರು. ಕುಲಸಚಿವರಾದ ಡಾ. ಬಿ.ಎಸ್. ಸುನಿಲ್ ಕುಮಾರ್, ಜಿ.ಎಂ. ತಾಂತ್ರಿಕ ಮಹಾವಿದ್ಯಾಲಯದ ಎಂಬಿಎ ವಿಭಾಗದ ನಿರ್ದೇಶಕರಾದ ಡಾ. ಬಿ. ಬಕ್ಕಪ್ಪ, ಆಡಳಿತ ಮಂಡಳಿ ಸದಸ್ಯರಾದ ಡಾ. ಕೆ. ದಿವ್ಯಾನಂದ, ಪ್ರಾಂಶುಪಾಲರಾದ ಡಾ. ಎಂ.ಬಿ. ಸಂಜಯ್ ಪಾಂಡೆ ಸೇರಿದಂತೆ ಇತರರು ಉಪಸ್ಥಿತರಿದ್ದರು. ಗಣಿತಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಕೆ.ಎಸ್. ಓಂಕಾರಪ್ಪ ಸ್ವಾಗತಿಸಿದರು.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment