SUDDIKSHANA KANNADA NEWS/ DAVANAGERE/ DATE:14-08-2024
ದಾವಣಗೆರೆ: ಅಹಿಂದ ವರ್ಗಗಳ ಪರವಾಗಿ ಧ್ವನಿ ಎತ್ತಿದ್ದೇ ಅಪರಾಧನಾ? ಸಿಎಂ ಸಿದ್ದರಾಮಯ್ಯರ ತೇಜೋವಧೆ ಮತ್ತು ಸಿಎಂ ಸ್ಥಾನದಿಂದ ಕೆಳಗಿಳಿಸುವಂತೆ ನಡೆಸಿದ ಸಂಚಿನ ಕುರಿತಂತೆ ಮಾತನಾಡುವುದು ದ್ರೋಹದ ಕೆಲಸನಾ? ಎಂದು ಖಾರವಾಗಿ ಪ್ರಶ್ನಿಸಿರುವ ಸ್ವಾಭಿಮಾನಿ ಬಳಗದ ಪ್ರಮುಖರಾದ ಜಿ. ಬಿ. ವಿನಯ್ ಕುಮಾರ್ ಅವರು, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್. ಬಿ. ಮಂಜಪ್ಪ ಒಂದು ಕುಟುಂಬದ ಪರ ಕೆಲಸ ಮಾಡುತ್ತಿದ್ದಾರೆ. ಅಹಿಂದ ವರ್ಗದ ಯಾವುದೇ ನಾಯಕರಿಗೆ ಅನ್ಯಾಯವಾದರೂ ಪ್ರಶ್ನೆ ಮಾಡುತ್ತೇನೆ ಎಂದು ತಿಳಿಸಿದರು.
ಅಹಿಂದ ವರ್ಗದ ಕಾಂಗ್ರೇಸ್ ಜಿಲ್ಲಾಧ್ಯಕ್ಷರಿಗೆ ಹೊನ್ನಾಳಿ ವಿಧಾನಸಭೆ ಟಿಕೆಟ್ , ಲೋಕಸಭಾ ಟಿಕೆಟ್ ಕೊಡಬೇಕಿತ್ತು ಅಹಿಂದ ವರ್ಗಗಳ ಪರವಾಗಿ ಪ್ರೀತಿ ವಿಶ್ವಾಸವಿದ್ದಿದ್ದರೆ 2019 ರಲ್ಲಿ ಕೊನೆಯ 13 ದಿಗಳಲ್ಲಿ ಹಿಂದುಳಿದ ಜಗಳ ಜಿಲ್ಲಾ ಕಾಂಗ್ರೆಸ್
ಪಕ್ಷದ ಅಧ್ಯಕ್ಷ ಹೆಚ್. ಬಿ. ಮಂಜಪ್ಪನವರಿಗೆ ಟಿಕೆಟ್ ಕೊಟ್ಟಿದ್ದರು. ಹಾಗೆಯೇ 2024 ರಲ್ಲೂ ಕೊಡಿಸಬಹುದಿತ್ತು. ಜಿಲ್ಲೆಯಲ್ಲಿ ಕಾಂಗ್ರೆಸ್ ಶಾಸಕರು ಇಲ್ಲದೇ ಇದ್ದಾಗ, ಗೆಲ್ಲುವ ವಾತಾವರಣ ಇಲ್ಲದೇ ಇರುವಾಗ ಅಹಿಂದ ವರ್ಗದವರಿಗೆ ಟಿಕೆಟ್ ನೀಡಿದ್ದಾರೆ, 2014 ರಲ್ಲಿ ಗೆಲ್ಲುವ ವಾತಾವರಣವಿದ್ದಾಗ ಟಿಕೆಟ್ ತಪ್ಪಿಸಲಾಗುತ್ತಿದೆ. ಹಿಂದೊಮ್ಮೆ ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದಿಂದ ಸೈಯದ್ ಸೈಫುಲ್ಲಾ ಅವರ ನಾಮಪತ್ರ ತಿರಸ್ಕೃತಗೊಂಡಿದ್ದಾದರೂ ಯಾಕೆ? ಎಂದು ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನಿಸಿದರು.
ದಾವಣಗರ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಅಲ್ಪಸಂಖ್ಯಾತರ ಮತಗಳ ಸಹಕಾರದೊಂದಿಗೆ ಗೆಲ್ಲುತ್ತಿರುವವರು ಒಮ್ಮೆಯಾದ್ರೂ ಅಲ್ಪಸಂಖ್ಯಾತರಿಗೆ ಟಿಕೆಟ್ ಕೊಡಿಸಿದ್ದಾರೆಯೇ? ಹೊನ್ನಾಳಿ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿಯಾಗಿದ್ದ ಹೆಚ್.ಬಿ. ಮಂಜಪ್ಪನವರಿಗೆ ಟಿಕೆಟ್ ಯಾಕೆ ಕೊಡಿಸಲಿಲ್ಲ? ಸರ್ಕಾರ ಬಂದು ಒಂದೂವರೆ ವರ್ಷಗಳಾದ್ರೂ ನಿಗಮ ಮಂಡಳಿಯಲ್ಲಿ ಅಧ್ಯಕ್ಷ ಸ್ಥಾನ ನೀಡಲಾಗಿದೆಯಾ? ಎಷ್ಟು ಜನ ಅಹಿಂದ ವರ್ಗದವರಿಗೆ ನಿಗಮ ಮಂಡಳಿಯಲ್ಲಿ ಅವಕಾಶ ನೀಡಲಾಗಿದೆ? ಶೇಕಡಾ 80 ರಷ್ಟಿರುವ ಅಹಿಂದ ವರ್ಗಗಳ ಮತಗಳನ್ನು ಪಡೆಯುವವರು ದೂಡಾ ಅಧ್ಯಕ್ಷರನ್ನಾಗಿ ಮಾಡಿದ್ದಾರಾ? ನಾಮಕಾವಸ್ಥೆ ನಾಮನಿರ್ದೇಶಕರುಗಳನ್ನಾಗಿಸಿ ಆಹಿಂದ ವರ್ಗಗಳು ಓಟ್ ಹಾಕಲು ಮಾತ್ರ ಎಂಬುದನ್ನು ತೋರಿಸುತ್ತಿದ್ದಾರೆ ಎಂದು ಆರೋಪಿಸಿದರು.
ರಾಜ್ಯಾದ್ಯಂತ ಶೋಷಿತ ” ಅಹಿಂದ ವರ್ಗಗಳ ಜಾಗೃತಿ ಮತ್ತು ಸಂಘಟನೆ : ಅಹಿಂದ ವರ್ಗಗಳ ಮುಖ್ಯಮಂತ್ರಿಗೆ ಅನ್ಯಾಯವಾಗುತ್ತಿದೆ ಎನ್ನುವಾಗ ನಾನು ಧ್ವನಿ ಎತ್ತಿದ್ದೇನೆ. ಹಾಗೆಯೇ ದಾವಣಗೆರೆ ಜಿಲ್ಲೆಯಲ್ಲಿ ಅಹಿಂದ ವರ್ಗಗಳ ನಾಯಕರುಗಳು ಅವಕಾಶಗಳಿಂದ ವಂಚಿತರಾಗುತ್ತಿದ್ದಾರೆ ಎನ್ನುವಾಗಲೂ ಧ್ವನಿ ಎತ್ತುತ್ತೇನೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಜನಸಂಖ್ಯೆಯಲ್ಲಿ 80 ರಷ್ಟಿರುವ ಅಹಿಂದ ವರ್ಗಗಳಿಂದ ಅತಿ ಹೆಚ್ಚು ಶಾಸಕರಾಗಿ ಆಯ್ಕೆಯಾಗಲು ‘ ಶೋಷಿತರ ಶಕ್ತಿಯನ್ನು ಮನದಟ್ಟು ಮಾಡಲು ರಾಜ್ಯಾದ್ಯಂತ ಶೋಷಿತರ ಅಹಿಂದ ವರ್ಗಗಳ ಜಾಗೃತಿ ಮತ್ತು ಸಂಘಟನೆ ‘ ಮಾಡುತ್ತಿದ್ದೇನೆ. ಧ್ವನಿಯಿಲ್ಲದವರ ಧ್ವನಿಯಾಗಿ ಅವರ ಹಕ್ಕುಗಳನ್ನು ಪಡೆಯಲು ಅದರೊಂದಿಗಿರುತ್ತೇನೆ ಎಂದು ತಿಳಿಸಿದರು.
ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ಗಾಗಿಮುಖ್ಯಮಂತ್ರಿ ಸಿದ್ದರಾಮಯ್ಯ, .ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಅವರು ಸೇರಿದಂತೆ ಕೆಪಿಸಿಸಿ. ಮತ್ತು ಎಐಸಿಸಿ ಮುಖಂಡರಲ್ಲಿ ಮನವಿ ಮಾಡಿದ್ದೆ. ಚಿತ್ರದುಗದಲ್ಲಿ ನಡೆದ ” ಶೋಷಿತರ ಸಮಾವೇಶಕ್ಕೆ ಲೋಕಸಭಾ ಕ್ಷೇತ್ರದಿಂದ ನೂರಾರು ವಾಹನಗಳ ಮೇಲೆ ಹಾಕಲಾಗಿದ್ದ ಫ್ಲೆಕ್ಸ್ ಗಳಲ್ಲಿ ಕಾಂಗ್ರೆಸ್ ಪಕ್ಷದ ಚಿಹ್ನೆ, ಮುಖಂಡರ ಭಾವಚಿತ್ರದೊಂದಿಗೆ ಲೋಕಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ವಿನಯಕುಮಾರ್ ಎಂಬ ಫೋಟೋವೂ ಇತ್ತು. ಆಗೆಲ್ಲಾ ಇಲ್ಲದಿದ್ದ ವಿರೋಧ ಈಗ ಯಾಕೆ? ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದೆ. ಆಗ ಕ್ರಮ ಯಾಕೆ ತೆಗೆದುಕೊಳ್ಳಲಿಲ್ಲ. ನಾನು ಕಾಂಗ್ರೆಸ್ ನಲ್ಲಿ ಸಕ್ರಿಯವಾಗಿಲ್ಲ. ಬೇರೆ ಯಾವ ಪಕ್ಷದೊಂದಿಗೂ ಕೈಜೋಡಿಸಿಲ್ಲ. ದಾವಣಗೆರೆ ಜಿಲ್ಲೆಯಲ್ಲಿ ಬಡ, ಮಧ್ಯಮ ವರ್ಗಗಳ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಲು ತರಬೇತಿ ಕೇಂದ್ರಗಳನ್ನು ಪ್ರಾರಂಭಿಸುತ್ತಿದ್ದೇನೆ. ದಾವಣಗೆರೆ ಜಿಲ್ಲೆ ಸೇರಿದಂತೆ ರಾಜ್ಯದಾದ್ಯಂತ ” ನಮ್ಮ ನಡೆ ಸರ್ಕಾರಿ ಶಾಲೆಗಳ ಕಡೆಗೆ “ಎಂಬ ಸರ್ಕಾರಿ ಶಾಲೆಗಳನ್ನು ಉಳಿಸಿ ಅಭಿಯಾನವನ್ನು ಪ್ರಾರಂಭಿಸುತ್ತಿದ್ದೇನೆ . ರಾಜಕೀಯ ಕ್ಷೇತ್ರದಲ್ಲಿ ನನಗಾದ ಅನ್ಯಾಯ , ಎದುರಿಸಿದ ” ಕುತಂತ್ರಗಳು ” ಬೇರೆ ಯಾರೂ ಅನುಭವಿಸಬಾರದೆಂಬ ಕಾರಣಕ್ಕೆ ಜಾಗೃತಿ ಮೂಡಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದೇನೆ ಎಂದು ಮಾಹಿತಿ ನೀಡಿದರು.
ನನ್ನ ತವರು ದಾವಣಗೆರೆ ಜಿಲ್ಲೆಯ ಕಕ್ಕರಗೊಳ್ಳ ಗ್ರಾಮ. ನಾನು ಚುನಾವಣೆಗಾಗಿ ವಲಸೆ ಬಂದಿಲ್ಲ. ಸಾಧಿಸಲು ರಾಜಕೀಯ ಕ್ಷೇತ್ರಕ್ಕೆ ಕಾಲಿಟ್ಟಿದ್ದೇನೆ. ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷರು ಒಂದು ಕುಟುಂಬದ ಪರವಾಗಿ ಮಾತನಾಡುತ್ತಿದ್ದಾರೆ. ವಿನಯ್ ಕುಮಾರ್ ಸಮಸ್ತ ಶೋಷಿತ ವರ್ಗಗಳ ಪರವಾಗಿ ಮಾತನಾಡುತ್ಕಿದ್ದು, ಈ ಸತ್ಯವನ್ನು ಜನರು ಅರಿತುಕೊಂಡಿದ್ದಾರೆ ಎಂದರು.
ಹಣದ ಹೊಳೆಯ ನಡುವೆಯೂ ದಾವಣಗೆರೆ ಲೋಕಸಭಾ ಕ್ಷೇತ್ರದ ಮತದಾರರು ನನ್ನನ್ನು ಗೆಲ್ಲಿಸಿದ್ದಾರೆ : 2024 ರ ಲೋಕಸಭೆ ಚುನಾವಣೆಯಲ್ಲಿ ನಾನು ಸ್ಪರ್ಧೆ ಮಾಡಿದ್ದಿದ್ದು ಪಕ್ಷೇತರನಾಗಿ. ನಾನು ಗೆಲ್ಲುವಂತಹ ವಾತಾವರಣ ಇತ್ತು. ನನಗೆ ಟಿಕೆಟ್ ತಪ್ಪಿಸಲು ಹಾಗೂ ನನ್ನ ವಿರುದ್ಧ ಜನರಲ್ಲಿ ತಪ್ಪು ಅಭಿಪ್ರಾಯ ಮೂಡಿಸಲು ಸ್ವಾಮಿಗಳು ಮತ್ತು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿಸುವಂತೆ ಮಾಡಿ ಯಾವುದೇ ಮಾತುಕತೆಗೂ ಅವಕಾಶ ನೀಡದ ಸನ್ನಿವೇಶ ಸೃಷ್ಟಿಸಿ ಮುಖ್ಯಮಂತ್ರಿಗಳು ನನಗೆ ಹಾರ, ಶಾಲು ಹಾಕಿದ್ದನ್ನು ಕ್ಷಣಾರ್ಧದಲ್ಲಿ ಫೋಟೋ ತೆಗೆದು ಮಾಧ್ಯಮಗಳಿಗೆ ಬಿಡುಗಡೆ ಮಾಡಲಾಯಿತು . ಮತದಾರರಿಗೆ ಗೊಂದಲವಾಗಬಾರದೆಂಬ ಕಾರಣಕ್ಕೆ ‘ ಬೆಂಗಳೂರಿನಿಂದಲೇ ವಿಡಿಯೋ ಮೂಲಕ ಸ್ಪಷ್ಟನೆ ನೀಡಿದ್ದೆ. ನನ್ನ ಮೇಲೆ ನಂಬಿಕೆಯಿಟ್ಟಿದ್ದ ಮತದಾರ ಸ್ವಾಭಿಮಾನಕ್ಕೆ ಧಕ್ಕೆಯಾಗದಂತೆ ‘ ಪಕ್ಷೇತರ ‘ ನಾಗಿ ಕಣದಲ್ಲಿ ಉಳಿದುಕೊಂಡೆ ಎಂದರು.
27 ಲೋಕಸಭಾ ಕ್ಷೇತ್ರಗಳಲ್ಲಿ ಹಲವಾರು ಪಕ್ಷೇತರರು ಸ್ಪರ್ಧೆ ಮಾಡಿದ್ದರೂ ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಗೆಲುವಿನ ನಾಗಾಲೋಟದಲ್ಲಿದ್ದ ನನ್ನ ಸೋಲಿಸಲು ಮುಖ್ಯಮಂತಿಗಳಿಂದ 4 ಸಮಾವೇಶಗಳನ್ನು ಮಾಡಿಸುತ್ತಾರೆ. ಒಂದೇ ಒಂದು ಮತ ವಿನಯ್ ಕುಮಾರ್ ಗೆ ಹಾಕಬಾರದೆಂದು ಬಹಿರಂಗ ಸಭೆಯಲ್ಲಿ ಸಿಎಂ ಹೇಳುತ್ತಾರೆ . ನನಗೆ ಮತ ಹಾಕಿದರೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಮತ ಹಾಕಿದಂತೆ ಎಂದು ಘೋಷಣೆ ಮಾಡಿ, ಪ್ರಾಮಾಣಿಕವಾಗಿ ಸ್ಪರ್ಧೆಯಲ್ಲಿದ್ದ ನನ್ನ ಸೋಲಿಸಲು ಏನೆಲ್ಲಾ ಮಾಡಲಾಯಿತು ನನ್ನ ಮನೆಯ ಮೇಲೆ ಚುನಾವಣಾ ಆಯೋಗದವರು ದಾಳಿ ನಡೆಸಿದರು . ನನ್ನನ್ನು ಬೆಂಬಲಿಸುತ್ತಿದ್ದವರನ್ನು ದೂರ ಸರಿಯುವಂತೆ ಮಾಡಿದರು. ಇದು ಕುತಂತ್ರವಲ್ಲವೇ ಎಂದು ಪ್ರಶ್ನಿಸಿದರು.
ದಾವಣಗೆರೆ ಲೋಕಸಭಾ ಚುನಾವಣೆ ಇತಿಹಾಸದಲ್ಲಿ ರಾಷ್ಟ್ರೀಯ ಪಕ್ಷಗಳು ನೂರಾರು ಕೋಟಿ ಹಣ ಖರ್ಚು ಮಾಡಿದ್ದು ಸ್ವಾಭಿಮಾನಿ ವಿನಯಕುಮಾರ್ ಸ್ಪರ್ಧೆಯಿಂದಲೇ ಅಲ್ಲವಾ? ಆದರೂ ಸಹ ಜನರ ಅಭಿಪ್ರಾಯದಂತೆ ಚುನಾವಣೆ ಎದುರಿಸಿ ಮತದಾರರಿಗೆ ಆಮಿಷ ಒಡ್ಡದೇ ಸ್ವಾಭಿಮಾನಿ ಮತದಾರರಿಂದ 42907 ಮತಗಳನ್ನು ಗಳಿಸಿದ್ದೇನೆ . ಚುನಾವಣೆಯಲ್ಲಿ ನಾನು ಸಹ ಅಮಿಷಗಳನ್ನು ಒಡ್ಡಿದಿದ್ದರೆ ” ರಾಜಕೀಯ ” ಮಾಡಿದ್ದಿದ್ದರೆ ಲಕ್ಷಕ್ಕಿಂತ ಹೆಚ್ಚುವರಿ ಮತಗಳನ್ನು ಗಳಿಸುವುದು ಕಪ್ಪವಾಗುತ್ತಿರಲಿಲ್ಲ. ಆಗ ಚುನಾವಣಾ ಫಲಿತಾಂಶ ಏನಾಗಿರುತ್ತಿತ್ತು? ಎಂದು ವಾಗ್ದಾಳಿ ನಡೆಸಿದರು.