ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಜಿಎಂ ವಿವಿಯಲ್ಲಿ ಐಪಿಎಲ್ ಮಾದರಿಯ ಜಿಎಂ ಲೀಗ್‌ ಕ್ರೀಡೆ: ಫೆಬ್ರವರಿ 4ರಿಂದ ಕ್ರಿಕೆಟ್‌ ಸೇರಿ ವಿವಿಧ ಕ್ರೀಡೆಗಳ ಪಂದ್ಯಾವಳಿಯ ಹಬ್ಬ ಶುರು!

On: January 27, 2025 9:18 PM
Follow Us:
---Advertisement---

SUDDIKSHANA KANNADA NEWS/ DAVANAGERE/ DATE:27-01-2025

ದಾವಣಗೆರೆ : ಭಾರತದಲ್ಲಿನ ಟಿ -20 ಕ್ರಿಕೆಟ್ ಪಂದ್ಯಾವಳಿಗಳ ಒಂದು ವೃತ್ತಿಪರ ಲೀಗ್ ಆದ ಐಪಿಎಲ್ (ಇಂಡಿಯನ್ ಪ್ರೀಮಿಯರ್ ಲೀಗ್( ಕ್ರಿಕೆಟ್‌ ಪ್ರೇಮಿಗಳ ಮನತಣಿಸುತ್ತಾ ಬಂದಿದೆ.

ಅದರಂತೆ ಈ ಐಪಿಎಲ್ ಮಾದರಿಯಲ್ಲಿ ಕ್ರಿಕೆಟ್‌ ಪಂದ್ಯಾವಳಿ ಅಷ್ಟೇ ಅಲ್ಲದೇ ವಿವಿಧ ಕ್ರೀಡೆಗಳಲ್ಲಿಯೂ ಐಪಿಎಲ್ ಮಾದರಿಯಲ್ಲಿ ಪಂದ್ಯಾವಳಿ ಆಯೋಜಿಸುವ ಮೂಲಕ ದಾವಣಗೆರೆಯ ಜಿಎಂ ವಿಶ್ವವಿದ್ಯಾಲಯವು ಹೊಸ ಇತಿಹಾಸ ಸೃಷ್ಟಿಸಲು ಮೊದಲ ಹೆಜ್ಜೆ ಇಟ್ಟಿದೆ.

ದಿವಂಗತ ಜಿ. ಮಲ್ಲಿಕಾರ್ಜುನಪ್ಪ ಅವರ ಹೆಸರಿನಡಿ ಅಂದರೆ ಜಿಎಂ ಲೀಗ್‌ ಎಂಬುದಾಗಿ ಕ್ರಿಕೆಟ್‌ ಸೇರಿದಂತೆ ವಿವಿಧ ಕ್ರೀಡಾ ಪಂದ್ಯಾವಳಿಗಳನ್ನು ಇದೇ ಪ್ರಥಮ ಬಾರಿಗೆ ಐಪಿಎಲ್ ಮಾದರಿಯಲ್ಲಿ ಆಯೋಜಿಸುತ್ತಿದ್ದು, ಹೊಸ ಪ್ರಯತ್ನ ಇದಾಗಿದೆ.

ಬರುವ ಫೆಬ್ರವರಿ 4 ರಿಂದ 15ರವರೆಗೆ ಜಿಎಂ ವಿಶ್ವವಿದ್ಯಾಲಯದ ಆವರಣದಲ್ಲಿ ಜಿಎಂ ಲೀಗ್‌ ಕ್ರೀಡಾ ಹಬ್ಬ ನಡೆಯಲಿದ್ದು, 11 ದಿನಗಳ ಕಾಲ ಕ್ರಿಕೆಟ್‌, ವಾಲಿಬಾಲ್‌, ಖೋ ಖೋ, ಥ್ರೋ ಬಾಲ್‌ ಪಂದ್ಯಾವಳಿಗಳನ್ನು ನಡೆಸಲಾಗುತ್ತಿದೆ. ಕ್ರಿಕೆಟ್‌ ಜೊತೆಗೆ ಕ್ರೀಡೆಯ ರಸದೌತಣ ನೀಡಲು ಜಿಎಂಯು ಸಜ್ಜುಗೊಳ್ಳುತ್ತಿದೆ.

ವಿದ್ಯಾರ್ಥಿಗಳ ಭವ್ಯ ಭವಿಷ್ಯದ ಸರ್ವತೋಮುಖ ಬೆಳವಣಿಗೆಗೆ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳು ಬಹುಮುಖ್ಯವಾಗಿದ್ದು, ಈ ನಿಟ್ಟಿನಲ್ಲಿ ಜಿಎಂ ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ಜಿ.ಎಂ. ಲಿಂಗರಾಜು ಅವರು ತಮ್ಮ ತಂದೆಯವರಾದ ಜಿ. ಮಲ್ಲಿಕಾರ್ಜುನಪ್ಪ ಅವರ ಕನಸಿನಂತೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಹಾಗೂ ಉನ್ನತ ಶಿಕ್ಷಣ ನೀಡುವ ಜೊತೆಗೆ ಅವರ ಹೆಸರಿನಲ್ಲಿ ಜಿಎಂ ಲೀಗ್‌ ಕ್ರೀಡಾ ಪಂದ್ಯಾವಳಿಗಳ ಮೂಲಕ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳನ್ನು ಕ್ರೀಡೆಯಲ್ಲಿ ಪ್ರೋತ್ಸಾಹಿಸಲಾಗುತ್ತಿದೆ.

ಕುಲಾಧಿಪತಿಗಳಾದ ಜಿ.ಎಂ. ಲಿಂಗರಾಜು, ಕುಲಪತಿಗಳಾದ ಡಾ. ಎಸ್.ಆರ್.‌ ಶಂಕಪಾಲ್‌ ಅವರುಗಳು ಈ ಲೀಗ್‌ ನ ರುವಾರಿಗಳಾಗಿದ್ದು, ಇವರುಗಳ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳ ವ್ಯವಹಾರಗಳ ನಿರ್ದೇಶನಾಲಯ ಹಾಗೂ ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಭಾಗವು ಈ ಲೀಗ್‌ ನ ನಡೆಸುತ್ತಿದ್ದು, ವಿದ್ಯಾರ್ಥಿಗಳ ವ್ಯವಹಾರಗಳ ನಿರ್ದೇಶನಾಲಯದ ನಿರ್ದೇಶಕರಾದ ಡಾ. ಹೆಚ್.ಎಸ್.‌ ಕಿರಣ್‌ ಕುಮಾರ್‌ ಹಾಗೂ ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಭಾಗದ ನಿರ್ದೇಶಕರಾದ ಜಿ.ಬಿ. ಅಜ್ಜಯ್ಯ ಲೀಗ್‌ ನ ಜವಾಬ್ದಾರಿ ಹೊತ್ತಿದ್ದಾರೆ. ಮೊದಲ ಹೆಜ್ಜೆಯಲ್ಲೇ ಯಶಸ್ಸು ಕಾಣಲು ಆಟಗಾರರ ಆಯ್ಕೆ ಸೇರಿದಂತೆ ಲೀಗ್‌ ನ ತಯಾರಿಯ ಪ್ರತಿ ಹಂತದಲ್ಲೂ ಸಜ್ಜುಗೊಂಡಿದ್ದಾರೆ.

ಲೀಗ್‌ ಬಗ್ಗೆ ಕುಲಪತಿಗಳ ಮನದಾಳ : ಈ ಲೀಗ್‌ ಮೂಲಕ ವಿದ್ಯಾರ್ಥಿಗಳನ್ನು ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಯಲ್ಲಿ ಒಂದಾದ ಕ್ರೀಡೆಯಲ್ಲೂ ತೊಡಗಿಸುವುದರೊಂದಿಗೆ ಪ್ರತಿಭೆ ಪ್ರದರ್ಶಿಸಿ, ಈ ಕ್ಷೇತ್ರದಲ್ಲೂ ಸಾಧನೆ ಮಾಡುವಂತಾಗಬೇಕು. ಜೊತೆಗೆ ತಂಡದ ನಾಯಕತ್ವ ಬೆಳವಣಿಗೆ, ಕ್ರೀಡೆಯಲ್ಲಿ ಹಣ ಹೂಡಿಕೆಯ ಜ್ಞಾನ ವೃದ್ಧಿಸಲಿ ಎಂಬುದೇ ಐಪಿಎಲ್ ಮಾದರಿಯ ಜಿಎಂ ಲೀಗ್‌ ನ ಉದ್ದೇಶವಾಗಿದೆ ಎನ್ನುತ್ತಾರೆ ಕುಲಪತಿಗಳಾದ ಡಾ. ಎಸ್.ಆರ್.‌ ಶಂಕಪಾಲ್‌.

ಫ್ರ್ಯಾಂಚೈಸ್‌ ಗಳು ಇವರೇ:

ಹರಾಜು ಪ್ರಕ್ರಿಯೆ ನಡೆಸಿ ಫ್ರ್ಯಾಂಚೈಸ್ ಗಳ ಮೂಲಕ ಆಟಗಾರರ ಆಯ್ಕೆಯಾಗಿದ್ದು, ಜಿಎಂ ವಿಶ್ವವಿದ್ಯಾಲಯದ ಸಹ ಕುಲಪತಿಗಳಾದ ಡಾ. ಹೆಚ್.ಡಿ. ಮಹೇಶಪ್ಪ, ಜಿಎಂಐಟಿ ಪ್ರಾಂಶುಪಾಲರಾದ ಡಾ. ಸಂಜಯ್‌ ಪಾಂಡೆ ಎಂ.ಬಿ., ಜಿಎಂ ಫಾರ್ಮಸಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಗಿರೀಶ್ ಬೋಳಕಟ್ಟಿ, ಮುಖ್ಯ ಹಣಕಾಸು ಅಧಿಕಾರಿಗಳು ಸೇರಿದಂತೆ ವಿವಿಧ ವಿಭಾಗಗಳ ಮುಖ್ಯಸ್ಥರು, ನಿರ್ದೇಶಕರು, ಡೀನ್‌ ಗಳೇ ಕ್ರಿಕೆಟ್‌ ಸೇರಿದಂತೆ ವಿವಿಧ ಕ್ರೀಡೆಗಳ ಫ್ರ್ಯಾಂಚೈಸ್‌ ಗಳಾಗಿದ್ದಾರೆ. ಜನವರಿ ೨೦ರಿಂದ ೨೩ರವರೆಗೆ ಹರಾಜಿನ ಮೂಲಕ ಜಿಲ್ಲೆ, ತಾಲ್ಲೂಕು, ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಅನುಭವ ಹೊಂದಿರುವ ಆಟಗಾರರ ಒಳಗೊಂಡಂತೆ ಆಯ್ಕೆ ಮಾಡಲಾಯಿತು.

ತಂಡಗಳಿಷ್ಟು:

ಕ್ರಿಕೆಟ್‌ ಪಂದ್ಯಾವಳಿಯಲ್ಲಿ ಒಟ್ಟು 9 ತಂಡಗಳಿದ್ದು, ಪ್ರತಿ ತಂಡದಲ್ಲಿ ೨೦ ಆಟಗಾರರಿದ್ದಾರೆ. ವಾಲಿಬಾಲ್‌ ನಲ್ಲಿ ಒಟ್ಟು 8 ತಂಡಗಳಿದ್ದು, ಪ್ರತಿ ತಂಡದಲ್ಲಿ10 ಆಟಗಾರರು ಇರುತ್ತಾರೆ. ಖೋ ಖೋ ಪುರುಷರ ವಿಭಾಗ ಮತ್ತು ಮಹಿಳಾ ವಿಭಾಗದಲ್ಲಿ ತಲಾ 4 ತಂಡಗಳಿದ್ದು, ಈ ಎರಡು ವಿಭಾಗಗಳ ಪ್ರತಿ ತಂಡಗಳಲ್ಲಿ 12 ಆಟಗಾರರು ಇದ್ದಾರೆ. ಥ್ರೋಬಾಲ್‌ ನ ಮಹಿಳಾ ವಿಭಾಗದಲ್ಲಿ 6 ತಂಡಗಳಿದ್ದು, ಪ್ರತಿ ತಂಡದಲ್ಲೂ 8 ಆಟಗಾರರು ಇದ್ದಾರೆ. ಈ ಲೀಗ್‌ ನಲ್ಲಿ ಹೊರಗಿನ ಇತರೆ ಕಾಲೇಜುಗಳ ವಿದ್ಯಾರ್ಥಿಗಳಿಗೂ ಭಾಗವಹಿಸಲು ಅವಕಾಶ ನೀಡಲಾಗಿದೆ.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

ಮಿಸ್ ಮಾಡ್ದೆ ಓದಿ

ಯುವತಿ

ದುರ್ಗಾಪುರ ಯುವತಿ ಮೇಲೆ ಅ*ತ್ಯಾಚಾರಕ್ಕೆ ಸಾಥ್ ಕೊಟ್ಟಿದ್ದ ಸಹಪಾಠಿ ಸೆರೆ: ಬಂಧಿತರ ಸಂಖ್ಯೆ 6ಕ್ಕೇರಿಕೆ, ಸ್ಫೋಟಕ ಮಾಹಿತಿ ಬಯಲಿಗೆ!

ಚನ್ನಗಿರಿ

ಚನ್ನಗಿರಿ ಪಟ್ಟಣ ಸಮೀಪದ ಜೆ. ಹೆಚ್. ಪಟೇಲ್ ನಗರದಲ್ಲಿ ರಾತ್ರಿ ವೇಳೆ ಎಸ್ಪಿ ಭೇಟಿ: ಮನೆ ಗೋಡೆ ಮೇಲೆ ಉಮಾ ಪ್ರಶಾಂತ್ ಸ್ಟಿಕ್ಕರ್ ಅಂಟಿಸಿದ್ಯಾಕೆ?

ಧರ್ಮಸ್ಥಳ

ಕಾಂಗ್ರೆಸ್ ಜೊತೆ ಶಾಮೀಲಾಗಿಲ್ಲವಾದರೆ ಬಿಜೆಪಿ ಕಚೇರಿಗೆ ಬಂದು ಧರ್ಮಸ್ಥಳದ ಮಂಜುನಾಥ ಸ್ವಾಮಿ ಮೇಲೆ ಆಣೆ ಮಾಡಿ: ಕೃಷ್ಣಮೂರ್ತಿ ಪವಾರ್ ಪಂಥಾಹ್ವಾನ

ವ್ಯಾಪಾರಿ

ಬೀದಿ ಬದಿ ವ್ಯಾಪಾರಿಗಳಿಗೆ ಗುಡ್ ನ್ಯೂಸ್: ಆತ್ಮ ನಿರ್ಭರ್ ಯೋಜನೆಯಡಿ ವಿವಿಧ ಸಾಲ ಸೌಲಭ್ಯಕ್ಕೆ ಅರ್ಜಿ ಆಹ್ವಾನ

ವಿದ್ಯಾರ್ಥಿ

ಇಂಜಿನಿಯರಿಂಗ್ ಮತ್ತು ತಾಂತ್ರಿಕ ಕೋರ್ಸ್ ವಿದ್ಯಾರ್ಥಿಗಳಿಗೆ ಮಹತ್ವದ ಮಾಹಿತಿ: ಕೃತಕ ಬುದ್ದಿಮತ್ತೆ ಭವಿಷ್ಯದ ಕಾರ್ಯಪಡೆ ಕಾರ್ಯಾಗಾರ

ತ್ಯಾಜ್ಯ

ನರಕ ಚರ್ತುದರ್ಶಿಯಂದು ಕಸ ಹೊರಗೆ ಎಸೆಯಬೇಡಿ, ಪ್ರತ್ಯೇಕವಾಗಿ ತ್ಯಾಜ್ಯ ಸಂಗ್ರಹಣಾ ವಾಹನಗಳಿಗೆ ನೀಡಿ

Leave a Comment