Home ದಾವಣಗೆರೆ ಜಿ.ಎಂ. ವಿಶ್ವವಿದ್ಯಾಲಯದಲ್ಲಿ ‘ಸ್ಮಾರ್ಟ್ CCTV ಸರ್ವೈಲೆನ್ಸ್ ಸಿಸ್ಟಮ್ಸ್’ ಮೈಕ್ರೋ-ಕ್ರೆಡೆನ್ಷಿಯಲ್ ಕೋರ್ಸ್: CCTV ಅಳವಡಿಕೆ, ನೆಟ್‌ವರ್ಕಿಂಗ್, ನಿರ್ವಹಣೆ ಹಾಗೂ ಉದ್ಯಮಶೀಲತಾ ತರಬೇತಿ
ದಾವಣಗೆರೆಉದ್ಯೋಗ ವಾರ್ತೆನವದೆಹಲಿಬೆಂಗಳೂರು

ಜಿ.ಎಂ. ವಿಶ್ವವಿದ್ಯಾಲಯದಲ್ಲಿ ‘ಸ್ಮಾರ್ಟ್ CCTV ಸರ್ವೈಲೆನ್ಸ್ ಸಿಸ್ಟಮ್ಸ್’ ಮೈಕ್ರೋ-ಕ್ರೆಡೆನ್ಷಿಯಲ್ ಕೋರ್ಸ್: CCTV ಅಳವಡಿಕೆ, ನೆಟ್‌ವರ್ಕಿಂಗ್, ನಿರ್ವಹಣೆ ಹಾಗೂ ಉದ್ಯಮಶೀಲತಾ ತರಬೇತಿ

Share
ವಿಶ್ವವಿದ್ಯಾಲಯ
Share

ದಾವಣಗೆರೆ: ನಗರದ ಜಿ.ಎಂ. ವಿಶ್ವವಿದ್ಯಾಲಯದ ಯಾಂತ್ರಿಕ ಇಂಜಿನಿಯರಿಂಗ್ ವಿಭಾಗದ ವತಿಯಿಂದ, GMSIR LLP ಮತ್ತು IDEA LAB ಸಹಯೋಗದಲ್ಲಿ, ‘Smart CCTV Surveillance Systems’ ವಿಷಯದ ಕುರಿತು ಮೈಕ್ರೋ-ಕ್ರೆಡೆನ್ಷಿಯಲ್ ಶಾರ್ಟ್-ಟರ್ಮ್ ಟ್ರೈನಿಂಗ್ ಪ್ರೋಗ್ರಾಂ ಆಯೋಜಿಸಲಾಗಿದೆ.

ಆಧುನಿಕ ಕೈಗಾರಿಕೆಗಳು, ವಾಣಿಜ್ಯ ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳು, ಸ್ಮಾರ್ಟ್ ಕಟ್ಟಡಗಳು ಹಾಗೂ ಮನೆಗಳಲ್ಲಿ CCTV ಆಧಾರಿತ ಭದ್ರತಾ ವ್ಯವಸ್ಥೆಗಳ ಬಳಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ವಿದ್ಯಾರ್ಥಿಗಳು ಮತ್ತು ಉದ್ಯಮ ಆಸಕ್ತರಿಗೆ ಪ್ರಾಯೋಗಿಕ ಹಾಗೂ ಕೈಗಾರಿಕಾ ಆಧಾರಿತ ತರಬೇತಿ ನೀಡುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ ಎಂದು ಕೋರ್ಸ್ ಕೋ ಆರ್ಡಿನೇಟರ್ ಗಳಾದ ಸಿದ್ದರಾಜ್ ಎಸ್.ಬಿ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ತರಬೇತಿಯಲ್ಲಿ CCTV ತಂತ್ರಜ್ಞಾನದ ಮೂಲಭೂತ ಅಂಶಗಳು, ವಿವಿಧ ಕ್ಯಾಮೆರಾಗಳ ಪರಿಚಯ, DVR/NVR, IP ಕ್ಯಾಮೆರಾ, ಕ್ಯಾಮೆರಾ ಅಳವಡಿಕೆ ಮತ್ತು ಕೇಬಲಿಂಗ್, ನೆಟ್‌ವರ್ಕಿಂಗ್, IP Addressing, Remote Monitoring, Mobile ಮತ್ತು Cloud Access, CCTV ನಿರ್ವಹಣೆ ಹಾಗೂ ದೋಷನಿವಾರಣೆ ಮುಂತಾದ ವಿಷಯಗಳನ್ನು ಪ್ರಾಯೋಗಿಕವಾಗಿ ತರಬೇತಿ ನೀಡಲಾಗುತ್ತದೆ. ಜೊತೆಗೆ, CCTV Installation and Maintenance Business ಆರಂಭಿಸಲು ಅಗತ್ಯವಿರುವ Project Estimation, Costing, Quotation, Marketing, Customer Support ಮತ್ತು Annual Maintenance Contract (AMC) ಕುರಿತ ಉದ್ಯಮಶೀಲತಾ ಕೌಶಲ್ಯಗಳಿಗೂ ತರಬೇತಿ ನೀಡಲಾಗುವುದು ಎಂದು ವಿವರಿಸಿದರು.

ನೋಂದಣಿಗೆ ಸೆಪ್ಟೆಂಬರ್ 11 ಕಡೇ ದಿನ : ಈಗಾಗಲೇ ನೋಂದಣಿ ಪ್ರಕ್ರಿಯೆ ಆರಂಭಗೊಂಡಿದ್ದು, ಸೆಪ್ಟೆಂಬರ್ 11 ರ ಶುಕ್ರವಾರ ತನಕ ಅವಕಾಶವಿದೆ. ಸೆಪ್ಟೆಂಬರ್ 12 ರಿಂದ ಈ ತರಬೇತಿ ಕಾರ್ಯಕ್ರಮ ಶುಭಾರಂಭವಾಗಲಿದೆ. ಒಟ್ಟು 5 ದಿನಗಳು ನಡೆಯಲಿದ್ದು, ಅದು ಶನಿವಾರ ಮತ್ತು ಭಾನುವಾರವಷ್ಟೇ ( ಸೆಪ್ಟೆಂಬರ್ 12, 13 ಹಾಗೂ 19,20 ಮತ್ತು 26) ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ತರಬೇತಿ ನಡೆಯಲಿದೆ. ಸೀಮಿತ ಆಸನಗಳು ಮಾತ್ರ ಲಭ್ಯವಿದ್ದು, ಆಸಕ್ತರು ಶೀಘ್ರವಾಗಿ ನೋಂದಾಯಿಸಿಕೊಳ್ಳುವಂತೆ ಕೋರಿದರು.

ಜಿ.ಎಂ. ವಿಶ್ವವಿದ್ಯಾಲಯದ ಯಾಂತ್ರಿಕ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾದ ಡಾ. ಶ್ರೀನಿವಾಸ ಸಿ.ವಿ. ಅವರ ಮಾರ್ಗದರ್ಶನದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಸಿದ್ದರಾಜ್ ಎಸ್.ಬಿ, ಮಲ್ಲಿಕಾರ್ಜುನ ವಿ. ಬಿದರಿ ಕೋರ್ಸ್ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಯಾರು ಭಾಗವಹಿಸಬಹುದು?

ಡಿಪ್ಲೊಮಾ ವಿದ್ಯಾರ್ಥಿಗಳು, ಎಲ್ಲಾ ವಿಭಾಗಗಳ ಇಂಜಿನಿಯರಿಂಗ್ ವಿದ್ಯಾರ್ಥಿಗಳು, ITI ವಿದ್ಯಾರ್ಥಿಗಳು, ಉದ್ಯೋಗದಲ್ಲಿರುವ ವೃತ್ತಿಪರರು, ಅಧ್ಯಾಪಕರು, ಉದ್ಯಮಿಗಳು ಹಾಗೂ Security Professionals ಈ ತರಬೇತಿಯಲ್ಲಿ ಭಾಗವಹಿಸಬಹುದು. ಈ ತರಬೇತಿಯ ಮೂಲಕ CCTV ತಂತ್ರಜ್ಞಾನದ ಕುರಿತು ಕೇವಲ ಸೈದ್ಧಾಂತಿಕ ಜ್ಞಾನವಲ್ಲದೆ, ನೇರವಾಗಿ ಅಳವಡಿಕೆ, ಸಂರಚನೆ, ನೆಟ್‌ವರ್ಕಿಂಗ್ ಮತ್ತು ನಿರ್ವಹಣೆ ಮಾಡುವ ಪ್ರಾಯೋಗಿಕ ಕೌಶಲ್ಯಗಳನ್ನು ವಿದ್ಯಾರ್ಥಿಗಳು ಮತ್ತು ಭಾಗವಹಿಸುವವರು ಪಡೆಯಲಿದ್ದಾರೆ ಎಂದು ಕೋರ್ಸ್ ಕೋ ಆರ್ಡಿನೇಟರ್ ಮಲ್ಲಿಕಾರ್ಜುನ ವಿ. ಬಿದರಿ ಹೇಳಿದರು.

Head of the Department: Dr. Srinivasa C V, 📞 9448588792 ✉️ hod.me@gmu.ac.in, Course Coordinators:. Mr. Siddaraj S B – 8861545268, Mr. Mallikarjuna V Bidari – 8762259074 ಸಂಪರ್ಕಿಸಲು ಕೋರಿದರು.

ತರಬೇತಿಯ ಪ್ರಮುಖ ವಿಶೇಷತೆಗಳು

100% ಪ್ರಾಯೋಗಿಕ ಮತ್ತು Hands-on ತರಬೇತಿ, CCTV Camera Installation ಮತ್ತು Configuration, DVR ಮತ್ತು NVR Configuration, IP Camera Setup, RJ45 Cable Crimping, Network Switch Configuration, Remote Monitoring ಮತ್ತು Mobile Access, Motion Detection ಮತ್ತು Video Recording, CCTV Troubleshooting ಮತ್ತು Preventive Maintenance, CCTV Installation Business ಕುರಿತು ಉದ್ಯಮಶೀಲತಾ ತರಬೇತಿ, ಜಿ.ಎಂ. ವಿಶ್ವವಿದ್ಯಾಲಯದಿಂದ Micro-Credential Course Completion Certificate ಸಿಗಲಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಮಾರ್ಕೆಟಿಂಗ್ ಅಂಡ್ ಪ್ರಮೋಷನ್ ಡೀನ್ ಡಾ. ವೀರಗಂಗಾಧರ್ ಸ್ವಾಮಿ ಟಿ.ಎಂ, ಅಸಿಸ್ಟೆಂಟ್ ಪಿಆರ್ ಓ ವಸಂತ್ ಕುಮಾರ್ ಜಿ.ಎಸ್ ಉಪಸ್ಥಿತರಿದ್ದರು.

Share

Leave a comment

Leave a Reply

Your email address will not be published. Required fields are marked *

Recent Posts

Recent Comments

No comments to show.
Related Articles